16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕಕ್ಕೆ ನೇಮಕವಾಗಿರುವ 2024ನೇ ಬ್ಯಾಚ್‌ ಪ್ರೊಬೆಷನರಿ ಐ.ಪಿ.ಎಸ್‌ ಅಧಿಕಾರಿಗಳಿಗೆ ಅಭಿನಂದಿಸಿ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ನೇಮಕವಾಗಿರುವ 2024ನೇ ಬ್ಯಾಚ್‌ ಪ್ರೊಬೆಷನರಿ ಐ.ಪಿ.ಎಸ್‌ ಅಧಿಕಾರಿಗಳು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾದರು.

ನೂತನವಾಗಿ ನೇಮಕಗೊಂಡರುವ ಐಪಿಎಸ್ ಅಧಿಕಾರಿಗಳಾದ
ಕರ್ನಾಟಕ ರಾಜ್ಯದ ಭಾನು ಪ್ರಕಾಶ ಜೆ, ಉತ್ತರ ಪ್ರದೇಶ ರಾಜ್ಯದ ಅನನ್ಯ ಶ್ರೀ ವಾಸ್ತತ್ಸ ಇಶಿತಾ ಗುಪ್ತ,ಮೇಘಾ ಅಗರವಾಲ, ಮಹಾರಾಷ್ಟ್ರ ರಾಜ್ಯದ ಶುಭಂ ಪವಾರ, ಬಿಹಾರ ರಾಜ್ಯದ ರಾನು ಗುಪ್ತ ಅವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಮಹತ್ತರ ಜವಾಬ್ದಾರಿ ಹೊತ್ತು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಈ ಎಲ್ಲಾ ಅಧಿಕಾರಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.

ಈ ವೇಳೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಾದ ಎಂ.ಎ.ಸಲೀಂ, ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ರವಿ ಅವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles