17.5 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮನೆ-ಮನೆಗೆ ತೆರಳಿ ಕರ ಪಾವತಿಗೆ ಜಾಗೃತಿ ಮೂಡಿಸಿದ ಇಒ ನಿಂಗಪ್ಪ ಮಸಳಿಯವರು

ಮನೆ-ಮನೆಗೆ ತೆರಳಿ ಕರ ಪಾವತಿಗೆ ಜಾಗೃತಿ ಮೂಡಿಸಿದ ಇಒ ನಿಂಗಪ್ಪ ಮಸಳಿ

ಚ.ಕಿತ್ತೂರು: ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆ ಹಾಗೂ ಸಾರ್ವಜನಿಕರಲ್ಲಿ ಕರ ಪಾವತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಪಂಚಾಯತ್ ಚ.ಕಿತ್ತೂರಿನ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಅವರು ನಿಚ್ಚಣಕಿ ಹಾಗೂ ಬೈಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ-ಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಮನೆಕರವನ್ನು ಸಕಾಲದಲ್ಲಿ ಪಾವತಿಸುವಂತೆ ಮನವಿ ಮಾಡಿದರು.
ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಹಲವಾರು ಸಾರ್ವಜನಿಕರು ಸ್ಥಳದಲ್ಲೇ ತಮ್ಮ ಮನೆಕರವನ್ನು ಪಾವತಿಸಿದರು.

ಮನೆಕರವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಆದಾಯ ಲಭ್ಯವಾಗಲಿದ್ದು, ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ (ಪಂ.ರಾ.) ವಿಜಯ ಪಾಟೀಲ್, ಸಂಗನಗೌಡ ಹಂದ್ರಾಳ, ಪಿಡಿಓ ಕುಸುಮಾ ವೈ, ಈಶ್ವರ ಹಡಪದ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles