16.4 C
New York
Tuesday, September 29, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕಿತ್ತೂರು ರಾಜಗುರು ಕಲ್ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಶಿವಕೀರ್ತನೆ

ಕಿತ್ತೂರು ರಾಜಗುರು ಕಲ್ಮಠದಲ್ಲಿ ಶಿವರಾತ್ರಿ ಪ್ರಯುಕ್ತ ಶಿವಕೀರ್ತನೆ

ಚನ್ನಮ್ಮನ ಕಿತ್ತೂರು,ಫೆ.13: ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಸಾಪ ಇವರ ಸಂಯುಕ್ತ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆಬ್ರುವರಿ -15 ರಂದು ಸಾಯಂಕಾಲ 7 ಗಂಟೆಗೆ ಕಲ್ಮಠ ಆವರಣದ ಶ್ರೀ ಶಂಕರ ಚಂದರಗಿ ಸಭಾಭವನದಲ್ಲಿ ಶಿವ ಕೀರ್ತನ, ಸಂಗೀತ, ಶಿವಭಜನೆ ಕಾರ್ಯಕ್ರಮ ಜರುಗಲಿದ್ದು ರಾಜಗುರು ಸಂಸ್ಥಾನ ಕಲ್ಮಠ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿಗಳ ಸಾನಿಧ್ಯದಲ್ಲಿ ಈ ಸಮಾರಂಭ ಜರುಗಲಿದೆ. ಕಾರ್ಯಕ್ರಮ ಅಧ್ಯಕ್ಷತೆ ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜಿ ವಹಿಸುವರು
ಪುಟ್ಟರಾಜ ಗವಾಯಿಗಳ ಶಿಷ್ಯರಾದ ಮಲ್ಲೂರು ಸಿದ್ರಾಮ ಶಾಸ್ತ್ರಿಗಳು ಹಿರೇಮಠ ಇವರಿಂದ ಕೀರ್ತನೆ ಮುಖ್ಯ ಅಥಿತಿಗಳಾಗಿ ಸಿಪಿಐ ಶಿವಾನಂದ ಗುಡಗನಟ್ಟಿ, ದಂತ ವೈದ್ಯ ಜಗದೀಶ ಹಾರೂಗೋಪ್ಪ, ಎಂ.ಎಸ್.ಕಲ್ಮಠ ಆಗಮಿಸುವರು. ಸಂಗೀತ ಸೇವೆ ಈಶ್ವರ ಗಡಬಿಡಿ ತಂಡದವರಿಂದ, ಹಿರೇನಂದಿಹಳ್ಳಿಯ ನಾಗಭೂಷಣ ಶಿವಯೋಗಿಗಳ ಭಜನಾ ಮಂಡಳದವರಿಂದ ಶಿವಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ಕಸಾಪ ಅಧ್ಯಕ್ಷ ಡಾ. ಎಸ್.ಬಿ. ದಳವಾಯಿ ತಿಳಿಸಿದ್ದಾರೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles