14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ತನಿಖೆಯಿಂದ ಸಿ ಜೆ ರಾಯ್ ಆತ್ಮಹತ್ಯೆಗೆ ಕಾರಣ ತಿಳಿಯ ಬೇಕಿದೆ: ದಿನೇಶ್ ಗುಂಡೂರಾವ್

ತನಿಖೆಯಿಂದ ಸಿ ಜೆ ರಾಯ್ ಆತ್ಮಹತ್ಯೆಗೆ ಕಾರಣ ತಿಳಿಯ ಬೇಕಿದೆ: ದಿನೇಶ್ ಗುಂಡೂರಾವ್

ಶಿವಮೊಗ್ಗ :: ಸಿಜೆ ರಾಯ್ ಆತ್ಮಹತ್ಯೆ ಕೇಸ್ ಎಸ್ ಐಟಿ ತನಿಖೆಯಿಂದ ಬಯಲು ಆಗಬೇಕಿದೆ. ಆತ್ಮಹತ್ಯೆಯ ನಿಜಾಂಶಗಳು ಗೊತ್ತಾಗಬೇಕಿದೆ.
ಐಟಿ ಮತ್ತು ಇಡಿ ಬಳಕೆ ಬಗ್ಗೆ ದೇಶದಲ್ಲಿ ಜನರಲ್ಲಿ ಚಿಂತನೆ ನಡೆದಿದೆ. ಈ ಸಂಸ್ಥೆಗಳ ದುರುಪಯೋಗ ಆಗುತ್ತಿದೆ ಎಂದು ಸಾರ್ವಜನಿಕರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಜನರಿಗೆ ಭಯ ಆಗುತ್ತಿದೆ ಮತ್ತು ಅನೇಕರ ತೇಜೋವಧೆ ನಡೆಯುತ್ತಿದೆ. ರಾಜಕೀಯವಾಗಿ ಬ್ಲ್ಯಾಕ್ ಮೇಲ್ ಗೆ ಮತ್ತು ಬೇರೆ ಬೇರೆ ಉದ್ದೇಶಗಳಿಗೆ ದಾಳಿಯಾಗುತ್ತಿರುವಂತ ವ್ಯವಸ್ಥೆ ದೇಶದಲ್ಲಿದೆ. ಆದರೆ ಸಿ ಜೆ ರಾಯ್ ಆತ್ಮಹತ್ಯೆ ಕುರಿತು ಈಗಲೇ ಏನು ಹೇಳಲು ಬರುವುದಿಲ್ಲ. ತನಿಖೆಯ ಮೂಲಕವೇ ಸತ್ಯ ತಿಳಿಯಬೇಕಿದೆ.
ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಆಗುತ್ತಿದೆ. ಇಡಿ ದಾಳಿ ಪ್ರಕರಣದಲ್ಲಿ ಶೇಕಡಾ 95 ರಷ್ಟು ದಾಳಿಗೊಳಗಾದವರು ತಪ್ನು ಮಾಡಿಲ್ಲ ಎನ್ನುವುದು ಬಹಿರಂಗ ಆಗಿದೆ. ದಾಳಿಗೊಳಗಾದವರಿಗೆ ಹಿಂಸೆ ಆಗುತ್ತದೆ ಇದರಿಂದ ಸಮಸ್ಯೆ ಆಗುತ್ತಿದೆ.
ರಾಯ್ ಆತ್ಮಹತ್ಯೆ ತುಂಬಾ ಗಂಭೀರ ವಿಷಯ‌. ನಿಷ್ಪಕ್ಷಪಾತ ತನಿಖೆ ಆಗಬೇಕು ಆಗ ಸತ್ಯ ಅನಾವರಣಗೊಳ್ಳಲಿದೆ.
ಈ ಹಿನ್ನಲೆಯಲ್ಲಿ ಎಸ್ ಐಟಿಯಿಂದ ತನಿಖೆ.

ಇವತ್ತು ಆತಂಕದ ಪರಿಸ್ಥಿತಿ ಇಡಿ ಐಟಿಯಿಂದ ದೇಶದಲ್ಲಿ ಸೃಷ್ಟಿ ಆಗಿದೆ. ಜನರಿಗೆ ಸಂಸ್ಥೆ ಬಗ್ಗೆ ಅನೇಕ ಗೊಂದಲಗಳಿವೆ.
ವಿರೋಧ ಪಕ್ಷ ಮತ್ತು ವಿರೋಧ ಪಕ್ಷಕ್ಕೆ ಬೆಂಬಲ ನೀಡುವವರ ವಿರುದ್ದ ಈ ತನಿಖಾ ಸಂಸ್ಥೆಗಳು ಟಾರ್ಗೇಟ್ ಮಾಡುತ್ತಿವೆ.
ಅನೇಕ ಸರಕಾರ ಉರುಳಿಸಲು ಈ ಸಂಸ್ಥೆಗಳ ಪಾತ್ರ ಇದೆ.
ಬೇರೆ ಪಕ್ಷದದಿಂದ ನಾಯಕರುಗಳು ಬಿಜೆಪಿಗೆ ಪಕ್ಷ ಸೇರ್ಪಡೆಯಲ್ಲೂ ಈ ಸಂಸ್ಥೆಗಳ ಪಾತ್ರ ಇದೆ. ಇದೆಲ್ಲ ಜನಸಾಮಾನ್ಯರೇ ಮಾತಾಡಿಕೊಳ್ಲುತ್ತಿದ್ದಾರೆ.
ಬಿಜೆಪಿ ಎಲೆಕ್ಟ್ರೊ ಬಾಂಡ್ ಮೂಲಕ ಹಣ ಸಂಗ್ರಹಣೆ ಸಾವಿರಾರು ಕೋಟಿ ಹಗರಣ ಇದೆ. ಅವುಗಳ ತನಿಖೆಯೂ ಆಗಬೇಕು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles