16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ವೈದ್ಯರು ತಮಗಾದಷ್ಟು ಸಹಾಯ ಮಾಡುವ ಮನೋಭಾವ ಗುಣ ಬೆಳೆಸಿಕೊಳ್ಳಬೇಕು; ವೈದ್ಯಾಧಿಕಾರಿ ಡಾ.ಸಂತೋಷ ಗಡದವರು…

ಡಾ.ಸಂತೋಷ ಗಡದವರ ಕಿವಿಮಾತು. ಚನ್ನಮ್ಮನ ಕಿತ್ತೂರಿನಲ್ಲಿ ಟಿಎಚ್‌ಒ, ಪಿಎಸ್‌ಐಗೆ ಸನ್ಮಾನ

ಚನ್ನಮ್ಮನ ಕಿತ್ತೂರು: ಬಡ ರೋಗಿಗಳಿಗೆ ವೈದ್ಯರುಗಳು ಆಸರೆ ಆಗಬೇಕು.ಹಣ ಸಂಪಾದನೆ ಮಾಡುವುದೇ ವೈದ್ಯರ ಗುರಿಯಾಗಬಾರದು ಎಂದು ವೈದ್ಯಾಧಿಕಾರಿ ಡಾ.ಸಂತೋಷ ಗಡದವರು ಹೇಳಿದರು.

ಪಟ್ಟಣದ ಶ್ರೀ ಶಕುಂತಲಾ ಗ್ರಾಮೀಣ ಆಸ್ಪತ್ರೆ ಸಭಾಭವನದಲ್ಲಿ ರಾಣಿ ಚನ್ನಮ್ಮ ವೈದ್ಯರ ಸಂಘಟನೆ ಈತ್ತೀಚೆಗೆ ಹಮ್ಮಿಕೊಂಡಿದ್ದ ನೊತನ ಅಧಿಕಾರಿಗಳು ಮತ್ತು ವೈದ್ಯರಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಾ.ಸಂತೋಷ ಗಡದವರು ಮಾತನಾಡಿ ಮನುಷ್ಯನಿಗೆ ಸಮಸ್ಯೆ ಹೇಳಿ ಕೇಳಿ ಬರುವುದಿಲ್ಲ ಹೀಗಾಗಿ ವೈದ್ಯರು ತಮಗಾದಷ್ಟು ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು..

ಕಿತ್ತೂರು ಪಿಎಸ್ಐ, ಶ್ರೀ ಭರತ.ಎಸ್ ಮಾತನಾಡಿ ಸಮಾಜದ ರಕ್ಷಣೆ ವೈದ್ಯರ ಮತ್ತು ಪೋಲಿಸರ ಕೆಲಸವಾಗಿದೆ, ನಮಗೆ ನೀಡಿರುವ ಜವಾಬ್ದಾರಿಯನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಒದಗಿಸಿಕೊಡಬೇಕು ಎಂದರು..

ತಾಲೂಕಿನ ವೈದ್ಯಾಧಿಕಾರಿ ಸಂತೋಷ ಗಡದವರು ಮತ್ತು ಚನ್ನಮ್ಮನ ಕಿತ್ತೂರಿನಲ್ಲಿ ಪಿಎಸ್‌ಐ ಶ್ರೀ ಭರತ ಎಸ್.ಅವರನ್ನು ಸನ್ಮಾನಿಸಲಾಯಿತು.

ಸಂಘಟನೆಯ ಕಾರ್ಯದರ್ಶಿ ಡಾ.ಬಸವರಾಜ ಪರವಣ್ಣವರು ಮಾತನಾಡಿ, ವೈದ್ಯರೆಂದರೆ ದೇವರು ಅವರ ಸಮಾನರೆಂಬ ನಂಬಿಕೆ ಇದೆ, ಸಿಕ್ಕ ಅವಕಾಶವನ್ನು ಸದುಪಯೋಗ  ಪಡಿಸಿಕೊಂಡು ವೈದ್ಯರು ಮಾದರಿ ಕಾರ್ಯ ಕೈಗೊಳ್ಳಬೇಕು ಎಂದರು.

ರಾಣಿ ಚನ್ನಮ್ಮ ವೈದ್ಯರ ಸಂಘಟನೆಯ ಅಧ್ಯಕ್ಷ ಡಾ.ವೆಂಕಟೇಶ ಉಣಕಲಕರ,ಡಾ.ಮಹಾಂತೇಶ ಕಲ್ಮಠ, ಡಾ.ಚಂದ್ರಗೌಡ ಪೊಲೀಸ್ ವಾಟೀಲ, ಡಾ.ಪ್ರಸನ್ನ ತೊಂಗಲ್ಲಮಠ, ತಾ.ಮೋಹನ ಅಂಗಡಿ,ಡಾ.ವಿ.ಎಚ್ ಲಾಡಖಾನ್,ಬಾ.ಜೋಡಂಗಿ ದೇಗಾಂವ, ಡಾ.ಗುರು ಕಲ್ಮಠ,ಡಾ.ವಿಜಯ ತೇಲಿ,ಡಾ.ಸಂದೀಪ ಬಸ್ತಿ, ಡಾ.ಮಹಾಂತೇಶ ಎಳ್ಳೂರು ಹಾಗೂ ಇತರರು ಉಪಸ್ಥಿತರಿದ್ದರು…

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles