ಎಸ್ ಸಿ ಯೇತರ ತಂದೆ ಎಸ್ಸಿ ತಾಯಿಯ ಮಗು ಅಮ್ಮನ ಜಾತಿ ಏಕೆ ಪರಿಗಣಿಸಬಾರದು?: ಪ್ರಶ್ನೆ
ನವದೆಹಲಿ : ಪರಿಶಿಷ್ಟ ಜಾತಿಯ ( ಎಸ್ ಸಿ ) ಗೆ ಸೇರಿದ ಮಹಿಳೆ ಹಾಗೂ ಪರಿಶಿಷ್ಟ ಜಾತಿಗೆ ಸೇರದ ಪುರುಷನಿಗೆ ಜನಿಸಿದ ಪುತ್ರಿಗೆ ಆಕೆಯ ತಾಯಿಯ ಜಾತಿಯ ಆಧಾರದ ಮೇಲೆ ಎಸ್ ಸಿ ಪ್ರಮಾಣ ಪತ್ರವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರಮಾಣ ಪತ್ರವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿರುತ್ತದೆ. ಈ ಮೂಲಕ ತಂದೆ ಜಾತಿಯೇ ಅನುವಂಶಿಕವಾಗಿ ಮುಂದುವರಿಯುತ್ತೆಂಬ ನಿಯಮವನ್ನು ಸುಪ್ರೀಂ ಕೋರ್ಟ್ ಸಡಿಲಿಸಿದೆ.
ಕೋರ್ಟ್ ಹೇಳಿದ್ದೇನು.
ತಂದೆ ಎಸ್ಸಿ ಅಲ್ಲದಿದ್ದರೂ ತಾಯಿ ಎಸ್ ಸಿ ಸೇರಿದ್ದರೆ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಪರಿಶಿಷ್ಟ( ಎಸ್ ಸಿ ) ಜಾತಿಯ ಪ್ರಮಾಣ ಪತ್ರವನ್ನು ನೀಡಬಹುದು
ಪರಿಶಿಷ್ಟ ಜಾತಿಯ ಮಹಿಳೆ ಮೇಲ್ಜಾತಿಯ ಪುರುಷನಿಗೆ ಹುಟ್ಟುವ ಮಕ್ಕಳು ಕೂಡ ಉದ್ದೇಶಕ್ಕಾಗಿ ಎಸ್ ಸಿ ಪ್ರಮಾಣ ಪತ್ರ ಪಡೆಯಲು ಈ ನಿಯಮಕ್ಕೆ ಒಳಪಟ್ಟಿರುತ್ತಾರೆ.

