ವಿಶೇಷ ವರದಿ: ಸುರಪುರ ತಾಲೂಕು ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಯಿಂದ ಶ್ರೀ ಅಬ್ದುಲ್ ಪಟೇಲ್ ಅವರಿಗೆ ಗೌರವ
ಸುರಪುರ:
ಜಿಲ್ಲಾ ಪಂಚಾಯತ್ ಯಾದಗಿರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯತ್ ಸುರಪುರ ಅವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಲಗತ್ತಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ಅಬ್ದುಲ್ ಪಟೇಲ್ ಅವರಿಗೆ “ತಾಲೂಕು ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಪತ್ರದ ಪ್ರಮುಖ ವಿವರಗಳು:
ಸನ್ಮಾನಿತರು: ಶ್ರೀ ಅಬ್ದುಲ್ ಪಟೇಲ್ (ಮುಖ್ಯ ಗುರುಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆ, ಮಾಲಗತ್ತಿ).
ಕಾರ್ಯಕ್ರಮ: ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ 2026, ಸುರಪುರ.
ಆಯೋಜಕರು: ಜಿಲ್ಲಾ ಪಂಚಾಯತ್ ಯಾದಗಿರಿ, ಶಾಲಾ ಶಿಕ್ಷಣ ಇಲಾಖೆ, ಮತ್ತು ತಾಲೂಕು ಪಂಚಾಯತ್ ಸುರಪುರ/
ದಿನಾಂಕ ಹಾಗೂ ಸ್ಥಳ: ಗರುಡಾದ್ರಿ ಕಲಾಮಂದಿರ 25-09-2026 ರಂದು ಸುರಪುರದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿಯ ವಿವರ: ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಗಣನೀಯ ಹಾಗೂ ಮೌಲ್ಯಯುತ ಸೇವೆಯನ್ನು ಗುರುತಿಸಿ “ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಪತ್ರಕ್ಕೆ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುರಪುರ ಇವರು ಸಹಿ ಮಾಡಿ ಶುಭ ಕೋರಿದ್ದಾರೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಅಬ್ದುಲ್ ಪಟೇಲ್ ಅವರು ಸಲ್ಲಿಸಿದ ಸೇವೆಯನ್ನು ಪ್ರಶಂಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ವರದಿ: ಬಸವರಾಜ್ ಕಾರನೂರು

