17.5 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ಪಿ ಜಿ ಗಳ ಪರಿಶೀಲನೆ ಹಾಗೂ ಶುಚಿತ್ವ ಕಾಪಾಡದ ಪಿಜಿ ಗಳ ಅಡುಗೆ ಕೋಣೆಗೆ ಬೀಗ — ಡಿಲ್ಜಿತ್ ಕುಮಾರ್.

ಬೆಂಗಳೂರು : ಕೇಂದ್ರ ನಗರಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ನಗರಪಾಲಿಕ ಅಪರಾಯುಕ್ತರಾದ ದಲಿಜತ್ ಕುಮಾರ ನೇತೃತ್ವದಲ್ಲಿ ಸಿವಿ ರಾಮನ್ ನಗರ ಹಾಗೂ ಶಾಂತಿನಗರ ವ್ಯಾಪ್ತಿಯಲ್ಲಿ ವಸತಿಗೃಹಗಳನ್ನು (ಪಿ ಜಿ ) ಪರಿಶೀಲನೆ ನಡೆಸಲಾಯಿತು.

ಉದ್ದಿಮೆ ಪರವಾನಿಗೆ ಪಡೆಯದ ಹಾಗೂ ಶುಚಿತ್ವ ಕಾಪಾಡದ ಸುರಕ್ಷಿತ ಸುರಕ್ಷಾ ಕ್ರಮ ಅಳವಡಿಸಿಕೊಳ್ಳದ ಹಲವು ಪಿಜಿಗಳಿಗೆ ತಳದಲ್ಲಿಯೇ ನೋಟಿಸ್ ನೀಡಲಾಯಿತು. ಶುಚಿತ್ವ ಕಾಪಾಡದ ಕೆಟ್ಟು ಹೋಗಿರುವ ತರಕಾರಿ ಉಪಯೋಗಿಸುತ್ತಿರುವ ಅಡಿಗೆ ಕೋಣೆಯನ್ನು ಸ್ಥಳ ಮಹಜರ ವರದಿಯೊಂದಿಗೆ ಮುಚ್ಚಲಾಯಿತು.

ಪಿ ಜಿ ಒಳಗೆ ಬಿಟ್ಟುಕೊಳ್ಳದ ಮಾಲೀಕರು

ಶಾಂತಿನಗರದ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪಿಜಿಗೆ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ಗಾರ್ಡನ್ ಪಿಜಿಯವರು ಸುಮಾರು 20 ನಿಮಿಷಗಳ ಕಾಲ ಒಳಗೆ ಹೋಗಲು ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ತದನಂತರ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ನಡೆಸಲಾಯಿತು.

ಪರವಾನಿಗೆ ಪಡೆಯದ ಕಾರಣ ಮೇಲ್ಚಾವಣಿ ಅನಧಿಕೃತವಾಗಿ ಗೆ ಕೋಣೆ ನಡೆಸುತ್ತಿರುವ ಕಾರಣ ಮುಂದಿನ ತಿಂಗಳಿಂದ ಸದರಿ ಪಿಜಿಯನ್ನು ಬೀಗ ಮುದ್ರೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ. ಗೋಡೆಗೆ ನೋಟಿ, ಸಂಸಲಾಗಿದೆ.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಕೇಂದ್ರ ನಗರ ಪಾಲಿಕ ಆಯುಕ್ತರಾದ ರಾಜೇಂದ್ರ ಚೋಳನ್ ಮತ್ತು ಕೇಂದ್ರ ನಗರ ಅಪರಾಯುಕ್ತಾರಾದ ದಲ್ಜ್ ತ್ ಕುಮಾರ್ ಹಾಗೂ ಕಿರಿಯ ಆರೋಗ್ಯ ಅಧಿಕಾರಿ ಆದ ಸಂದೀಪ್ ಶಹಾಪುರ ದರ್ಶನಾಪುರ ಮತ್ತು ಇನ್ನುಳಿದ ಆರೋಗ್ಯ ಹಿರಿಯ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles