16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

Walking Tips: ಊಟದ ನಂತರ ಎಷ್ಟು ಹೆಜ್ಜೆ ನಡೆಯಬೇಕು? ಇಲ್ಲಿದೆ ಆಯುರ್ವೇದದ ಟಿಪ್ಸ್

Walking Tips: ಇಂದಿನ ವೇಗದ ಜೀವನಶೈಲಿಯಲ್ಲಿ (Lifestyle) ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಪ್ರಮುಖವಾಗಿ ಸಣ್ಣ ಸಣ್ಣ ಅಭ್ಯಾಸಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದರಲ್ಲಿ ಊಟದ ನಂತರ ವಾಕಿಂಗ್ (Walking after dinner) ಮಾಡುವ ಅಭ್ಯಾಸವೂ ಒಂದು.

ತಿಂದ ನಂತರ ಸ್ವಲ್ಪ ನಡೆದುಬಂದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಆಯುರ್ವೇದದ ಪ್ರಕಾರ, ಊಟದ ನಂತರ ಹೆಚ್ಚು ಸಮಯ ವಾಕಿಂಗ್ (Time of walking after dinner) ಮಾಡುವುದು ಒಳಿತಲ್ಲ..! ಹಾಗಾಗಿ, ಊಟದ ನಂತರ ಎಷ್ಟು ಹೆಜ್ಜೆ ನಡೆಯಬೇಕು? ಹೇಗೆ ನಡೆಯಬೇಕು? ಎಂಬುದಕ್ಕೂ ಸ್ಪಷ್ಟವಾದ ಮಾರ್ಗಸೂಚಿಗಳಿವೆ. ಆ ಕುರಿತ ವರದಿ ಇಲ್ಲಿದೆ:

ಊಟದ ನಂತರ ವಾಕಿಂಗ್ ಮಾಡುವ ಅಭ್ಯಾಸವು…

ಆರೋಗ್ಯದ ಬಗ್ಗೆ ಕಾಳಜಿ ಇರುವವರು ಊಟದ ನಂತರ ಹೊಟ್ಟೆ ಹಗುರವಾಗಲಿ, ಆಹಾರ ಬೇಗ ಜೀರ್ಣವಾಗಲಿ ಎಂಬ ಉದ್ದೇಶದಿಂದ ವಾಕಿಂಗ್ ಮಾಡುತ್ತಾರೆ. ಕೆಲವರು ಐದು ನಿಮಿಷ, ಕೆಲವರು ಅರ್ಧ ಗಂಟೆ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ನಡೆದುಬರುತ್ತಾರೆ. ಆದರೆ ಈ ಅಭ್ಯಾಸ ಎಲ್ಲರಿಗೂ ಒಂದೇ ರೀತಿ ಪ್ರಯೋಜನಕಾರಿಯೇ ಎಂಬ ಪ್ರಶ್ನೆಗೆ ಆಯುರ್ವೇದ ಸ್ಪಷ್ಟ ಉತ್ತರ ನೀಡುತ್ತದೆ. ಆಯುರ್ವೇದವು ದೇಹದ ಒಳಗಿನ ಶಕ್ತಿಸಂತುಲನವನ್ನು ಆಧರಿಸಿ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸಲಹೆ ನೀಡುತ್ತದೆ.

ಆಯುರ್ವೇದದ ದೃಷ್ಟಿಯಲ್ಲಿ ಊಟದ ನಂತರದ ನಡಿಗೆ…

ಆಯುರ್ವೇದದ ಪ್ರಕಾರ, ಊಟವಾದ ತಕ್ಷಣ ದೇಹದ ಶಕ್ತಿ ಜೀರ್ಣಕ್ರಿಯೆಯತ್ತ ಕೇಂದ್ರೀಕೃತವಾಗಿರಬೇಕು. ಈ ವೇಳೆ ಅತಿಯಾದ ಚಟುವಟಿಕೆ ಮಾಡಿದರೆ ಜೀರ್ಣಾಂಗಗಳಿಗೆ ಅಗತ್ಯವಿರುವ ಶಕ್ತಿ ಬೇರೆ ಕಡೆ ಹರಿದುಹೋಗುತ್ತದೆ. ಹೀಗಾಗಿ ಊಟದ ನಂತರ ಕೇವಲ ಚುಟುಕಾದ ನಡಿಗೆ ಸಾಕು ಎಂದು ಆಯುರ್ವೇದ ಹೇಳುತ್ತದೆ. ಇದನ್ನೇ ಶತಪಾವಲಿ ಎಂದು ಕರೆಯಲಾಗುತ್ತದೆ.

ಮುಂದುವರೆದು, ಚರಕ ಸಂಹಿತೆ ಸೂತ್ರಸ್ಥಾನದ ಪ್ರಕಾರ, ಊಟದ ನಂತರ ಶತಪಾವಲಿ ಅಂದರೆ ಸುಮಾರು 100 ಹೆಜ್ಜೆಗಳ ನಡಿಗೆ ಮಾಡಬೇಕು ಎಂದು ಹೇಳಲಾಗಿದೆ. ಇಲ್ಲಿ ಶತ ಎಂದರೆ 100 ಮತ್ತು ಪಾವಲಿ ಎಂದರೆ ಹೆಜ್ಜೆಗಳು. ಈ 100 ಹೆಜ್ಜೆಗಳ ನಡಿಗೆ ಜಠರಾಗ್ನಿ ಎಂಬ ಜೀರ್ಣಶಕ್ತಿಯನ್ನು ಪ್ರಚೋದಿಸಲು ಸಾಕಾಗುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ. ಇದು ಆಹಾರವನ್ನು ಸರಿಯಾಗಿ ಚಯಾಪಚಯಗೊಳಿಸಲು ಸಹಕಾರಿಯಾಗುತ್ತದೆ.

100 ಹೆಜ್ಜೆಗಳ ನಡಿಗೆಯ ವೈಜ್ಞಾನಿಕ ಅರ್ಥ…

ಆಯುರ್ವೇದದ ಈ ತತ್ವವನ್ನು ಆಧುನಿಕ ವಿಜ್ಞಾನವೂ ಬೆಂಬಲಿಸುತ್ತದೆ. ಊಟದ ನಂತರ ಅಲ್ಪಾವಧಿಯ ನಡಿಗೆ ದೇಹದ ಮೆಟಾಬಾಲಿಕ್ ಥರ್ಮಿಕ್ ರೇಟ್ ಅನ್ನು ಸ್ವಲ್ಪ ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಜೊತೆಗೆ ಹೊಟ್ಟೆ ಉಬ್ಬರ, ಅಜೀರ್ಣ, ಜಠರದುರಿ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ.

ಹೆಚ್ಚು ಹೊತ್ತು ವಾಕಿಂಗ್ ಮಾಡಿದರೆ ಏನಾಗುತ್ತದೆ?

ಊಟದ ನಂತರ ತುಂಬಾ ಹೊತ್ತು ಅಥವಾ ವೇಗವಾಗಿ ವಾಕಿಂಗ್ ಮಾಡಿದರೆ, ದೇಹದ ಶಕ್ತಿ ಜೀರ್ಣಕ್ರಿಯೆಯಿಂದ ದೂರ ಸರಿಯುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ, ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಕೆಲವರಿಗೆ ಆಸಿಡಿಟಿ, ದಣಿವು ಅಥವಾ ಅಸ್ವಸ್ಥತೆಯ ಅನುಭವವೂ ಆಗಬಹುದು. ಆದ್ದರಿಂದ ಊಟದ ನಂತರದ ವಾಕಿಂಗ್ ಅನ್ನು ವ್ಯಾಯಾಮದ ರೂಪದಲ್ಲಿ ನೋಡಬಾರದು.

ವಜ್ರಾಸನ ಮತ್ತು ಸೌಮ್ಯ ಚಟುವಟಿಕೆಗಳು:

ಆಯುರ್ವೇದವು ಊಟದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳುವುದನ್ನೂ ಶಿಫಾರಸು ಮಾಡುತ್ತದೆ. ಇದು ಹೊಟ್ಟೆಯ ಮೇಲೆ ಒತ್ತಡವಿಲ್ಲದೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಕ್ಕಳ ವಿಷಯದಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ಊಟದ ನಂತರ ಓಡಾಟ, ಜಿಗಿತ ಅಥವಾ ತೀವ್ರ ಆಟಗಳನ್ನು ತಪ್ಪಿಸಿ, ಕುಳಿತುಕೊಂಡೇ ಆಡುವ ಆಟಗಳು, ಓದು ಅಥವಾ ಕಥೆ ಹೇಳುವಂತಹ ಸೌಮ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು.

ಮಕ್ಕಳು ಮತ್ತು ವಯಸ್ಕರಿಗೆ ಒಂದೇ ನಿಯಮವೇ…

ಮಕ್ಕಳಾಗಲಿ, ವಯಸ್ಕರಾಗಲಿ, ಊಟದ ನಂತರ ದೇಹಕ್ಕೆ ವಿಶ್ರಾಂತಿ ಮತ್ತು ಸೌಮ್ಯ ಚಲನೆ ಅಗತ್ಯ. ಆದರೆ ಮಕ್ಕಳಲ್ಲಿ ಜೀರ್ಣಶಕ್ತಿ ಸ್ವಲ್ಪ ವಿಭಿನ್ನವಾಗಿರುವುದರಿಂದ, ಅವರಿಗೆ ಅತಿಯಾದ ಚಟುವಟಿಕೆ ಇನ್ನಷ್ಟು ತೊಂದರೆ ಕೊಡಬಹುದು. ಹೀಗಾಗಿ ಆಯುರ್ವೇದವು ಎಲ್ಲ ವಯಸ್ಸಿನವರಿಗೂ ಊಟದ ನಂತರ ಶಾಂತತೆ ಮತ್ತು ಸಮತೋಲನವನ್ನು ಒತ್ತಿ ಹೇಳುತ್ತದೆ.

ಆಧುನಿಕ ಜೀವನಶೈಲಿಗೆ ಆಯುರ್ವೇದದ ಸಂದೇಶ

ಇಂದಿನ ಜೀವನದಲ್ಲಿ ಫಿಟ್‌ನೆಸ್ ಎಂಬ ಹೆಸರಿನಲ್ಲಿ ಎಲ್ಲ ಸಮಯದಲ್ಲೂ ವ್ಯಾಯಾಮ ಮಾಡಬೇಕು ಎಂಬ ಭಾವನೆ ಇದೆ. ಆದರೆ ಆಯುರ್ವೇದವು ಸಮಯ, ಸಂದರ್ಭ ಮತ್ತು ದೇಹದ ಸ್ಥಿತಿಗೆ ಅನುಗುಣವಾಗಿ ಚಟುವಟಿಕೆ ಇರಬೇಕು ಎಂದು ಹೇಳುತ್ತದೆ. ಊಟದ ನಂತರ ಕೇವಲ 100 ಹೆಜ್ಜೆಗಳ ನಡಿಗೆ ಈ ತತ್ವದ ಉತ್ತಮ ಉದಾಹರಣೆ. ಇದು ಅತಿಯಾಗಿಯೂ ಅಲ್ಲ, ಕಡಿಮೆಯಾಗಿಯೂ ಅಲ್ಲ.

ಒಟ್ಟಾರೆಯಾಗಿ, ಊಟದ ನಂತರ ಜೀರ್ಣಕ್ರಿಯೆ ಸುಧಾರಿಸಲಿ ಎಂಬ ಉದ್ದೇಶದಿಂದ ದೀರ್ಘ ವಾಕಿಂಗ್ ಮಾಡುವ ಬದಲು, ಆಯುರ್ವೇದ ಸೂಚಿಸುವಂತೆ ಚುಟುಕಾದ 100 ಹೆಜ್ಜೆಗಳ ನಡಿಗೆ ಅಥವಾ ವಜ್ರಾಸನವನ್ನು ರೂಢಿಸಿಕೊಳ್ಳುವುದು ಉತ್ತಮ. ಇದು ದೇಹಕ್ಕೆ ಸಹಜವಾದ ರೀತಿಯಲ್ಲಿ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ದೀರ್ಘಕಾಲೀನ ಆರೋಗ್ಯಕ್ಕೂ ಸಹಕಾರಿ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles