16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮಧ್ಯಾಹ್ನ 3 ಗಂಟೆ, 15 ನಿಮಿಷ… ಕಡೆಗೂ ಈಡೇರಲಿಲ್ಲ ಕಾನ್ಫಿಡೆಂಟ್​ ಗ್ರೂಪ್​ ಮುಖ್ಯಸ್ಥ ರಾಯ್​​ ಕೊನೆ ಆಸೆ! Roy Last Wish

ಬೆಂಗಳೂರು : ಶುಕ್ರವಾರ (ಜ.30) ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್​ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ (Confident Group Chairman CJ Roy)​​ ಆತ್ಮಹತ್ಯೆಗೆ ಶರಣಾದ ಪ್ರಕರಣ ಸದ್ಯ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ರಾಯ್​ ಕಚೇರಿಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ರಾಜಕಾರಣಿಗಳು, ಸ್ಟಾರ್​ ನಟ-ನಟಿಯರ ಹೆಸರುಗಳಿವೆ ಎಂದು ಹೇಳಲಾಗಿದೆ.

ಕಡೆಗೂ ಈಡೇರದೆ ಆಸೆಪ್ರಸ್ತುತ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಖಾಕಿ ಪಡೆ, ಹಲವು ಆಯಾಮಗಳಲ್ಲಿ ಕೇಸ್​ ಅನ್ನು ಭೇದಿಸುತ್ತಿದೆ. ಮತ್ತೊಂದೆಡೆ, ಕೇರಳ ಚುನಾವಣೆಗೆ ರಾಯ್​ ಫಂಡಿಂಗ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸರು ರಾತ್ರಿಯಿಡೀ ತನಿಖೆ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ, ಮತ್ತೊಂದು ಸಂಗತಿ ಹೊರಬಿದ್ದಿದ್ದು, ರಾಯ್ ಸಾವಿಗೂ ಮುನ್ನ ಆಡಿದ ಮಾತೊಂದು ಕಡೆಗೂ ಈಡೇರದೆ ಹೋಗಿದೆ.

ಕ್ಯಾಬಿನ್​ಗೆ ಹೋದ ರಾಯ್​…ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಆತ್ಮಹತ್ಯೆಗೆ ಶರಣಾಗುವ ಮೊದಲು ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿದ್ದರಂತೆ. ನಿನ್ನೆ (ಜ.30) ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಹೇಳಿಕೆ ನೀಡಲು ರಾಯ್ ಮತ್ತು ಕಾನ್ಫಿಡೆಂಟ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಟಿಎ ಜೋಸೆಫ್ ಕಚೇರಿಗೆ ಹೋಗಿದ್ದರು. ಅಲ್ಲಿಂದ ಬಂದ ಅವರು, ತಮ್ಮ ತಾಯಿಯೊಂದಿಗೆ ಮಾತನಾಡಬೇಕು ಎಂದಿದ್ದರಂತೆ. ಹೀಗೆಂದ ಕೆಲವು ಸಮಯದ ಬಳಿಕ ತಮ್ಮ ಕ್ಯಾಬಿನ್​ಗೆ ಹೋದ ರಾಯ್​, ಮತ್ತೆ ವಾಪಾಸ್​ ಬರಲೇ ಇಲ್ಲ.

15 ನಿಮಿಷ ಬಳಿಕ…ತಮ್ಮ ಕ್ಯಾಬಿನ್​ಗೆ ರಾಯ್​ ಹೋಗ್ತಿದ್ದಂತೆ ಅವರಿಗೆ ಸಮಯ ಕೊಟ್ಟ ಜೋಸೆಫ್ ಹೊರಗೆ ಹೋದರು. ಆದರೆ, ಸ್ವಲ್ಪ ಸಮಯದ ನಂತರ ಕ್ಯಾಬಿನ್​ನೊಳಗೆ ಹೋಗಲು ಬಯಸಿದಾಗ ರಾಯ್ ಅವರ ಭದ್ರತಾ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಕಾರಣ, ಸರ್​ ಯಾರನ್ನೂ ಒಳಗೆ ಬಿಡಬೇಡಿ ಎಂದಿದ್ದರಂತೆ. ಮತ್ತೆ ಬಾಗಿಲು ಬಡಿದ ಜೋಸೆಫ್​, ಯಾವಾಗ ರಾಯ್​ ಅವರಿಂದ ಏನೂ ಪ್ರತಿಕ್ರಿಯೆ ಬರಲಿಲ್ಲವೋ, ಕೂಡಲೇ ಡೋರ್​ ಅನ್ನು ಬಲವಂತವಾಗಿ ಒಡೆದು ನೋಡಿದಾಗ, ಅವರು ಕುರ್ಚಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ರಾಯ್​ ಅವರ ಸಾವಿನ ಪ್ರಕರಣ ಕುರಿತು ಹೆಚ್ಚಿನ ವಿವರಗಳನ್ನು ಟಿಎ ಜೋಸೆಫ್, ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಫೆ.01ರಂದು ಅಂತ್ಯಕ್ರಿಯೆಐಟಿ ಅಧಿಕಾರಿಗಳ ರೇಡ್​, ತೀವ್ರ ಮಾನಸಿಕ ಒತ್ತಡದಿಂದ ರಾಯ್ ಸಾವಿಗೆ ಶರಣಾಗಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬ ಮತ್ತು ಕಂಪನಿಯಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ರಾಯ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ (ಫೆ.01) ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದು, ಬೆಂಗಳೂರಿನ ಕೋರಮಂಗಲದಲ್ಲಿರುವ ವೈಟ್ ಹೌಸ್‌ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನಷ್ಟು ಓದಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles