17.5 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಚನ್ನಮ್ಮನ ಕಿತ್ತೂರಿನ ತಾಲೂಕು ದಂಡಾಧಿಕಾರಿ ಕಚೇರಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ ಪರಮೇಶ್ವರ ಬೇಟಿ..

ಚನ್ನಮ್ಮನ ಕಿತ್ತೂರು: ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ ಪರಮೇಶ್ವರವರು ಬೆಳಗಾವಿ ಜಿಲ್ಲಾ ಪ್ರವಾಸದ ವೇಳೆ ಚನ್ನಮ್ಮನ ಕಿತ್ತೂರಿಗೆ ಭೇಟಿ ನೀಡಿ, ಸ್ವಾತಂತ್ರ್ಯ ಹೋರಾಟದ ವೀರ ಮಹಿಳೆ ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ ಪರಮೇಶ್ವರ ಬುಧವಾರ ಚನ್ನಮ್ಮನ ಕಿತ್ತೂರು ಪಟ್ಟಣದ ತಾಲೂಕು ದಂಡಾಧಿಕಾರಿ ಕಚೇರಿಗೆ ಭೇಟಿ ನೀಡಿದರು.


ಕಂದಾಯ ಇಲಾಖೆ ಕಚೇರಿಗೆ ಸಂಬಂಧಪಟ್ಟಂತೆ ದಾಖಲಾತಿಗಳು ಬಯೋಮೆಟ್ರಿಕ್ ಸಿಸ್ಟಮ್ ಪ್ರಾರಂಭಿಸುತ್ತಿದ್ದು ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗದಂತೆ ತಮ್ಮ ದಾಖಲಾತಿಗಳನ್ನು ಅತಿ ಶೀಘ್ರವಾಗಿ ಪಡೆಯುವ ನಿಟ್ಟಿನಲ್ಲಿ ಕಂಪ್ಯೂಟರ ಡಿಜಿಟಲ್ ಸಿಸ್ಟಮ್ ನಲ್ಲಿ ದಾಖಲಾತಿಗಳನ್ನು ಪಡೆದುಕೊಳ್ಳುವ ರೀತಿಯಲ್ಲಿ ಈಗಾಗಲೇ ಚನ್ನಮ್ಮನ ಕಿತ್ತೂರು ದಂಡಾಧಿಕಾರಿಗಳ ಕಚೇರಿಯಲ್ಲಿ ಪ್ರಾರಂಭಗೊಂಡಿದ್ದು ಇದನ್ನು ವೀಕ್ಷಿಸಲು ಆಗಮಿಸಿದ್ದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಜಿ ಪರಮೇಶ್ವರ್ ತಿಳಿಸಿದರು.

ರೆವಿನ್ಯೂ ಕಮಿಷನರ್ ಶ್ರೀಮತಿ ಮೀನಾ. ಕಂದಾಯ ಇಲಾಖೆ ಪಿ ಆರ್ ಎಸ್ ರಾಜೇಂದ್ರ ಕಠಾರಿಯಾ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್. ಡಿಸಿಸಿ ಬ್ಯಾಂಕ್ ಸದಸ್ಯ ನಾನಾಸಾಹೇಬ ಪಾಟೀಲ. ತಹಸಿಲ್ದಾರ ಕಲಗೌಡ ಪಾಟೀಲ.ಡಿಎಸ್‌ಪಿ ಡಾ. ವೀರಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles