15.4 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ತೆಗೂರು ಗ್ರಾಮ ಹತ್ತಿರ ಮುಲ್ಲಾದಾಬಾ ಎದುರುಗಡೆ ಶೀರಿ ಎಂಬುವರ ಮಾವಿನ ತೋಟದ ಶೆಡ್ ಮುಂದೆ ಸುಮಾರು 55 ರಿಂದ 55 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯ ಶವ ದೊರೆತಿರುತ್ತದೆ.ಮೃ*ತನ ಗುರುತು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ..    

ಗದಗ: ದಿನಾಂಕ 09.07.2026 ರಂದು ಮಧ್ಯಾಹ್ನ 02.45 ಗಂಟೆ ಸುಮಾರಿಗೆ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ತೆಗೂರು ಗ್ರಾಮ ಹತ್ತಿಯ ಮುಲ್ಲಾದಾಬಾ ಎದುರುಗಡೆ ಬೆಳಗಾವಿಯಿಂದ ಧಾರವಾಡ ಕಡೆ ಸಾಗಿದ ಎನ್‌ಹೆಚ್ 48 ರಸ್ತೆಯ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಬಸವರಾಜ್ ಶೀರಿ ಎಂಬುವರ ಮಾವಿನ ತೋಟದ ಶೆಡ್ ಮುಂದೆ ಸುಮಾರು 55 ರಿಂದ 55 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯ ಶವ ದೊರೆತಿರುತ್ತದೆ.

ಮೃತನ ಶವದ ಚಹರೆ ಪಟ್ಟಿ ಮತ್ತು ವಿವರ
ಹೆಸರು : ತಿಳಿದು ಬಂದಿರುವುದಿಲ್ಲ
ವಯಸ್ಸು : ಅಂದಾಜು 50-55 ವರ್ಷ
ಅಂದಾಜು 5 ಅಡಿ ಎತ್ತರ ತೆಳುವಾದ ಮೈಕಟ್ಟು, ಕೋಲು ಮುಖ, ಗೋದಿಗೆಂಪು ಬಣ್ಣ, ತಲೆಯಲ್ಲಿ ನೆರೆದ ಒಂದು ಇಂಚಿನಷ್ಟು ಉದ್ದದ ಕೂದಲುಗಳು ಇದ್ದು ಕುರುಚಲು ಗಡ್ಡವನ್ನು ಬಿಟ್ಟಿರುತ್ತಾನೆ.
ಬಟ್ಟೆಗಳು : ಬಿಳಿ ಬಣ್ಣದ ಉದ್ದ ತೋಳಿನ ಚೆಕ್ಸ್ ಶರ್ಟ್ & ನೀಲಿ ಬಣ್ಣದ ಬರ್ಮುಡಾ ಚಡ್ಡಿಯನ್ನು ಧರಿಸಿರುತ್ತಾನೆ.
ಬಲಗೈಯಲ್ಲಿ ಸ್ಟೀಲಿನ ಖಡ್ಗ ಹಾಕಿಕೊಂಡಿದ್ದು,*ಬಲಗೈ ಮುಂಗೈ ಮೇಲೆ ಹೆಡೆ ಎತ್ತಿದ ನಾಗರಹಾವಿನ ಹಚ್ಚೆ* ಹಾಕಿಸಿಕೊಂಡಿರುತ್ತಾನೆ.

ಸದರಿ ಮೃತನ ಗುರುತು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಈ ಕೆಳಕಂಡ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
*PSI ಗರಗ* 9480804347
*CPI ಗರಗ* 9480804330
*ಧಾರವಾಡ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ* .
9480804300, 0836 2233201

ವರದಿಗಾರರು:ಭರತ ಪೂಜಾರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles