16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಇಂದಿರಾ ಅಲ್ಲ ಅಟಲ್ ಕ್ಯಾಂಟೀನ್, 5 ರೂ.ಗೆ ಸಿಗಲಿದೆ ಊಟ

ದೆಹಲಿ : 5 ರೂ.ಗೆ ಉಪಹಾರ, 10 ರೂ.ಗೆ ಊಟ ನೀಡುವ ಕರ್ನಾಟಕ ಸರ್ಕಾರದ ಇಂದಿರಾ ಕ್ಯಾಂಟೀನ್ ಎಲ್ಲರಿಗೂ ಗೊತ್ತು. ಈಗ 5 ರೂ.ಗೆ ಊಟ ನೀಡುವ 100 ಅಟಲ್ ಕ್ಯಾಂಟೀನ್ ಆರಂಭವಾಗಿದೆ. ದೆಹಲಿಯ ಬಿಜೆಪಿ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿದೆ.

ಗುರುವಾರ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ.

ಈ ಅಂಗವಾಗಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ 100 ಅಟಲ್ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದರು, ಕ್ಯಾಂಟೀನ್‌ನಲ್ಲಿಯೇ ಊಟವನ್ನು ಸವಿದರು.

ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಲು ಅಟಲ್ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗಿದೆ. ಬಡ ಜನರು, ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು ಊಟಕ್ಕೆ ಹೆಚ್ಚಿನ ಹಣ ಖರ್ಚು ಮಾಡುವುದನ್ನು ತಡೆಯಲು ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವನ್ನು ಅಟಲ್ ಕ್ಯಾಂಟೀನ್‌ಗಳಲ್ಲಿ ನೀಡಲಾಗುತ್ತದೆ.

ದಾಲ್, ಅನ್ನ, ಚಪಾತಿ, ಉಪ್ಪಿನಕಾಯಿ ಊಟಕ್ಕೆ ದೆಹಲಿಯಲ್ಲಿ 500 ರಿಂದ 2,000 ರೂ. ತನಕ ದರವಿದೆ. ಅವರ ಯಾವ ರೆಸ್ಟೋರೆಂಟ್‌ಗೆ ಹೋಗುತ್ತಾರೆ ಎಂಬುದರ ಮೇಲೆ ಇದು ನಿರ್ಧರಿತವಾಗುತ್ತದೆ.

ದಿನಕ್ಕೆ 3 ಹೊತ್ತು ಹೊರಗೆ ಊಟ ಮಾಡುವವರು ಪ್ರತಿನಿತ್ಯ ಎಷ್ಟು ಖರ್ಚು ಮಾಡಬೇಕಾಗಿ ಬರಬಹುದು. ಈ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಗುರುವಾರ ಅಟಲ್ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದೆ. 5 ರೂ.ಗಳಿಗೆ ದೆಹಲಿಯ 100 ಪ್ರದೇಶಗಳಲ್ಲಿ ಊಟ ಸಿಗಲಿದೆ.

“ದೆಹಲಿಯಲ್ಲಿ ಯಾರೂ ಸಹ ಹಸಿದ ಹೊಟ್ಟೆಯಲ್ಲಿ ಮಲಗಬಾರದು. ಅಟಲ್ ಕ್ಯಾಂಟೀನ್‌ಗಳು ದೆಹಲಿಗೆ ದೊಡ್ಡ ಕೊಡುಗೆಯಾಗಿದೆ” ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದರು.

ಊಟದ ಮೆನು: ದೆಹಲಿ ಸರ್ಕಾರವು ಇಂದು 45 ಅಟಲ್ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದೆ. ಆರ್.ಕೆ. ಪುರಂ, ಜಂಗ್‌ಪುರ, ಶಾಲಿಮಾರ್ ಬಾಗ್, ಗ್ರೇಟರ್ ಕೈಲಾಶ್, ರಾಜೌರಿ ಗಾರ್ಡನ್, ನರೇಲಾ, ಬವಾನಾ ಸೇರಿದಂತೆ ಇತರ ಸ್ಥಳಗಳಲ್ಲಿವೆ ಈ ಕ್ಯಾಂಟೀನ್.

ಉಳಿದ 55 ಕ್ಯಾಂಟೀನ್‌ಗಳನ್ನು ಮುಂಬರುವ ದಿನಗಳಲ್ಲಿ ಉದ್ಘಾಟಿಸಲಾಗುತ್ತದೆ. ಈ ಕ್ಯಾಂಟೀನ್‌ಗಳಲ್ಲಿ ದಿನಕ್ಕೆ ಎರಡು ಬಾರಿ ಊಟದ ವ್ಯವಸ್ಥೆ ಇರಲಿದ್ದು, ಸುಮಾರು 500 ಜನರಿಗೆ ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ಮತ್ತು ರಾತ್ರಿ 6:30 ರಿಂದ 9:30 ರವರೆಗೆ ಆಹಾರವನ್ನು ನೀಡಲಾಗುತ್ತದೆ.

ಅಟಲ್ ಕ್ಯಾಂಟೀನ್‌ 5 ರೂ.ಗಳ ಊಟದ ಮೆನು. ಈ 5 ರೂಪಾಯಿಯ ಥಾಲಿಯಲ್ಲಿ ದಾಲ್, ಅನ್ನ, ಚಪಾತಿ, ಕಟ್ ಮಾಡಿದ ತರಕಾರಿ ಮತ್ತು ಉಪ್ಪಿನಕಾಯಿ ಇರಲಿದೆ. ಕ್ಯಾಂಟೀನ್‌ನಲ್ಲಿ ಊಟವನ್ನು ವಿತರಿಸಲು ದೆಹಲಿ ಸರ್ಕಾರವು ಹಳೆಯ ಕೂಪನ್ ಪದ್ಧತಿಯ ಬದಲಾಗಿ ಡಿಜಿಟಲ್ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ.

ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಎಲ್ಲಾ ಕೇಂದ್ರಗಳನ್ನು ನೇರವಾಗಿ ರಿಯಲ್ ಟೈಂ ಮೇಲ್ವಿಚಾರಣೆ ಮಾಡಲಿದೆ.

ಅಟಲ್ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ರೇಖಾ ಗುಪ್ತಾ ಮೆಟ್ರೋ ರೈಲಿನಲ್ಲಿನ ಲಜಪತ್ ನಗರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು.

ದೆಹಲಿಯ ಮೂಲಸೌಕರ್ಯಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. 24 ಡಿಸೆಂಬರ್ 2002 ರಂದು ಅವರು ದೆಹಲಿ ಮೆಟ್ರೋಗೆ ಚಾಲನೆ ನೀಡಿದ್ದರು ಎಂದು ತಿಳಿಸಿದರು. ಆ ಸಮಯದಲ್ಲಿ ಕೋಲ್ಕತ್ತಾ ಮಾತ್ರ ಮೆಟ್ರೋ ವ್ಯವಸ್ಥೆಯನ್ನು ಹೊಂದಿದ್ದ ದೇಶದ ಏಕೈಕ ನಗರವಾಗಿತ್ತು ಎಂದು ಪ್ರಯಾಣಿಕರಿಗೆ ವಿವರಣೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles