15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರಕಾರದ ಸಾಮಾಜಿಕ ಭದ್ರತೆ ಯೋಜನೆ ಸದುಪಯೋಗ ಪಡೆದುಕೊಳ್ಳಿ ಎಂದು – ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ವ್ಯವಸ್ಥಾಪಕರಾದ ವಿನೋದ್ ಕುಮಾರ್

ಸುರುಪುರ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಮತ್ತು ಜೀವನ ಸುರಕ್ಷಾ ವಿಮಾ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್. ಮಾಲಗತ್ತಿ ವ್ಯವಸ್ಥಾಪಕರಾದ ವಿನೋದ್ ಕುಮಾರ್ ತಿಳಿಸಿದರು.

ಇಂದು ಮಾಲಗತ್ತಿ ಶಾಖೆಯಲ್ಲಿ ಅಯ್ಯಣ್ಣ ತಂದೆ ಬಸವರಾಜ ಯನಗುಂಟಿ ಯವರಿಗೆ 4 ಲಕ್ಷ ರೂಪಾಯಿ ವಿಮಾ ಪರಿಹಾರ ನೀಡುವದರ ಮುಖಾಂತರ ವಿವೇಶನಗಳ ಬಗ್ಗೆ ವಿವರಣೆ ನೀಡಿದರು.

ಇತ್ತೀಚೆಗೆ ಅಯ್ಯಣ್ಣ ತಂದೆ ಬಸವರಾಜ ಯನಗುಂಟಿ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ವಿಮಾ ಪರಿಹಾರ ಚೆಕ್ ನೀಡಿ ಎಲ್ಲಾ ಗ್ರಾಹಕರು ಸಾರ್ವಜನಿಕರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಅಧಿಕಾರಿ ಸಾಯಿ ರಾಮ್ ಹಾಗೂ ಬಸನಗೌಡ ಬಿಸಿ ಜಿಲ್ಲಾ ಸಂಯೋಜಕರು ಅವರು ಸರಕಾರ ಅತಿ ಕಡಿಮೆ ಪ್ರೀಮಿಯಂ ನಲ್ಲಿ 18 ರಿಂದ 50 ವರ್ಷದ ಒಳಗಿನವರಿಗೆ ವಾರ್ಷಿಕ 436 ರೂಪಾಯಿ ವಿಮಾ ಪ್ರೀಮಿಯಂ ಪಾವತಿಸಿದರೆ. ಸಾಮಾನ್ಯ ಸಾವು ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ. ಹಾಗೂ 18 ವರ್ಷದಿಂದ ಫಸ್ಟ್ ವರ್ಷದ ಒಳಗಿನವರಿಗೆ ವಾರ್ಷಿಕ 20 ರೂಪಾಯಿ ವಿಮಾ ಪ್ರೀಮಿಯಂ ಪಾವತಿಸಿದರೆ ಅಪಘಾತದಲ್ಲಿ ಸಾವು ಸಂಭವಿಸಿದರೆ ಎರಡು ಲಕ್ಷ ರೂಪಾಯಿ ಪರಿಹಾರ ದೊರೆಯಲ್ಲಿದೆ ಎಂದು ತಿಳಿಸಿದರು.

ವಿಮಾ ಪರಿಹಾರ ಪಡೆದ ಅಯ್ಯಣ್ಣ ತಂದೆ ಬಸವರಾಜ್ ಯನಗುಂಟಿ ಮಾಲಗತ್ತಿ ಅವರು ವಿಮಾ ಪರಿಹಾರ ದೊರಕಿಸಿಕೊಟ್ಟ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಶ್ರೀ ರಾಮಾಂಜನೇಯಲು ಕ್ಯಾಶಿಯರ್ ಹಾಗೂ ಚಂದ್ರಶೇಖರ್ ಯನಗುಂಟಿ ಬ್ಯಾಂಕ್ ಮಿತ್ರ ಮತ್ತು ಶಮಿ ಮಕಂದಾರ ಬ್ಯಾಂಕ್ ಕ್ಯಾಜ್ವಲ್ ವರ್ಕರ್ ಸೇರಿದಂತೆ ಹಾಗೂ ಊರಿನ ಗ್ರಾಮಸ್ಥರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles