15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಗಂಡ ಬೆಂಗಳೂರಿನಲ್ಲಿ ಕೆಲಸ.. ಹೆಂಡ್ತಿ ಜ್ಯೋತಿಷಿ ಜೊತೆ ಚಕ್ಕಂದ!

ಗಂಡ ಬೆಂಗಳೂರಿನಲ್ಲಿ ಕೆಲಸ.. ಹೆಂಡ್ತಿ ಜ್ಯೋತಿಷಿ ಜೊತೆ ಚಕ್ಕಂದ!

ದಿನ ಬೆಳಗಾದ್ರೆ ಈ ಜ್ಯೋತಿಷಿ ಕಮಲಾಕರ್ ಭಟ್ ಪಬ್ಲಿಕ್ ಟಿವಿಯಲ್ಲಿ ಕುಳಿತುಕೊಂಡು ಪುಂಗ್ತಿದ್ದೇ ಪುಂಗ್ತಿದ್ದು. ನೀವು ಹೀಗಿರಬೇಕು. ಹಾಗಿರಬೇಕು. ಹೀಗಿದ್ರೆ ಹಾಗೆ ಆಗುತ್ತೆ.. ಹಾಗಿದ್ರೆ ಹೀಗೆ ಆಗುತ್ತೆ.. ಆ ಪೂಜೆ ಮಾಡಿ.. ಈ ಪೂಜೆ ಮಾಡಿ ಅಂತ ದೇವರ ಹೆಸ್ರಲ್ಲಿ ಜನರ ದಾರಿ ತಪ್ಪಿಸ್ತಿದ್ದ. ಆದ್ರೆ, ತಾನು ಮಾತ್ರ ಅಕ್ರಮದ ಹಾದಿಯಲ್ಲಿದ್ದ..

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಸುಚಿತ್ರಾಗೆ ಮದುವೆಯಾಗಿ ಎರುಡು ಮಕ್ಕಳಿದ್ವು.ಗಂಡ ಮಹೇಶ್ ನಾಯ್ಕ್, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ಈಕೆ ಮಾತ್ರ ಜ್ಯೋತಿಷಿ ಕಮಲಾಕರ ಭಟ್ ತೆಕ್ಕೆಯಲ್ಲಿ ನಿತ್ಯ ತೇಲಾಡ್ತಿದ್ದಳು. ನಿತ್ಯ ಪೂಜೆ ನೆಪದಲ್ಲಿ ಸುಚಿತ್ರಾ ಮನೆಗೆ ಬರ್ತಿದ್ದ ಕಮಲಾಕರ್ ಭಟ್ ನಿತ್ಯವೂ ಪೂಜೆಯಲ್ಲಿ ತೊಡಗಿಕೊಳ್ತಿದ್ದ. ಇದರಿಂದ ಸುಚಿತ್ರಾ ಮೊದಲ ಮಗಳಿಗೆ ಇರಿಸು ಮುರಿಸು ಆಗ್ತಿತ್ತು. ಹೀಗಾಗಿ ಹಲವು ಬಾರಿ ತನ್ನ ಅಮ್ಮನ ಜೊತೆ ಜಗಳ ಕೂಡ ಮಾಡಿದ್ದಳು. ಆದ್ರೆ ತನ್ನ ವರ್ತನೆ ಬದಲು ಮಾಡಿಕೊಂಡಿರಲಿಲ್ಲ. ಇದ್ರಿಂದ ಸಿಟ್ಟಿಗೆದ್ದ ಹಿರಿಯ ಮಗಳು ಈ ವಿಚಾರವನ್ನ ತನ್ನ ತಂದೆಗೆ ತಿಳಿಸಿದ್ದಳು. ಊರಿಗೆ ಬಂದ ಗಂಡ ಮಹೇಶ್, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಇದ್ರಿಂದ ಕೆರಳಿದ್ದ ಸುಚಿತ್ರಾ, ತನ್ನ ತಂದೆ ಲೋಕನಾಥ್ ಮತ್ತು ಸಹಚರರು ಮಹೇಶ್ ನಾಯ್ಕ್ ಹಾಗೂ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್, ವಸಂತ್ ನಾಯ್ಕ ಮತ್ತು ಕುಮಾರ್ ಗಂಭೀರ ಗಾಯಗೊಂಡಿದ್ದು, ಈ ಪೈಕಿ ವಸಂತ್ ನಾಯ್ಕ ಆಸ್ಪತ್ರೆ ಮಾರ್ಗ ಮಧ್ಯೆಯೇ ಮೃ*ತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊ*ಲೆ ಬಳಿಕ ಎಸ್ಕೇಪ್ ಆಗಲು ಯತ್ನಿಸಿದ ಜೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಸೇರಿ ನಾಲ್ವರನ್ನು ಸಿದ್ದಾಪುರದಲ್ಲಿ ಬಂಧಿಸಲಾಗಿದ್ದರೆ. ಶಿವಮೊಗ್ಗದಲ್ಲಿ ಉಳಿದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ದೇವರ ಹೆಸ್ರೇಳುತ್ತಲೇ ಅನಾಚಾರ ಮಾಡ್ತಿದ್ದ ಕಮಲಾಕರ್ ಭಟ್ ಈಗ ಜೈಲು ಸೇರಿದ್ದಾನೆ.

kamalakaeabhat #kamalakarbhat #suchitra #shivamogga

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles