16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

‘ಸೊಸೆಗೆ ಕಿಡ್ನಿ (ಮೂತ್ರಪಿಂಡ ) ದಾನ ಮಾಡಿದ ಅತ್ತೆ”

ಹುಣಸಗಿ: ಈಗಿನ ಕಾಲದ ಅತ್ತೆ — ಸೊಸೆ ಎಂದರೆ ಕಲಹ, ವೈಮನಸು, ಸಿಡುಕು, ಇರಿಸು, ಮುನಿಸು, ಎಂಬುದು ಸಹಜ ಆದರೆ ಇನ್ನೊಬ್ಬರು. ಅತ್ತೆ, ತಮ್ಮ ಸೊಸೆಗೆ ಕಿಡ್ನಿ ದಾನ ಮಾಡಿ ತಾಯಿಯಾಗಿದ್ದಾರೆ.

ಹುಣಸಗಿ ತಾಲೂಕಿನ ಗಡಿ ಗ್ರಾಮವಾದ ಮಾಳನೂರು ಗ್ರಾಮದ ಶಾಂತಾಬಾಯಿ ಮೇಲಿನಮನಿ ತಮ್ಮ ಕಿಡ್ನಿ ದಾನ ಮಾಡಿ ದಾನಿಯಾಗಿದ್ದಾರೆ.

ಶಾಂತಾಬಾಯಿ ಗುರಣ್ಣ ದಂಪತಿಯ ಪುತ್ರ ಪ್ರಕಾಶ್ ಅವರೊಂದಿಗೆ 14 ವರ್ಷಗಳ ಹಿಂದೆ ತಾಳಿಕೋಟಿ ತಾಲೂಕಿನ ಹೊಸಳ್ಳಿ ಗ್ರಾಮದ ಬಸ್ಸಮ್ಮ ಅವರೊಂದಿಗೆ ಮದುವೆಯಾಗಿತ್ತು. ಖಾಸಗಿ ವಾಹನ ಚಾಲಕರಾಗಿ ಪ್ರಕಾಶ್, ರವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಮದುವೆ ಬಳಿಕ ಬಸ್ಸಮ್ಮ ಆರೋಗ್ಯವಾಗಿದ್ದ ಮೊದಲ ಮಗು ಮಣಿಕಂಠನ ಹೆರಿಗೆ ಸಮಯದಲ್ಲಿ ಕಿಡ್ನಿ ಸಮಸ್ಯೆ ತಿಳಿದಿದೆ. ಬಳಿಕ ವಿಜಯಪುರದ ಯಶೋಧ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಲಾಗುತ್ತಿತ್ತು. ಆದರೆ ಕೆಲ ತಿಂಗಳಿಂದ ಸಮಸ್ಯೆ ಹೆಚ್ಚಾಗಿ ಕಿಡ್ನಿ ಬದಲಿಸಬೇಕಾಯಿತು, ಆಗ ಸಂಬಂಧಿಗಳು ನೆರವಿಗೆ ಬರಲು ಭರವಸೆ ನೀಡಿದರು.

ನಮ್ಮ ತಾಯಿ ಶಾಂತಾಬಾಯಿ (62) ರವರು ಸೊಸೆಗೆ ಕಿಡ್ನಿ ಸ್ನಾನ ಮಾಡಲು ಮುಂದಾದರು. ಪತ್ನಿ ಬಸ್ಸಮ್ಮ ಹಾಗೂ ನಿಮ್ಮ ತಾಯಿಯ ರಕ್ತ ಮ್ಯಾಚ್ ಮಾಡಿ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು. ಹತ್ತು ದಿವಸದ ಹಿಂದೆ ಆಪರೇಷನ್ ಮಾಡಲಾಗಿದ್ದು ಇಬ್ಬರು ಆರೋಗ್ಯದಿಂದ ಇದ್ದಾರೆ ಎಂದು ಮಗ ಪ್ರಕಾಶ್ ಮೇಲಿನ ಮನೆ ಮಾಹಿತಿ ನೀಡಿದರು.

ಸೊಸೆ ಬಸ್ಸಮ್ಮ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ನಾನು ಆತ್ಮಕ್ಕೆ ತೃಪ್ತಿಯಿಂದ ಕಿಡ್ನಿಯನ್ನು ದಾನ ಮಾಡಿದ್ದೇನೆ. ನಮ್ಮ ಕುಟುಂಬ ಚೆನ್ನಾಗಿ ಇರಲಿ ಎಂಬುದು ಮುಖ್ಯ ಉದ್ದೇಶ, ಎಂದು ಶಾಂತಾಬಾಯಿ ಮೇಲಿನಮನಿಯವರು ತಿಳಿಸಿದರು.

ಅತ್ತೆ — ಸೊಸೆ ಇಬ್ಬರು ಸಮಾಜಕ್ಕೆ ಮಾದರಿಯಾಗಿ ಕಾರ್ಯ ಮಾಡಿ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಬೇಗ ಗುಣಮುಖರಾಗಿ ವಾಪಸ್ ಆಗಲಿ ಎಂದು ಪ್ರಭುಗೌಡ ಗದ್ದಿಗಪ್ಪಗೋಳ, ತಿಪ್ಪಣ್ಣ ಕಾರನೂರ, ವೀರೇಶ್ ಹಾಗೂ ಗ್ರಾಮಸ್ಥರು ಹೇಳಿದರು.

ಕಿಡ್ನಿ ದಾನ ಮಾಡಿರುವ ಅತ್ತೆ ಶಾಂತ ಬಾಯಿ ಮೇಲಿನ ಮನೆ ಅವರು ಹೇಳಿದಂತ ಒಂದು ಮಾತು ದೇವರು ಎರಡು ಕಿಡ್ನಿ ಕೊಟ್ಟಿದ್ದಾನೆ. ಸೊಸೆಗೆ ತೊಂದರೆ ಆಗಿದ್ದರಿಂದ ಅವರು ಚೆನ್ನಾಗಿ ಇರಲಿ ಎಂಬ ಸದುದ್ದೇಶದಿಂದ ಒಂದು ಕಿಡ್ನಿ ದಾನ ಮಾಡಿದ್ದೇನೆ ಎಂದು ಒಳ್ಳೆಯ ಅಭಿಪ್ರಾಯ ಮತ್ತು ಸಂದೇಶ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles