14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಇಬ್ಬರು ಹೆಂಡಿರ ಮುದ್ದಿನ ಗಂಡ.. ಮಕ್ಕಳು-ಮೊಮ್ಮಕ್ಕಳನ್ನ ಅಗಲಿ ಜೀವನದ ಯಾನ ಮುಗಿಸಿದ ಧರ್ಮೇಂದ್ರ! ʻಹಿ-ಮ್ಯಾನ್‌ʼ ಕಳೆದುಕೊಂಡು ಬಾಲಿವುಡ್‌ ಅನಾಥ

Dharmendra family: ಹಿರಿಯ ನಟ ಧರ್ಮೇಂದ್ರ ಅವರ ನಿಧನ ಅಸಂಖ್ಯಾತ ಅಭಿಮಾನಿಗಳು ಮತ್ತು ಇಡೀ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಇತ್ತೀಚೆಗೆ ಅಗಸ್ತ್ಯನಂದ ಅಭಿನಯದ “21” ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಧರ್ಮೇಂದ್ರ ಅವರ ನೋಟವನ್ನ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದರು.

ಆದರೆ ಇದೀಗ ಹಿರಿಯ ನಟನ ನಿಧನದ ಸುದ್ದಿ ಬಿಗ್‌ ಶಾಕ್‌ ನೀಡಿದೆ. ಧರ್ಮೇಂದ್ರ 65 ವರ್ಷಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರರಂಗದಲ್ಲಿ ಆಳ್ವಿಕೆ ನಡೆಸಿ ಜೀವನದ ಯಾನ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಇಡೀ ಕುಟುಂಬದ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ನಟ ಧರ್ಮೇಂದ್ರ ಅವರು ಎರಡು ಬಾರಿ ವಿವಾಹವಾಗಿದ್ದರು. ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಅವರ ಎರಡನೇ ಪತ್ನಿ ಬಾಲಿವುಡ್‌ನ ಕನಸಿನ ಹುಡುಗಿ ಹೇಮಾ ಮಾಲಿನಿ. ಹೇಮಾ ಮಾಲಿನಿಯೊಂದಿಗಿನ ಅವರ ವಿವಾಹವು ಆ ಸಮಯದಲ್ಲಿ ವಿವಾದದಲ್ಲಿ ಸಿಲುಕಿತ್ತು. ಆದರೆ ಧರ್ಮೇಂದ್ರ ಅವರ ಕುಟುಂಬ ಎಷ್ಟು ದೊಡ್ಡದು ಮತ್ತು ಅವರ ಕುಟುಂಬ ಸದಸ್ಯರು ಏನು ಮಾಡುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಪ್ರಕಾಶ್ ಕೌರ್ ಜೊತೆ ಮದುವೆ

ಧರ್ಮೇಂದ್ರ ಅವರ ಕುಟುಂಬದ ಹೆಚ್ಚಿನ ಸದಸ್ಯರು ಒಂದಲ್ಲ ಒಂದು ರೀತಿಯಲ್ಲಿ ಬಾಲಿವುಡ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 1954ರಲ್ಲಿ ಪ್ರಕಾಶ್ ಕೌರ್ ಅವರನ್ನ ವಿವಾಹವಾದರು, ಆಗ ಧರ್ಮೇಂದ್ರ ಕೇವಲ 19 ವರ್ಷ ವಯಸ್ಸಿನವರಾಗಿದ್ದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಅವರೇ ಅಜಯ್ ಸಿಂಗ್ ಡಿಯೋಲ್ (ಸನ್ನಿ ಡಿಯೋಲ್), ವಿಜಯ್ ಸಿಂಗ್ ಡಿಯೋಲ್ (ಬಾಬಿ ಡಿಯೋಲ್), ವಿಜೇತ ಡಿಯೋಲ್ ಮತ್ತು ಅಜಿತಾ ಡಿಯೋಲ್. ಸನ್ನಿ ಮತ್ತು ಬಾಬಿ ತಮ್ಮ ತಂದೆಯಂತೆಯೇ ಚಿತ್ರೋದ್ಯಮಕ್ಕೆ ಬರುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಏತನ್ಮಧ್ಯೆ ವಿಜೇತಾ ಮತ್ತು ಅಜಿತಾ ಚಲನಚಿತ್ರ ಪ್ರಪಂಚದಿಂದ ದೂರವಿದ್ದು, ಮಾಧ್ಯಮದ ಗಮನ ಸೆಳೆಯದಂತೆ ಖಾಸಗಿ ಜೀವನವನ್ನ ನಡೆಸುತ್ತಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಕಡಿಮೆ.

ಹೇಮಾ ಮಾಲಿನಿ ಜೊತೆ ಮದುವೆ

1980ರಲ್ಲಿ ಧರ್ಮೇಂದ್ರ ತನ್ನ ಮೊದಲ ಪತ್ನಿ ಪ್ರಕಾಶ್ ಕೌರ್ ವಿಚ್ಛೇದನದ ನಂತರ ಹೇಮಾ ಮಾಲಿನಿಯನ್ನ ವಿವಾಹವಾದರು. ಧರ್ಮೇಂದ್ರ ಅವರು ಪ್ರಕಾಶ್ ಕೌರ್‌ರನ್ನ ವಿಚ್ಛೇದನ ಮಾಡದೆ ಹೇಮಾ ಮಾಲಿನಿಯನ್ನ ವಿವಾಹವಾದ ಕಾರಣ ಆ ಸಮಯದಲ್ಲಿ ಈ ವಿವಾಹವು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಈ ಸಂಬಂಧದಿಂದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿಗೆ ಇಬ್ಬರು ಹೆಣ್ಣು ಮಕ್ಕಳಾದರು. ಅವರೇ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್. ಇಶಾ ತನ್ನ ಪೋಷಕರಂತೆ ಚಿತ್ರೋದ್ಯಮವನ್ನ ಪ್ರವೇಶಿಸಿದಳು, ಆದರೆ ಅಹಾನಾ ಮದುವೆಯ ನಂತರ ವಿದೇಶದಲ್ಲಿ ನೆಲೆಸಿದಳು. ಇತ್ತೀಚೆಗೆ ಇಶಾ ಡಿಯೋಲ್ ತನ್ನ ಪತಿ ಭರತ್ ತಖ್ತಾನಿಯಿಂದ ವಿಚ್ಛೇದನ ಪಡೆದಿದ್ದಾಳೆಂಬ ವದಂತಿಗಳಿಂದ ಸುದ್ದಿಯಲ್ಲಿದ್ದರು.

ಧರ್ಮೇಂದ್ರರ ಮಕ್ಕಳು ಮತ್ತು ಮೊಮ್ಮಕ್ಕಳು

ಧರ್ಮೇಂದ್ರ ಅವರ ಮಕ್ಕಳು, ಸೊಸೆಯಂದಿರು, ಅಳಿಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಅವರದ್ದು ಪೂರ್ಣ ಕುಟುಂಬ. ಧರ್ಮೇದ್ರರ ಹಿರಿಯ ಮಗ ಸನ್ನಿ ಡಿಯೋಲ್ 1984ರಲ್ಲಿ ಪೂಜಾ ಡಿಯೋಲ್‌ರನ್ನ ವಿವಾಹವಾದರು. ಈ ದಂಪತಿಗೆ ಕರಣ್ ಡಿಯೋಲ್ ಮತ್ತು ರಾಜ್‌ವೀರ್ ಡಿಯೋಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ, ಇಬ್ಬರೂ ಚಿತ್ರೋದ್ಯಮದಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಿದ್ದಾರೆ. ಧರ್ಮೇಂದ್ರರ ಕಿರಿಯ ಮಗ ಬಾಬಿ ಡಿಯೋಲ್ 1996ರಲ್ಲಿ ತಾನ್ಯಾ ಡಿಯೋಲ್‌ರನ್ನ ವಿವಾಹವಾದರು. ಅವರಿಗೆ ಆರ್ಯಮಾನ್ ಡಿಯೋಲ್ ಮತ್ತು ಧರಂ ಡಿಯೋಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಹೇಮಾ ಮಾಲಿನಿಯ ಪ್ರೀತಿಗಾಗಿ ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದ ಧರ್ಮೇಂದ್ರ! ಬಾಲಿವುಡ್‌ ʻಹಿ-ಮ್ಯಾನ್‌ʼ ಅಂತ್ಯಸಂಸ್ಕಾರ ನಡೆಯುವುದು ಈ ಪದ್ದತಿಯಂತೆ..

ಹೆಣ್ಣುಮಕ್ಕಳು ಮತ್ತು ಅವರ ಮಕ್ಕಳು

ಪ್ರಕಾಶ್ ಕೌರ್ ಮತ್ತು ಧರ್ಮೇಂದ್ರರಿಗೆ ಅಜಿತಾ ಮತ್ತು ವಿಜೇತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಜಿತಾ ಕಿರಣ್ ಚೌಧರಿಯನ್ನ ವಿವಾಹವಾದರು. ಈ ದಂಪತಿಗೆ ನಿಕಿತಾ ಚೌಧರಿ ಮತ್ತು ಪ್ರಿಯಾಂಕಾ ಚೌಧರಿ ಎಂಬಅ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವಿಜೇತಾ ವಿವೇಕ್ ಗಿಲ್ ಅವರನ್ನ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಪೈಕಿ ಒಬ್ಬ ಮಗಳು ಪ್ರೇರಣಾ ಗಿಲ್ ಮತ್ತು ಒಬ್ಬ ಮಗ ಸಾಹಿಲ್ ಗಿಲ್.

ಇಶಾ ಮತ್ತು ಅಹಾನಾರ ಮಕ್ಕಳು

ಧರ್ಮೇಂದ್ರರಿಗೆ ಹೇಮಾ ಮಾಲಿನಿಯಿಂದ ಇಶಾ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಶಾ ಉದ್ಯಮಿ ಭರತ್ ತಖ್ತಾನಿರನ್ನ ವಿವಾಹವಾದರು, ಆದರೆ ಅವರು 2024ರಲ್ಲಿ ಬೇರ್ಪಟ್ಟರು. ಇಶಾರಿಗೆ ರಾಧ್ಯಾ ಮತ್ತು ಮಿರಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಹಾನಾ 2014ರಲ್ಲಿ ಉದ್ಯಮಿ ವೈಭವ್ ವೋಹ್ರಾರನ್ನ ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಈ ಪೈಕಿ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles