16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ರೂಪಾಯಿ ಮೌಲ್ಯ ಕುಸಿತ ಕಂಡರೂ ಈ ದೇಶದಲ್ಲಿದೆ ಬಾರೀ ಬೇಡಿಕೆ! ಭಾರತದಲ್ಲಿ ತಿಂಗಳ ದುಡಿಮೆ ಇಲ್ಲಿನ ವರ್ಷದ ಗಳಿಕೆಗೆ ಸಮ

Indian Rupee : ಸಾಮಾನ್ಯವಾಗಿ ಭಾರತೀಯ ರೂಪಾಯಿಯನ್ನು ಅಮೆರಿಕನ್ ಡಾಲರ್‌ಗೆ ಹೋಲಿಸಿ ದುರ್ಬಲ ಎಂದು ಹೇಳಲಾಗುತ್ತದೆ. ಆದರೆ ಆಗ್ನೇಯ ಏಷ್ಯಾದ ವಿಯೆಟ್ನಾಂನಲ್ಲಿ ಚಿತ್ರಣ ಸಂಪೂರ್ಣ ಬೇರೆ. ಅಲ್ಲಿ ಭಾರತೀಯ ರೂಪಾಯಿ ತುಂಬಾ ಬಲಿಷ್ಠವಾಗಿದ್ದು, ಕಡಿಮೆ ಮೊತ್ತವೂ ದೊಡ್ಡ ಮೊತ್ತವಾಗಿ ಪರಿವರ್ತನೆಯಾಗುತ್ತದೆ.

ವಿಯೆಟ್ನಾಂ ತನ್ನ ನೈಸರ್ಗಿಕ ಸೌಂದರ್ಯ, ಕಡಿಮೆ ಖರ್ಚಿನ ಜೀವನಶೈಲಿ ಮತ್ತು ಪ್ರವಾಸೋದ್ಯಮಕ್ಕಾಗಿ ಪ್ರಸಿದ್ಧ. ಇದೇ ಕಾರಣಕ್ಕೆ ಭಾರತೀಯ ಪ್ರವಾಸಿಗರು ಹಾಗೂ ಮಧ್ಯಮ ವರ್ಗದ ಜನರಿಗೆ ವಿಯೆಟ್ನಾಂ ಒಂದು ‘ಸ್ವರ್ಗ’ದಂತೆ ಕಾಣುತ್ತಿದೆ.

ವೈದ್ಯಕೀಯ ಆಧ್ಯಾಯನಕ್ಕಾಗಿ ಭಾರತೀಯರ ಆಯ್ಕೆ ಬಾಂಗ್ಲಾದೇಶವೇಕೆ? MBBS ಓದಲು ಈ ಸ್ಥಳ ‘ಹಾಟ್ ಫೇವರಿಟ್’ ಆಗಲು ಕಾರಣ..

ವರದಿ ಪ್ರಕಾರ, ಪ್ರಸ್ತುತ ವಿನಿಮಯ ದರದಲ್ಲಿ 1 ಭಾರತೀಯ ರೂಪಾಯಿ ಸುಮಾರು 293 ವಿಯೆಟ್ನಾಂ ಡಾಂಗ್ (VND) ಗೆ ಸಮಾನವಾಗಿದೆ. ಅಂದರೆ, ಭಾರತದಿಂದ 1 ಲಕ್ಷ ರೂಪಾಯಿ ತೆಗೆದುಕೊಂಡರೆ, ಅದು ಸುಮಾರು 29 ಲಕ್ಷಕ್ಕೂ ಹೆಚ್ಚು ಡಾಂಗ್ ಆಗುತ್ತದೆ.

ವಿಯೆಟ್ನಾಂನ ಅಧಿಕೃತ ಕರೆನ್ಸಿ ಡಾಂಗ್ (VND) ಆಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ವಿಯೆಟ್ನಾಂ ಇದನ್ನು ಬಿಡುಗಡೆ ಮಾಡುತ್ತದೆ. ಹೋಟೆಲ್‌ಗಳು ಮತ್ತು ಕೆಲವು ಪ್ರವಾಸಿ ಪ್ರದೇಶಗಳಲ್ಲಿ ಯುಎಸ್ ಡಾಲರ್ ಸ್ವೀಕರಿಸಿದರೂ, ಸ್ಥಳೀಯ ಮಾರುಕಟ್ಟೆಗಳಲ್ಲಿ ಡಾಂಗ್‌ನೇ ಹೆಚ್ಚು ಬಳಸಲಾಗುತ್ತದೆ.

ಭಾರತೀಯ ರೂಪಾಯಿಯಲ್ಲಿ ಬಲಿಷ್ಠವಾಗಿರುವುದರಿಂದ, ವಿಯೆಟ್ನಾಂನಲ್ಲಿ ವಾಸ, ಆಹಾರ, ಶಾಪಿಂಗ್ ಮತ್ತು ಪ್ರಯಾಣ ಎಲ್ಲವೂ ಭಾರತೀಯರಿಗೆ ಕಡಿಮೆ ಖರ್ಚಿನಲ್ಲಿ ಸಾಧ್ಯವಾಗುತ್ತದೆ. ಇದರಿಂದ ಭಾರತೀಯ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ನದಿಯಿಂದಲೇ ಜನ್ಮ ತಾಳಿದ ಏಕೈಕ ದೇಶ ಯಾವುದು ಗೊತ್ತಾ? ಏಳು ಅದ್ಭುತಗಳಲ್ಲಿ ಇದೂ ಕೂಡ ಒಂದು

ಒಟ್ಟಿನಲ್ಲಿ, ಭಾರತದಲ್ಲಿ ರೂಪಾಯಿ ಮೌಲ್ಯ ಕುಸಿತದ ಚರ್ಚೆ ನಡೆಯುತ್ತಿದ್ದರೂ, ವಿಯೆಟ್ನಾಂನಂತಹ ದೇಶಗಳಲ್ಲಿ ಅದೇ ರೂಪಾಯಿ ದೊಡ್ಡ ಮೌಲ್ಯ ಹೊಂದಿದೆ. ಇದೇ ಕಾರಣಕ್ಕೆ, ‘ಭಾರತದ ತಿಂಗಳ ದುಡಿಮೆ ವಿಯೆಟ್ನಾಂನಲ್ಲಿ ವರ್ಷದ ಗಳಿಕೆ’ ಎನ್ನುವ ಮಾತು ಅತಿಶಯೋಕ್ತಿ ಅಲ್ಲ ಎನ್ನಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles