16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಹಿರಿಯ ನಟ ಡಾ.ಅನಂತನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ:ಕರ್ನಾಟಕ ವಿಧಾನಪರಿಷತ್ತು ಉಪಸಭಾಪತಿ ಡಾ.ಉಮಾಶ್ರೀ ಅಭಿನಂದನೆ

‎ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ 2024ನೇ ಸಾಲಿನ “ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ”ಗೆ  ಆಯ್ಕೆಯಾಗಿರುವ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಅನಂತನಾಗ್ ಅವರಿಗೆ ಕರ್ನಾಟಕ ವಿಧಾನಪರಿಷತ್ ಉಪಸಭಾಪತಿಗಳು ಹಾಗೂ ಹಿರಿಯ ಕಲಾವಿದರಾದ ಡಾ.ಉಮಾಶ್ರೀ ಅವರು ಅಭಿನಂದನೆ ಸಲ್ಲಿಸಿದ್ದಾರೆ.‎‎

ಹಿರಿಯ ನಟ ಡಾ.ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಅನುಪಮ ಸೇವೆ, ಅದ್ಭುತ ನಟನೆ ಹಾಗೂ ವೈಶಿಷ್ಟಪೂರ್ಣ ವ್ಯಕ್ತಿತ್ವಕ್ಕೆ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಪ್ರಶಸ್ತಿ ಸಲ್ಲುತ್ತಿರುವುದು ಕನ್ನಡಿಗರಾದ ನಮಗೆಲ್ಲ ಹರ್ಷದಾಯಕದ ಸಂಗತಿ. ಇದು ನಮ್ಮೆಲ್ಲರ ಹೆಮ್ಮೆಯೂ ಹೌದು ಎಂದು ಅವರು ಹೇಳಿದ್ದಾರೆ.

‎‎ಕಳೆದ 5 ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಅಭಿನಯದ ಪಯಣದಲ್ಲಿ 7 ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡಿಗರನ್ನು ರಂಜಿಸಿದ ಡಾ. ಅನಂತನಾಗ್ ಅವರಿಗೆ ನಿಜವಾಗಿ ಸಲ್ಲಬೇಕಾಗಿರುವ ಗೌರವ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲು ಬಾರಿಗೆ ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಲ್ಲಿದ ನಂತರ ಈಗ ಡಾ.ಅನಂತನಾಗ್ ಅವರಿಗೆ ಸಲ್ಲುತ್ತಿರುವುದು ಸಂತಸದ ವಿಚಾರ. ವಿಶೇಷವಾಗಿ ಕಲಾತ್ಮಕ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಕ್ಷಣ ಎಂದಿದ್ದಾರೆ.‎‎

ನೈಜ ನಟನೆ ಮೂಲಕ ದಶಕಗಳ ಕಾಲ ಕಲಾರಂಗವನ್ನು ಶ್ರೀಮಂತಗೊಳಿಸಿದ ಕೀರ್ತಿ ಡಾ. ಅನಂತನಾಗ್ ಅವರದು. ಈ ಗೌರವ ಕನ್ನಡ ಕಲಾಜಗತ್ತಿಗೆ ಸಂದ ಮಹಾನ್ ಮನ್ನಣೆ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ತಮ್ಮ ಗಮನಾರ್ಹ ವೈವಿದ್ಯ ಹಾಗೂ ಶ್ರೇಷ್ಠ ಕಲಾ ಪ್ರತಿಭೆಯಿಂದ ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅವಿಸ್ಮರಣೀಯ ಛಾಪನ್ನು ಮೂಡಿಸಿದ ಹಿರಿಮೆ ಡಾ. ಅನಂತನಾಗ್ ಅವರದು ಎಂದು ಉಪಸಭಾಪತಿ ಡಾ. ಉಮಾಶ್ರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‎

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles