ತಾಯಿ ಮೇಲೆ ಕಣ್ಣೀಟ್ಟವನನ್ನ 16 ಬಾರಿ ಕೊಚ್ಚಿ ಕೊಂ*ದ ಮಗ
ಅನೈತಿಕ ಸಂಬಂಧ ಆರೋಪ ಹಿನ್ನೆಲೆ 16 ಬಾರಿ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿ ಶವದ ಮೇಲೆ ಕಾಲಿಟ್ಟು ವ್ಯಕ್ತಿಯೋರ್ವ ಪೋಸ್ ಕೊಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಭಯಾನಕ ಘಟನೆ ನಡೆದಿದೆ. 51 ವರ್ಷದ ಬಸಪ್ಪ ಹೊಸಮನಿ ಮೃತ ದುರ್ದೈವಿ. ಈರಯ್ಯ ಮಠಪತಿ ಕೊಲೆ ಆರೋಪಿಯಾಗಿದ್ದಾನೆ. ರಸ್ತೆಯಲ್ಲಿ ಬರ್ತಿದ್ದ ಬಸಪ್ಪ ಹೊಸಮನಿಯನ್ನ ತಡೆದ ಈರಯ್ಯ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ತು ವರ್ಷದ ಹಿಂದೆ ಈರಯ್ಯ ತಾಯಿ ಜೊತೆಗೆ ಬಸಪ್ಪ ಓಡಿ ಹೋಗಿದ್ದ ಮತ್ತೆ ವಾಪಸ್ ಬಂದಿದ್ದ. ಇದೇ ದ್ವೇಷ ಇಟ್ಟುಕೊಂಡು ಸಾರ್ವಜನಿಕವಾಗಿ ಹತ್ಯೆ ಮಾಡಿದ್ದಾನೆ. ಇನ್ನು ಘಟನೆ ಸಂಬಂಧ ಸವದತ್ತಿ ಠಾಣೆ ಪೊಲೀಸರು ಈರಯ್ಯನನ್ನ ಬಂಧಿಸಿದ್ದಾರೆ. #ಬೆಳಗಾವಿ #belagavi #belagam #ಬೆಳಗಾಂ #viral #highlightseveryone

