14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅನೈತಿಕ ಸಂಬಂಧ ಮಾದಕ ವ್ಯಸನ, ಕಿರುಕುಳ : ಕರ್ನಾಟಕ ರಾಜ್ಯಪಾಲರ ಮೊಮ್ಮಗನ ವಿರುದ್ಧ ಪತ್ನಿಯಿಂದ ಗಂಭೀರ ಆರೋಪ

ಭೋಪಾಲ್: ಕರ್ನಾಟಕದ ರಾಜ್ಯಪಾಲರಾಗಿರುವ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ಅವರ ವಿರುದ್ಧ ಅವರ ಪತ್ನಿ ದಿವ್ಯಾ ಗೆಹ್ಲೋಟ್ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಪತಿ ದೇವೇಂದ್ರ ಗೆಹ್ಲೋಟ್ ಅವರು ಮಾದಕ ವ್ಯಸನಿಯಾಗಿದ್ದು, ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ತನ್ನ ಕೊಲೆಗೂ ಯತ್ನಿಸಿದ್ದು, ಕೌಟುಂಬಿಕ ಹಿಂಸೆ ನೀಡುತ್ತಿದ್ದಾರೆ, ತನ್ನ ಅಪ್ರಾಪ್ತ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ದಿವ್ಯಾ ಗೆಹ್ಲೋಟ್ ಅವರು ಆರೋಪ ಮಾಡಿದ್ದಾರೆ. ತಮ್ಮ ಕುಟುಂಬದ ಈ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ರತ್ಲಂ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರಿಗೆ ದಿವ್ಯಾ ದೂರು ನೀಡಲಾಗಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ದಿಆಗ್ರಹಿಸಿದ್ದಾರೆ.

ತನ್ನ 4 ವರ್ಷದ ಅಪ್ರಾಪ್ತ ಮಗಳನ್ನು ಅಪಹರಿಸಲಾಗಿದ್ದು, ಮಗಳನ್ನು ಉಜ್ಜಯಿನಿ ಜಿಲ್ಲೆಯ ನಾಗ್ಡಾದಲ್ಲಿ ತನ್ನ ಅತ್ತೆ-ಮಾವಂದಿರು ಬಲವಂತವಾಗಿ ಇರಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ತನ್ನ 4 ವರ್ಷದ ಮಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವಂತೆ ಕೋರಿ ಅವರು ಎಸ್‌ಪಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದಿವ್ಯಾ ಅವರ ದೂರಿನ ಪ್ರಕಾರ ಅವರ ಪತಿ ದೇವೇಂದ್ರ ಗೆಹ್ಲೋಟ್ (33), ಅಲೋಟ್‌ನ ಮಾಜಿ ಶಾಸಕರಾಗಿರುವ ಮಾವ ಜಿತೇಂದ್ರ ಗೆಹ್ಲೋಟ್ (55), ಮೈದುನ ವಿಶಾಲ್ ಗೆಹ್ಲೋಟ್ (25), ಮತ್ತು ಅಜ್ಜಿ ಅನಿತಾ ಗೆಹ್ಲೋಟ್ (60) ಅವರು 50 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಆಗ್ರಹಿಸಿ ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಮದುವೆಗೂ ಮೊದಲೇ ದೇವೇಂದ್ರ ಗೆಹ್ಲೋಟ್‌ಗೆ ಮದ್ಯಪಾನ, ಮಾದಕ ವ್ಯಸನದ ಚಟಗಳ ಜೊತೆ ಹಲವರ ಜೊತೆ ಪ್ರಣಯ ಸಂಬಂಧವಿತ್ತು. ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಮದುವೆ ಮಾಡಿಸಿದರು ಎಂದು ದಿವ್ಯಾ ಗೆಹ್ಲೋಟ್ ಆರೋಪಿಸಿದ್ದಾರೆ.

ದಿವ್ಯಾ ಗೆಹ್ಲೋಟ್ ಹಾಗೂ ದೇವೇಂದ್ರ ಗೆಹ್ಲೋಟ್ ಅವರ ಮದುವೆಯೂ 2018ರ ಏಪ್ರಿಲ್ 29 ರಂದು ಮುಖ್ಯಮಂತ್ರಿಗಳ ಕನ್ಯಾದಾನ ಯೋಜನೆಯಡಿಯಲ್ಲಿ ತಾಲ್‌ನಲ್ಲಿ ನಡೆದಿತ್ತು. ಆಗಿನ ಕೇಂದ್ರ ಸಚಿವೆ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಹಿರಿಯ ನಾಯಕರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ಮದುವೆಯಾಗಿ ಗಂಡನ ಮನೆಗೆ ಬಂದ ನಂತರವೇ ದಿವ್ಯಾಗೆ ಪತಿ ದೇವೇಂದ್ರನ ಹಲವು ಮುಖಗಳ ಪರಿಚಯ ಆಗಿದೆ. ಆತ ಮದ್ಯ ಹಾಗೂ ಮಾದಕವಸ್ತುಗಳಿಗೆ ದಾಸನಾಗಿದ್ದಲ್ಲದೇ ಹಲವು ಮಹಿಳೆಯರ ಜೊತೆಗೆ ಸಂಬಂಧ ಹೊಂದಿರುವುದು ತಿಳಿಯಿತು. ಆತ ದೈಹಿಕ ಹಿಂಸೆ ಮಾನಸಿಕ ಹಿಂಸೆಯ ಜೊತೆಗೆ ಮದುವೆಯಲ್ಲಿ ಕೊಡುವುದಾಗಿ ಹೇಳಿದ್ದ ವರದಕ್ಷಿಣೆ ಹಣಕ್ಕಾಗಿ ನಿರಂತರ ಪೀಡಿಸುತ್ತಿದ್ದ ಎಂದು ದಿವ್ಯಾ ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles