15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶ್ರೀ ಎಸ್.ಆರ್.ರಸೂಲ್ ಸಾಬ್ ಎ.ಪಿ.ಎಮ್.ಸಿ.ಯ ಮಾಜಿ.ಉಪಾಧ್ಯಕ್ಷರು. ಲಿಂಗಸುಗೂರ. ಹಾಗೂ ಮುದ್ಗಲ್ ಪುರಸಭಯ ಸದಸ್ಯರು.ಅವರಿಗೆ ಸನ್ಮಾನ ಕಾರ್ಯಕ್ರಮ.

📰

ಅಖಿಲ ಭಾರತೀಯ ರಾಹುಲ್ ಗಾಂಧಿ ಬ್ರಿಗೇಡ್ ವತಿಯಿಂದ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ರೀ ಎಸ್.ಆರ್. ರಸೂಲ್ ಸಾಬ್ ಅವರಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಹಿತೈಷಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ರಸೂಲ್ ಸಾಬ್ ಅವರಿಗೆ ಹೂಮಾಲೆ ಹಾಕಿ, ಶಾಲ್ ಹೊದೆಸಿ, ಸಿಹಿ ತಿನಿಸಿ ಸನ್ಮಾನಿಸಲಾಯಿತು. ದೀರ್ಘಕಾಲದಿಂದ ಕಾಂಗ್ರೆಸ್ ಪಕ್ಷದ ತತ್ವ-ಆದರ್ಶಗಳನ್ನು ಕಾಪಾಡಿ, ನೆಲಮಟ್ಟದ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಾ ಬಂದಿರುವ ಇವರ ನೇಮಕವು ಪಕ್ಷದ ಬಲವರ್ಧನೆಗೆ ಮತ್ತಷ್ಟು ದಿಕ್ಕುನಿಡಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ರಾಜಕೀಯ ಕ್ಷೇತ್ರದಲ್ಲಿ ಜನಸೇವೆಯನ್ನು ಧ್ಯೇಯವನ್ನಾಗಿಸಿಕೊಂಡಿರುವ ರಸೂಲ್ ಸಾಬ್ ಅವರು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಶಕ್ತಿ ತುಂಬಿ, ಸಾಮಾನ್ಯ ಜನರ ಧ್ವನಿಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆಂಬ ವಿಶ್ವಾಸವನ್ನು ಸಹೋದ್ಯೋಗಿಗಳು ಹಂಚಿಕೊಂಡರು.
ಮುದುಗಲ್ ಪಟ್ಟಣದ ಕಿಸಾನ್ ಬೋರವೆಲ್ ಮಾಲೀಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಬುಡ್ನೆಸಾಬ ಬೋರವೆಲ್ ಮತ್ತು ಬಸವರಾಜ ಪೂಜಾರಿ ಲೆಕ್ಕಿಹಾಳ ಹಾಗೂ ಆನೆ ಹೊಸೂರು ಗ್ರಾಮದ ಕಾಂಗ್ರೆಸ್ ಮುಖಂಡರಾದ ಹುಸೇನ್ ಸಾಬ ಮತ್ತು ಮಷಾಕ್ ಸಾಬ ಉಪಸ್ಥಿತರಿದ್ದರು, ಹಾಗು ಕೃಷ್ಣ ಚಲವಾದಿ ಅಧ್ಯಕ್ಷರು ಪರಿಶಿಷ್ಟ ಜಾತಿ S c Cell ಬ್ಲಾಕ್ ಕಾಂಗ್ರೆಸ್ ಸಮಿತಿ ಮುದಗಲ್ ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ ಹಲವಾರು ನಾಯಕರು, ಸ್ನೇಹಿತರು ಹಾಗೂ ಪಕ್ಷದ ಹಿತೈಷಿಗಳು ಭಾಗವಹಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಶ್ರೀ ಎಸ್.ಆರ್. ರಸೂಲ್ ಸಾಬ್ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಭವಿಷ್ಯದ ರಾಜಕೀಯ ಜೀವನದಲ್ಲಿ ಇನ್ನಷ್ಟು ಯಶಸ್ಸು ಗಳಿಸಲು ಶುಭಾಶಯಗಳು.

ವರದಿ-ಆಂಜನಯ.ಮಟ್ಟೂರ.


Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles