15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಭಾರತ ವೀರ ಸೈನಿಕರು ಹಾಗೂ ರೈತರನ್ನು ನೆನೆಸಪಿಸಿಕೊಂಡು ನಮ್ಮ ಜೀವನವನ್ನು ಸಕಾರ ಗೊಳಿಸಿಕೊಳ್ಳಬೇಕು…

ಭಾರತ ವೀರ ಸೈನಿಕರು ಹಾಗೂ ರೈತರನ್ನು ನೆನೆಸಪಿಸಿಕೊಂಡು ನಮ್ಮ ಜೀವನವನ್ನು ಸಕಾರ ಗೊಳಿಸಿಕೊಳ್ಳಬೇಕು…

ಶಿಗ್ಗಾಂವಿ: ಭಾರತ ವೀರ ಸೈನಿಕರು ಹಾಗೂ ರೈತರನ್ನ ನೆನೆಸಿಕೊಂಡು ನಮ್ಮ ಜೀವನವನ್ನು ಸಕಾರ ಗೊಳಿಸಿಕೊಳ್ಳಬೇಕೆಂದು ಹಾಗೂ ಅವರೇ ನಮ್ಮ ದೇಶದ ಬೆನ್ನೆಲುವೆಂದು ಎಂದು ಶ್ರೀ ಐ.ಡಿ ಗುಂಜಾಳ್ ನಿವೃತ್ತ ಮುಖ್ಯೋಪಾಧ್ಯಾಯರು ಮಾಡರ್ನ್ ಹೈಸ್ಕೂಲ್ ಬಂಕಾಪುರ ಹೇಳಿದರು, ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಶಿಗ್ಗಾಂವ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿ ನಮ್ಮ ದೇಶಕ್ಕೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ನಮ್ಮ ದೇಶದ ಯುವಶಕ್ತಿ ಜಾಗೃತರಾಗಬೇಕೆಂದು ಹೇಳಿದರು,
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಲಿಂಗಯ್ಯ ಹಿರೇಮಠ್ ಅವರು ನಮ್ಮ ದೇಶ ನಮ್ಮ ನಾಡು ನುಡಿಗಾಗಿ ದೇಶದ ಜನತೆ ಸದಾ ಕಾಲ ಯೋಚನೆಯನ್ನು ಮಾಡಬೇಕು, ಹಾಗೂ ದೇಶಕ್ಕೆ ಉಗ್ರಗಾಮಿ ಸಂಘಟನೆಗಳು ದಾಳಿ ಮಾಡಿದರು ಅದನ್ನು ಯಶಸ್ವಿಯಾಗಿ ತಡೆದು ಹಿಮ್ಮೆಟ್ಟಿಸುವ ಸಾಮರ್ಥ್ಯ ನಮ್ಮ ಭಾರತ ದೇಶಕ್ಕೆ ಇದೆ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಬಿ ವೈ ತೊಂಡಿಹಾಳ್, ಪದವಿ ಪೂರ್ವ ವಿದ್ಯಾಲಯ ಪ್ರಾಚಾರ್ಯರು ಪ್ರೊ, ಎಫ್ ಎಸ್ ಶಿವಣ್ಣನವರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ, ಹೆಚ್ , ಕೆ ವಿನಯ, ಪ್ರೊ, ಬಸವರಾಜ್ ಹೊನ್ನಣ್ಣವರ್, ಪದವಿ ಮತ್ತು ಪದವಿಪೂರ್ವ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸಹನಾ ಹರಕುಣಿ, ಸ್ವಾಗತವನ್ನು ಕುಮಾರಿ ಚನ್ನಮ್ಮ ಬಿಂಕದಕಟ್ಟಿ, ವಂದನಾರ್ಪಣೆ ಕುಮಾರಿ ಹೇಮಾ ವಾಲಿಕರ್ ಕೋರಿದರು, ಕಮಾಂಡಿಂಗ್ ಕುಮಾರ ಸಂಜು ಗ್ಯಾನಪ್ಪನವರ್ ನೆರವೇರಿಸಿದರು,

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles