15.4 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಗಣೇಶ ಚತುರ್ಥಿಗೆ ಕಫೆ ಅಕಾಸಾದ ವಿಶೇಷ ಊಟ

ಗಣೇಶ ಚತುರ್ಥಿಗೆ ಕಫೆ ಅಕಾಸಾದ ವಿಶೇಷ ಊಟ

  • ಫರಾಳಿ ಪ್ಯಾಟಿಸ್, ಪುಣೆರಿ ಉಸಲ್, ಪುರಣ್ ಪೋಲಿ ಟಾರ್ಟ್‌ ಒಳಗೊಂಡ ಹಬ್ಬದ ಮೆನು

ಬೆಂಗಳೂರು: ಗಣೇಶ ಚತುರ್ಥಿ ಸಂಭ್ರಮದ ಅಂಗವಾಗಿ ಅಕಾಸಾ ಏರ್‌ನ ವಿಮಾನದಲ್ಲಿನ ಆಹಾರ ಸೇವೆ ಕಫೆ ಅಕಾಸಾ, ಮಹಾರಾಷ್ಟ್ರದ ಪಾಕಪರಂಪರೆಯಿಂದ ಪ್ರೇರಿತ ವಿಶೇಷ ಹಬ್ಬದ ಊಟವನ್ನು ಪರಿಚಯಿಸಿದೆ.

ಕಫೆ ಅಕಾಸಾ ಪರಿಚಯಿಸುತ್ತಿರುವ ಗಣೇಶ ಚತುರ್ಥಿ ವಿಶೇಷ ಊಟದ ಇದು ಐದನೇ ಆವೃತ್ತಿಯಾಗಿದೆ. ಫರಾಳಿ ಪ್ಯಾಟಿಸ್, ಪುಣೆರಿ ಉಸಲ್, ಪುರಣ್ ಪೋಲಿ ಟಾರ್ಟ್ ಹಾಗೂ ಪ್ರಯಾಣಿಕರ ಆಯ್ಕೆಯ ಪಾನೀಯ ಈ ವಿಶೇಷ ಊಟದಲ್ಲಿ ಸೇರಿವೆ.

ಸೆಪ್ಟೆಂಬರ್ 2026ರ ಸಂಪೂರ್ಣ ಅವಧಿಯಲ್ಲಿ ಈ ಹಬ್ಬದ ವಿಶೇಷ ಮೆನು ಲಭ್ಯವಿರಲಿದೆ. ಪ್ರಯಾಣಿಕರು ಅಕಾಸಾ ಏರ್‌ನ ಅಧಿಕೃತ ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಮುಂಗಡವಾಗಿ ಊಟವನ್ನು ಕಾಯ್ದಿರಿಸಬಹುದು.

ಮಹಾರಾಷ್ಟ್ರದ ವೈವಿಧ್ಯಮಯ ರುಚಿಗಳನ್ನು ಪರಿಚಯಿಸುವ ಜೊತೆಗೆ, ಗಣೇಶ ಚತುರ್ಥಿಯ ಹಬ್ಬದ ಸಂಭ್ರಮ, ಆತ್ಮೀಯತೆ ಮತ್ತು ಒಗ್ಗಟ್ಟಿನ ಅನುಭವವನ್ನು ವಿಮಾನ ಪ್ರಯಾಣದಲ್ಲಿಯೂ ನೀಡುವ ಉದ್ದೇಶದಿಂದ ಈ ಮೆನುವನ್ನು ರೂಪಿಸಲಾಗಿದೆ. ಖಾರ ಮತ್ತು ಸಿಹಿ ರುಚಿಗಳ ಸಮತೋಲನದೊಂದಿಗೆ ಸಿದ್ಧಪಡಿಸಿರುವ ಈ ಊಟ ಹಬ್ಬದ ಋತುವಿನ ಸೊಗಡನ್ನು ಪ್ರಯಾಣಿಕರಿಗೆ ಪರಿಚಯಿಸಲಿದೆ ಎಂದು ಅಕಾಸಾ ಏರ್ ತಿಳಿಸಿದೆ.

ವಿಶೇಷ ಸಂದರ್ಭಗಳಿಗೆ ವಿಭಿನ್ನ ಮೆನು

ವರ್ಷಪೂರ್ತಿ ವಿವಿಧ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಿಗೆ ಅನುಗುಣವಾಗಿ ಸೀಮಿತ ಅವಧಿಯ ಮೆನುಗಳನ್ನು ಪರಿಚಯಿಸುವ ಮೂಲಕ ಕಫೆ ಅಕಾಸಾ ತನ್ನ ವಿಮಾನಯಾನ ಆಹಾರ ಅನುಭವವನ್ನು ವಿಭಿನ್ನವಾಗಿಸುತ್ತಿದೆ.

ಗ್ರಾಹಕರ ಬದಲಾಗುತ್ತಿರುವ ಅಭಿರುಚಿ ಮತ್ತು ಆಹಾರ ಆಯ್ಕೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ಪ್ರಯಾಣದಲ್ಲಿಯೂ ಹೊಸ ಅನುಭವ ನೀಡುವ ಉದ್ದೇಶದಿಂದ ಮೆನುಗಳನ್ನು ನಿಯಮಿತವಾಗಿ ಪರಿಷ್ಕರಿಸಲಾಗುತ್ತಿದೆ.

2022ರ ಆಗಸ್ಟ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಅಕಾಸಾ ಏರ್, ಭಾರತದ ವಿವಿಧ ಭಾಗಗಳ ಪ್ರಾದೇಶಿಕ ಆಹಾರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ವಿಶೇಷ ಊಟಗಳನ್ನು ಪರಿಚಯಿಸಿದೆ.

ಮಕರ ಸಂಕ್ರಾಂತಿ, ವ್ಯಾಲೆಂಟೈನ್ಸ್ ಡೇ, ಹೋಳಿ, ಈದ್, ಈಸ್ಟರ್, ಮದರ್ಸ್ ಡೇ, ಅಂತರರಾಷ್ಟ್ರೀಯ ಯೋಗ ದಿನ, ನವ್ರೋಜ್, ಓಣಂ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಮಕ್ಕಳ ದಿನ ಹಾಗೂ ಕ್ರಿಸ್‌ಮಸ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ಹಬ್ಬದ ವಿಶೇಷ ಮೆನುಗಳನ್ನು ಕಫೆ ಅಕಾಸಾ ನೀಡುತ್ತಿದೆ.

ವಿಮಾನ ಪ್ರಯಾಣದ ವೇಳೆ ಹುಟ್ಟುಹಬ್ಬ ಅಥವಾ ಇತರ ವಿಶೇಷ ಸಂದರ್ಭಗಳನ್ನು ಆಚರಿಸಲು ಬಯಸುವ ಪ್ರಯಾಣಿಕರಿಗಾಗಿ ಮುಂಚಿತವಾಗಿ ಆಯ್ಕೆ ಮಾಡಬಹುದಾದ ಕೇಕ್‌ಗಳೂ ನಿಯಮಿತ ಮೆನುವಿನಲ್ಲಿ ಲಭ್ಯವಿವೆ.

45ಕ್ಕೂ ಹೆಚ್ಚು ಆಹಾರ ಆಯ್ಕೆಗಳು

ಕಫೆ ಅಕಾಸಾದ ಸಾಮಾನ್ಯ ಮೆನುವಿನಲ್ಲಿ 45ಕ್ಕೂ ಹೆಚ್ಚು ಊಟದ ಆಯ್ಕೆಗಳಿವೆ. ವಿವಿಧ ಆಹಾರ ಅಭಿರುಚಿ ಮತ್ತು ಪಾಕಪರಂಪರೆಗೆ ಹೊಂದುವಂತೆ ವಿಶೇಷ ಊಟಗಳು, ಸ್ನ್ಯಾಕ್ಸ್ ಮತ್ತು ಪಾನೀಯಗಳನ್ನು ಇದರಲ್ಲಿ ಸೇರಿಸಲಾಗಿದೆ.

ಫ್ಯೂಷನ್ ಊಟಗಳು, ಪ್ರಾದೇಶಿಕ ರುಚಿಯ ಸ್ಪರ್ಶ ಹೊಂದಿರುವ ಅಪೆಟೈಸರ್‌ಗಳು ಮತ್ತು ವಿವಿಧ ಡೆಸರ್ಟ್‌ಗಳು ಮೆನುವಿನ ಭಾಗವಾಗಿವೆ. ಭಾರತದ ವಿವಿಧ ಭಾಗಗಳ ಹೆಸರಾಂತ ಶೆಫ್‌ಗಳು ಈ ಆಹಾರ ಆಯ್ಕೆಗಳನ್ನು ರೂಪಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles