15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಶಹಾಪುರ ತಾಲೂಕಿನ ಹೊಸಕೇರಾದಲ್ಲಿ ಬಾಲಮೇಳ: ಪೂರ್ವ ಪ್ರಾಥಮಕ ಶಿಕ್ಷಣ ಮಹತ್ವದ ಕುರಿತು ಸಮುದಾಯ ಜಾಗೃತಿ..

ಶಹಾಪುರ: ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಸಮಗ್ರ ಶಿಷ್ಯ ಅಭಿವೃದ್ಧಿ ಯೋಜನೆ . ಶಹಾಪುರ ಶಿಕ್ಷಣ ಇಲಾಖೆ. ಶಹಾಪುರ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದೊಂದಿಗೆ ಹೊಸಕೇರದಲ್ಲಿ ಬಾಲಮ್ಮೇಳ ಆಯೋಜನೆ ವನದುರ್ಗ ವಲಯದ ಹೊಸಕೇರಾ ಗ್ರಾಮದಲ್ಲಿರುವ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಬಾಲಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಹಾಗೂ 120ಕ್ಕೂ ಹೆಚ್ಚು ಪೋಷಕರು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿ ಪೂರ್ವ ಪ್ರಾರ್ಥಮಿಕ ಶಿಕ್ಷಣದ ಮಹತ್ವ. ಮಕ್ಕಳ ಸಮಗ್ರ ಬೆಳವಣಿಗೆ. ಹಾಗೂ ಪೋಷಕರ ಪಾತ್ರ ಕುರಿತು ಸಮುದಾಯ ಭವನದಲ್ಲಿ ಜಾಗೃತಿ ಮೂಡಿಸಲಾಯಿತು. ಮಕ್ಕಳ ಕಲಿಕೆಯಲ್ಲಿ ಆಟ ಹಾಡು ಕಥೆ ಮತ್ತು ಸೃಜನಶೀಲ ಚಟುವಟಿಕೆಗಳ ಮಹತ್ವವನ್ನು ವಿವರಿಸಲಾಯಿತು.

ಬಾಲ ಮೇಳದಲ್ಲಿ ಮಕ್ಕಳ ಹಾಡುಗಳು, ಕ್ರಿಯಾ ಗೀತೆಗಳು, ಕಥೆ ಹೇಳುವುದು ,ಕಥೆ ಕೇಳುವುದು, ನಾಟಕ ಪ್ರದರ್ಶನಗಳು, ಹಾಗೂ ಸೃಜನಶೀಲ ಆಟಗಳ ಮೂಲಕ ತಮ್ಮ ಕಲಿಕೆಯನ್ನು ಪ್ರದರ್ಶಿಸಿದರು. ಮಕ್ಕಳ ಉತ್ಸಹಬರಿತ ಪ್ರದರ್ಶನಗಳು ಪೋಷಕರ ಹಾಗೂ ಗ್ರಾಮಸ್ಥರ ಮೆಚ್ಚುಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಪೋಷಕರು ಮತ್ತು ಮಕ್ಕಳು ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಲಾಯಿತು. ಬಾಲ್ಯ ವ್ಯವಸ್ಥೆಯಲ್ಲಿನ ಸೂಕ್ತ ಕಲಿಕಾ ಅನುಭವಗಳ ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯವಾಗುತ್ತವೆ ಎಂದು ವಕ್ತಾರರು ತಿಳಿಸಿದರು.

ಬಾಲ ಮೇಳ ಕಾರ್ಯಕ್ರಮ ಸಮುದಾಯದ ಒಗ್ಗಟ್ಟನ್ನು ಬಲಪಡಿಸುವ ಜೊತೆಗೆ ಪೂರ್ವ ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಜನಸಾಮಾನ್ಯರೊಳಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಅಜೀಂ ಪ್ರೇಮ್ ಜೀ ಫೌಂಡೇಶನ್ ಜಿಲ್ಲಾ ಸಂಚಾಲಕರು ಶ್ರೀಯುತ ಮುತ್ತುರಾಜ್ ,ನ್ಯಾಯಬೆಲೆ ಅಂಗಡಿಯ ಮಾಲೀಕರು, ಶ್ರೀ ಮಲ್ಲಣ್ಣ ಸಾಹು, ಪ್ರಾಥಮಿಕ ಶಾಲೆಯ ಶಿಕ್ಷಕರಾದ ಚಂದಪ್ಪ ಶಿಕ್ಷಕರು, ಅಂಬರೀಶ್ ಶಿಕ್ಷಕರು , ಸಿದ್ದಮ್ಮ ಶಿಕ್ಷಕಿಯರು , ಸಾಯಬಣ್ಣ ಶಿಕ್ಷಕರು, ಲಕ್ಷ್ಮಿ ಶಿಕ್ಷಕರು ಭಾಗವಹಿಸಿದ್ದರು.

ಊರಿನ ಹಿರಿಯರಾದ ಹನುಮಂತರಾಯ ಮೇಸ್ತ್ರಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ್ ಕೋರಿ, ಅಧ್ಯಕ್ಷರಾದ ಪರಶುರಾಮ್, ಉಪಾಧ್ಯಕ್ಷರಾದ ಶಿವಲಿಂಗಮ್ಮ, ಕಿರಿಯ ಆರೋಗ್ಯ ಸಹಾಯಕರಾದ ಕುಮಾರಿ ವಿಜಯಲಕ್ಷ್ಮಿ, ಭೀಮಣ್ಣ, ಬಸವರಾಜ್ ನಂದಳ್ಳಿ, ಶಿವಪ್ಪ ಜಾಲಹಳ್ಳಿ, ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಚಂದಪ್ಪ ಕಿಲಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆರಾದ ತಾಯಮ್ಮ, ಮಂಜುಳಾ, ಹಣಮಂತಿ, ಮಂಜುಳಾ , ಕಮಲಾ, ಸುಮಾ, ಅನುಸೂಯ, ಸುಗಂಧ ಹಾಗೂ ಸಹಾಯಕರು ಮತ್ತು ಮಕ್ಕಳ ತಾಯಂದಿರು ಹಾಗೂ ಸ್ತ್ರೀಶಕ್ತಿ ಸಂಘದವರು ಮಹಿಳೆಯರು ಮತ್ತು ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.

ವರದಿಗಾರರು: ವಿಜಯ್ ಕುಮಾರ್ ದರ್ಶನಾಪುರ್.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles