16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮೆಜೆಸ್ಟಿಕ್ ರೈಲ್ವೆ ಠಾಣೆಯಲ್ಲೇ ಕರ್ತವ್ಯನಿರತ ಗರ್ಭಿಣಿ ಮಹಿಳಾ ಪೇದೆ ಮೇಲೆ ಭೀಕರ ಹಲ್ಲೆ: ಆರೋಪಿ ಬಂಧನ

ಬೆಂಗಳೂರು: ನಗರದ ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ರೈಲ್ವೆ ಪೊಲೀಸ್ ಠಾಣೆಯಲ್ಲೇ ಕರ್ತವ್ಯದಲ್ಲಿದ್ದ ಗರ್ಭಿಣಿ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಿನ್ನೆ ಬೆಳಗಿನ ಜಾವ ನಡೆದಿದೆ.

​ಹಲ್ಲೆಗೊಳಗಾದ ಪೇದೆ ಶಿಲ್ಪಾ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

​ಘಟನೆಯ ವಿವರ: ನಿನ್ನೆ ಬೆಳಗಿನ ಜಾವ ಸುಮಾರು 5 ಗಂಟೆಯ ಸುಮಾರಿಗೆ ಠಾಣೆಗೆ ಬಂದಿದ್ದ ಆರೋಪಿ, ದೂರು ನೀಡಬೇಕೆಂದು ಹೇಳಿದ್ದಾನೆ. ಆ ವೇಳೆ ಠಾಣೆಯಲ್ಲಿದ್ದ ಪೇದೆ ಶಿಲ್ಪಾ, “ಈಗ ಠಾಣೆಯಲ್ಲಿ ಹಿರಿಯ ಅಧಿಕಾರಿಗಳು ಯಾರೂ ಇಲ್ಲ, ಬೆಳಿಗ್ಗೆ ಬಂದು ದೂರು ನೀಡಿ” ಎಂದು ತಿಳಿಸಿ ವಾಪಸ್ ಕಳುಹಿಸಿದ್ದರು.

​ಆದರೆ ಅಲ್ಲಿಂದ ನಿರ್ಗಮಿಸಿದ್ದ ಆರೋಪಿ, ಕೆಲವೇ ನಿಮಿಷಗಳಲ್ಲಿ ಮಾರಕಾಸ್ತ್ರದೊಂದಿಗೆ ಮತ್ತೆ ಠಾಣೆಗೆ ಹಿಂತಿರುಗಿದ್ದಾನೆ. ಠಾಣೆಯಲ್ಲಿದ್ದ ಶಿಲ್ಪಾ ಅವರ ಮೇಲೆ ಕಬ್ಬಿಣದ ರಾಡ್‌ನಿಂದ ತಲೆ ಹಾಗೂ ದೇಹದ ಭಾಗಗಳಿಗೆ ಏಳೆಂಟು ಬಾರಿ ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

​ಆರೋಪಿ ಬಂಧನ: ದಾಳಿಯಿಂದ ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಶಿಲ್ಪಾ ಅವರ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸಹೋದ್ಯೋಗಿಗಳು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಯ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿಗೆ ಖಚಿತ ಕಾರಣ ಏನೆಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಸದಾ ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್‌ನ ರೈಲ್ವೆ ಪೊಲೀಸ್ ಠಾಣೆಯಲ್ಲೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಹಾಗೂ ಪೊಲೀಸ್ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles