16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಬಿಜೆಪಿ ದಿಗ್ವಿಜಯ ಹಿನ್ನೆಲೆ ರೋಣ ಮಂಡಲದಲ್ಲಿ ಭರ್ಜರಿ ವಿಜಯೋತ್ಸವ🗞️ ಸುದ್ದಿ ವರದಿ:

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಬಿಜೆಪಿ ದಿಗ್ವಿಜಯ ಹಿನ್ನೆಲೆ ರೋಣ ಮಂಡಲದಲ್ಲಿ ಭರ್ಜರಿ ವಿಜಯೋತ್ಸವ
🗞️ ಸುದ್ದಿ ವರದಿ:
ಇಂದು ರೋಣ ಮಂಡಲದ ವತಿಯಿಂದ ಗಜೇಂದ್ರಗಡದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಭರ್ಜರಿ ವಿಜಯೋತ್ಸವವನ್ನು ಆಚರಿಸಲಾಯಿತು. ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಬಹುಮತದೊಂದಿಗೆ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಡಲ ಅಧ್ಯಕ್ಷರಾದ ಶ್ರೀ ಉಮೇಶ್ ಮಲ್ಲಾಪುರ್ ಅವರು, ಪಶ್ಚಿಮ ಬಂಗಾಳದಲ್ಲಿ ನಡೆದ ಹೋರಾಟ, ಕಾರ್ಯಕರ್ತರ ತ್ಯಾಗ ಮತ್ತು ನಿರಂತರ ಪರಿಶ್ರಮವೇ ಈ ದಿಗ್ವಿಜಯಕ್ಕೆ ಕಾರಣವಾಗಿದೆ ಎಂದು ಹೇಳಿದರು. ಅಲ್ಲದೆ, ಇದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವನ್ನು ತರಲು ಕಾರ್ಯಕರ್ತರು ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.
ಪಕ್ಷದ ಮುಖಂಡರಾದ ಶ್ರೀ ಅಶೋಕ್ ವನ್ನಾಲ್ ಹಾಗೂ ನಗರ ಘಟಕದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಘೋರ್ಪಡೆ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಉತ್ತಮ ಆಡಳಿತ ಮತ್ತು ಕಾರ್ಯಕರ್ತರ ಶ್ರಮದ ಫಲವಾಗಿ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತಕ್ಕೆ ನಾಂದಿ ಹಾಡಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಬಾಲಾಜಿ ರಾವ್ ಭೋಸ್ಲೆ, ಮಾಂತೇಶ್ ಪೂಜಾರ್, ಸುಗುರೇಶ್ ಕಾಜಗಾರ್, ದುರ್ಗಪ್ಪ ಕಟ್ಟಿಮನಿ, ಶಿವಕುಮಾರ್ ಜಾದವ್, ಪರಸಪ್ಪ ಪೂಜಾರ್, ರಂಗನಾಥ್ ಮೇಟಿ, ವಿನಾಯಕ್ ಜರ್ತಾರಿ, ರವೀಂದ್ರ ಸಿಂಗ್ರಿ, ಯಮುನಪ್ಪ ತಿರಕೋಜಿ, ಲಕ್ಷ್ಮಣ ಬಂಕದ, ದೊಡ್ಡನಗೌಡ ಗೌಡ್ರು, ಕಲ್ಲಪ್ಪ ಸುಲಭಗೌಡ್ರು, ಬಸಣ್ಣ ಕಡಬಲಕಟ್ಟಿ, ಕಳಕೇಶ್ ರಾಥೋಡ್, ಮಹೇಶ್ ಮಕ್ತಾಲಿ, ದೇವರಾಜ್ ವರಗರ್, ಅಂದಪ್ಪ ಅಂಗಡಿ, ಜಗದೀಶ್ ಹಂಚಾಟೆ, ಕಳಕಪ್ಪ ಮುಸಿಗೇರಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಸಂಭ್ರಮದಲ್ಲಿ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles