16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ತಾಳಿಕೋಟೆ ನಗರದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಕ್ಷೇಮಾಭಿವೃದ್ಧಿ ಅಭಿವೃದ್ಧಿ ಸಂಘ ಹಾಗೂ ತಾಲೂಕ ನಿಜಶರಣ ಅಂಬಿಗರ ಚೌಡಯ್ಯನವರ ತಾಲೂಕ ಸಮಿತಿ ಒತ್ತಾಯ–ಐದನೇ ದಿನ ಧರಣಿ ಸತ್ಯಾಗ್ರ ತೀವ್ರ .


ತಾಳಿಕೋಟೆ ನಗರದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಕ್ಷೇಮ ಅಭಿವೃದ್ದಿ ಸಂಘ (ರಿ ) ಹಾಗೂ ತಾಲೂಕು ಸಮಿತಿ ವತ್ತಾಯ – 5ನೇ ದಿನ ಧರಣಿ ಸತ್ಯಾಗ್ರಹ ತೀವ್ರ
ತಾಳಿಕೋಟೆ :
ವಿಜಯಪುರ : ಜಿಲ್ಲೆಯ ತಾಳಿಕೋಟೆ ತಾಲೂಕಿನ ತಾಳಿಕೋಟೆ ನಗರದಲ್ಲಿ ಪ್ರಜಾಸೌಧವನ್ನು ನಗರದಿಂದ ನಾಲ್ಕು ಕಿಲೋಮೀಟರ್ ದೂರ ಮೈಲೇಶ್ವರ ಗ್ರಾಮದ ಸಮೀಪ ನಿರ್ಮಿಸಲು ಸರ್ಕಾರ ಮುಂದಾಗಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಜಾಸೌಧವನ್ನು ದೂರದಲ್ಲಿ ನಿರ್ಮಿಸಿದರೆ ಸುತ್ತಮುತ್ತಲಿನ ಗ್ರಾಮಗಳ ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರಿಗೆ ಸಂಚಾರದ ಸಮಸ್ಯೆ ಎದುರಾಗುತ್ತದೆ ಎಂದು ವಿವಿಧ ಸಮಾಜದ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಬಸ್ ಮತ್ತು ಆಟೋ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಖಾಸಗಿ ವಾಹನಗಳನ್ನು ಬಳಸಬೇಕಾಗಿ ಬರುವ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಹೋಗುವಾಗ ಹಾಗೂ ಬರುವಾಗ ಸುಮಾರು 100 ರೂಪಾಯಿವರೆಗೆ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕ್ಷೇಮಾಭಿವೃದ್ಧಿ ಸಂಘ (ರಿ), ತಾಳಿಕೋಟೆ ಇವರ ನೇತೃತ್ವದಲ್ಲಿ 5ನೇ ದಿನದ ಧರಣಿ ಸತ್ಯಾಗ್ರಹ ನಡೆಯಿತು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಯಿತು.
ಪರಶುರಾಮ ತಂಗಡಗಿ ಅವರ ನೇತೃತ್ವದಲ್ಲಿ ಮೆರವಣಿಗೆ ಶರಣರ ದೇವಸ್ಥಾನ, ಕತ್ರಿ ಬಜಾರ್, ಶಿವಾಜಿ ಚೌಕ್ ಹಾಗೂ ರಾಣಾ ಪ್ರತಾಪ್ ಸಿಂಹ ಮಾರ್ಗವಾಗಿ ಬಿಜಾಪುರ ಸರ್ಕಲ್‌ನ ಬಸವೇಶ್ವರ ಚೌಕಿಗೆ ತಲುಪಿ ಧರಣಿ ಧರಣಿ ಸತ್ಯಾಗ್ರ ದಿನವಿಡಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮ ತಂಗಡಗಿ ಅವರು, “ನಗರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಪ್ರಜಾಸೌಧ ನಿರ್ಮಿಸಿದರೆ ಪ್ರತಿಯೊಬ್ಬ ಪ್ರಜೆಗೂ ತೊಂದರೆಯಾಗುತ್ತದೆ. ನಗರದಲ್ಲೇ ನಾಲ್ಕು ಕಡೆ ಜಾಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಪ್ರಜಾಸೌಧ ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ,” ಎಂದು ಹೇಳಿದರು. ಅವರು ಸ್ಥಳೀಯ ಶಾಸಕರಾದ ಅಪ್ಪಾಜಿ ನಾಡಗೌಡ ಅವರಿಗೆ ವೇದಿಕೆ ಮುಖಾಂತರ ಮನವಿ ಮಾಡಿಕೊಳ್ಳಲಾಯಿತು. ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಕುಚಬಾಳ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿ, ಶಾಸಕರು ಜನರ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಶಶಿಕಾಂತ್ ಮೂಕಿಹಾಳ ಅವರು, “ಬೇಡಿಕೆ ಈಡೇರದಿದ್ದರೆ 24×7 ಉಗ್ರ ಹೋರಾಟ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು.
ಧರಣಿ ಸತ್ಯಾಗ್ರಹದಲ್ಲಿ ಮಲ್ಲು ನಾಯ್ಕೋಡಿ, ಕಾಶಿನಾಥ್ ಮುರಾಳ್, ಬಸವರಾಜ್ ಯಡೆಹಳ್ಳಿ, ಮಲ್ಲಿಕಾರ್ಜುನ ನಾಟಿಕಾರ್, ಮಲ್ಲಿಕಾರ್ಜುನ ಭೀಮಣ್ಣ ತಳವಾರ್ ಸೇರಿದಂತೆ ಅನೇಕ ಮುಖಂಡರು ದಿನವಿಡೀ ಭಾಗವಹಿಸಿದ್ದರು.
ವರದಿಗಾರರು: ಶ್ರೀ ವಿಜಯಕುಮಾರ್

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles