ಕೆಲೂರ:ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಎಸ್.ಸಿ.ಪಿ./ಟಿ.ಎಸ್.ಪಿ ಯೋಜನೆಯಡಿ 25 ಲಕ್ಷ ರೂಪಾಯಿ ಅನುದಾನದಲ್ಲಿ ಅಲೆಮಾರಿ ಗ್ರಂಥಾಲಯ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯವನ್ನು ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ನೆರವೇರಿಸಿದರು.
ಕೆಲೂರ ಗ್ರಾಮದಲ್ಲಿ ಅಲೆಮಾರಿ ಗುಂಪಿಗೆ ಸೇರಿದ ಹೆಳವ,ಕೊರಮ,ಕಿಳ್ಳಿಕ್ಯಾತರ ಸಮುದಾಯದ 150 ಕ್ಕೂ ಹೆಚ್ಚು ಮನೆಗಳಿದ್ದು ಸರ್ಕಾರದ ಯೋಜನೆಯೊಂದರಲ್ಲೊಂದಾದ ಅಲೆಮಾರಿ ಜನಾಂಗದವರಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪ್ರಾರಂಭಿಸಲಾದ ಅಲೆಮಾರಿ ಗ್ರಂಥಾಲಯ ಸ್ವಂತ ಕಟ್ಟಡವಿಲ್ಲದೆ ಅಲೆದಾಡುವ ಪರಿಸ್ಥಿತಿಯಲ್ಲಿತ್ತು.ಮಾನ್ಯ ಶಾಸಕರು ಸದರಿ ಗ್ರಂಥಾಲಯಕ್ಕೆ ಅನುದಾನ ಮಂಜೂರಿ ನೀಡಿ ಅಲೆಮಾರಿ ಗ್ರಂಥಾಲಯಕ್ಕೆ ಸೂರು ಮಾಡಿಕೊಟ್ಟರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಅಲೆಮಾರಿ ಸಮುದಾಯವು ತೀರಾ ಹಿಂದುಳಿದ ಸಮುದಾಯವಿದ್ದು ಈ ಸಮುದಾಯದವರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಯಾವುದೇ ತೊಡಕಿಲ್ಲದೆ ಸಿಗುವಂತೆ ಕ್ರಮವಹಿಸುತ್ತೇನೆ.ಹಿಂದುಳಿದ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಲು ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಳ್ಳುತ್ತೇನೆ.ಅಲ್ಲದೆ ಹೆಳವರು ಯಾವತ್ತು ನಮ್ಮ ಜೊತೆ ಹಾಗೂ ಈ ಗ್ರಾಮದವರ ಜೊತೆ ಒಳ್ಳೆಯ ಒಡನಾಟದಿಂದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ,ಪಿಕೆಪಿಎಸ್ ಅಧ್ಯಕ್ಷರಾದ ವಜಿರಪ್ಪ ಪೂಜಾರ,ಗ್ರಾಮದ ಹಿರಿಯರಾದ ಅಪ್ಪಾಸಾಹೇಬ ನಾಡಗೌಡರ,ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಶ್ರೀಮತಿ ಹಜಿರಾ ನದಾಫ್,ಅಲೆಮಾರಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಹೆಳವರ ಹಾಗೂ ಗ್ರಾಮದ ಹಿರಿಯರು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಅಲೆಮಾರಿ ಗ್ರಂಥಾಲಯ ಕಟ್ಟಡದ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ