ಆಕ್ಸಿಸ್ ಬ್ಯಾಂಕ್–ಕಾಗ್ನಿಜೆಂಟ್ ಸಹಯೋಗ; ಅಪ್ಲಿಕೇಶನ್ ನಿರ್ವಹಣೆಗೆ ‘ಎಎಂಎಸ್ 2.0’
ಬೆಂಗಳೂರು: ಆಕ್ಸಿಸ್ ಬ್ಯಾಂಕ್ ತನ್ನ ತಂತ್ರಜ್ಞಾನ ಪರಿವರ್ತನೆಯ ಭಾಗವಾಗಿ ಕಾಗ್ನಿಜೆಂಟ್‌ನ ಅಪ್ಲಿಕೇಶನ್ ಮ್ಯಾನೇಜ್ಮೆಂಟ್ ಸರ್ವೀಸಸ್ (ಎಎಂಎಸ್) ಅನ್ನು ‘ಎಎಂಎಸ್ 2.0’ ಉಪಕ್ರಮದಡಿ ಯಶಸ್ವಿಯಾಗಿ ಜಾರಿಗೆ ತಂದಿದೆ.
ಸ್ವಯಂಚಾಲಿತ ಕಾರ್ಯಾಚರಣೆ, ಸುಧಾರಿತ ಆಡಳಿತ ವ್ಯವಸ್ಥೆ ಹಾಗೂ ಏಕರೂಪ ಸೇವಾ ಪ್ರಕ್ರಿಯೆಗಳ ಮೂಲಕ ಬ್ಯಾಂಕ್‌ನ ಅಪ್ಲಿಕೇಶನ್ ಬೆಂಬಲ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸೇವಾ ವಿಶ್ವಾಸಾರ್ಹತೆ, ವೆಚ್ಚದ ಪರಿಣಾಮಕಾರಿತ್ವ, ಉತ್ಪಾದಕತೆ ಮತ್ತು ವಿಸ್ತರಣಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಆಡಳಿತ, ನಿಯಮಾನುಸರಣೆ ಹಾಗೂ ಕಾರ್ಯಾಚರಣಾ ಶಿಸ್ತಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಆಕ್ಸಿಸ್ ಬ್ಯಾಂಕ್ ಮುನ್ನಡೆಸುತ್ತಿರುವ ಎಎಂಎಸ್ 2.0, ಬ್ಯಾಂಕ್‌ನ ವಿಶಾಲ ತಂತ್ರಜ್ಞಾನ ಪರಿವರ್ತನಾ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ. ವೇಗವಾಗಿ ಬದಲಾಗುತ್ತಿರುವ ವ್ಯವಹಾರ ಅಗತ್ಯಗಳಿಗೆ ಹೊಂದಿಕೊಳ್ಳುವ, ಹೆಚ್ಚು ಸ್ಥಿರ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಮಾಹಿತಿ ತಂತ್ರಜ್ಞಾನ ಕಾರ್ಯಾಚರಣಾ ವ್ಯವಸ್ಥೆಯನ್ನು ನಿರ್ಮಿಸುವುದು ಇದರ ಗುರಿಯಾಗಿದೆ.
ಐದು ವರ್ಷಗಳ ಒಪ್ಪಂದದಡಿ ಕಾಗ್ನಿಜೆಂಟ್, ಆಕ್ಸಿಸ್ ಬ್ಯಾಂಕ್‌ನ ಪ್ರಮುಖ ವ್ಯವಹಾರ ವಿಭಾಗಗಳಿಗೆ ತಾಂತ್ರಿಕ ಬೆಂಬಲ ನೀಡುತ್ತಿದೆ. ಶಾಖೆ ಮತ್ತು ಕಾರ್ಯಾಚರಣೆ, ಕಾರ್ಡ್ ಸೇವೆಗಳು, ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಟ್ರೆಜರಿ, ಕೋರ್ ಪ್ಲಾಟ್‌ಫಾರ್ಮ್ ಹಾಗೂ ಪಾವತಿ ವ್ಯವಸ್ಥೆಗಳು, ಹಣಕಾಸು ಮತ್ತು ಲೆಕ್ಕಪತ್ರ, ಚಿಲ್ಲರೆ ಮತ್ತು ಸಗಟು ಬ್ಯಾಂಕಿಂಗ್, ಡೇಟಾ ಪ್ಲಾಟ್‌ಫಾರ್ಮ್ ಹಾಗೂ ಏಕೀಕರಣ ವ್ಯವಸ್ಥೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
ಈ ಕುರಿತು ಆಕ್ಸಿಸ್ ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನ ಮತ್ತು ಚಿಲ್ಲರೆ ಕಾರ್ಯಾಚರಣೆ ವಿಭಾಗದ ಗ್ರೂಪ್ ಹೆಡ್ ಅವಿನಾಶ್ ರಾಘವೇಂದ್ರ ಮಾತನಾಡಿ, “ಎಎಂಎಸ್ 2.0 ಮೂಲಕ ಹೆಚ್ಚು ಸ್ಥಿರ, ವಿಸ್ತರಿಸಬಹುದಾದ ಮತ್ತು ಸ್ವಯಂಚಾಲಿತ ಕಾರ್ಯಾಚರಣಾ ಮಾದರಿಯನ್ನು ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಂಕೀರ್ಣ ಅಪ್ಲಿಕೇಶನ್ ವ್ಯವಸ್ಥೆಯ ಪರಿವರ್ತನೆ ಸಂದರ್ಭದಲ್ಲಿ ಕಾಗ್ನಿಜೆಂಟ್ ಬ್ಯಾಂಕ್‌ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣಾ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಈ ಸಹಯೋಗ ನೆರವಾಗಲಿದೆ,” ಎಂದರು.
ಕಾಗ್ನಿಜೆಂಟ್‌ನ ಏಷ್ಯಾ ಪೆಸಿಫಿಕ್ ಮತ್ತು ಜಪಾನ್ ಅಧ್ಯಕ್ಷ ಗಣೇಶ್ ಅಯ್ಯರ್ ಮಾತನಾಡಿ, “ಆಕ್ಸಿಸ್ ಬ್ಯಾಂಕ್‌ನ ಎಎಂಎಸ್ 2.0 ಉಪಕ್ರಮದ ಭಾಗವಾಗಿರುವುದು ಸಂತೋಷದ ಸಂಗತಿ. ನಿಯಂತ್ರಿತ ಸೇವಾ ವಿತರಣೆ, ಆಡಳಿತ ಆಧಾರಿತ ಕಾರ್ಯಾಚರಣೆ ಮತ್ತು ಜವಾಬ್ದಾರಿಯುತ ಸ್ವಯಂಚಾಲಿತ ತಂತ್ರಜ್ಞಾನ ಬಳಕೆಯ ಮೂಲಕ ಬ್ಯಾಂಕ್‌ನ ಅಪ್ಲಿಕೇಶನ್ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು ನಮ್ಮ ತಂಡಗಳು ಕಾರ್ಯನಿರ್ವಹಿಸುತ್ತಿವೆ,” ಎಂದು ಹೇಳಿದರು.
ಈ ಸಹಯೋಗದ ಮೂಲಕ ಬ್ಯಾಂಕ್‌ನ ಪ್ರಮುಖ ತಂತ್ರಜ್ಞಾನ ವ್ಯವಸ್ಥೆಗಳ ಸ್ಥಿರತೆ, ಕಾರ್ಯಕ್ಷಮತೆ ಮತ್ತು ಬಳಕೆದಾರರ ಅನುಭವವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.

