17 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹೊಸಪೇಟೆ ಕೆ ಕೆ ಆರ್‌ ಡಿ ಬಿ ಯ ಮೈಕ್ರೋ ಯೋಜನೆಯ ಎಸ್ಸಿ ಎಸ್ ಪಿ ಅನುದಾನ ದುರುಪಯೋಗ ಪ್ರಶ್ನಿಸಿದ್ದಕ್ಕೆ ರಾಘವೇಂದ್ರ ಬೋರೆಡ್ಡಿ ಗೆ ಜೀವ ಬೆದರಿಕೆ.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹೊಸಪೇಟೆ ಕೆ ಕೆ ಆರ್‌ ಡಿ ಬಿ ಯ ಮೈಕ್ರೋ ಯೋಜನೆಯ ಎಸ್ಸಿ ಎಸ್ ಪಿ ಅನುದಾನ ದುರುಪಯೋಗ ಪ್ರಶ್ನಿಸಿದ್ದಕ್ಕೆ ರಾಘವೇಂದ್ರ ಬೋರೆಡ್ಡಿ ಗೆ ಜೀವ ಬೆದರಿಕೆ.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹೊಸಪೇಟೆ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯ ಎಸ್ ಸಿ ಎಸ್ ಪಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಜನಾಂಗ ದಲಿತರು ವಾಸಿಸುವ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು 75 ಲಕ್ಷ ರೂಪಾಯಿಗಳನ್ನು ಗ್ರಾಮೀಣ ಕ್ಷೇತ್ರದ ಶಾಸಕರ ಅನುದಾನದ ಮ್ಯಾಕ್ರೋ ಯೋಜನೆಯಲ್ಲಿ ಮೀಸಲಿಡಲಾಗಿತ್ತು.
ಇದನ್ನು ಉದ್ದೇಶಪೂರ್ವಕ ದುರುಪಯೋಗಪಡಿಸಿಕೊಳ್ಳಲು ಶಾಸಕರ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಗುತ್ತೇದಾರರು ಸೇರಿಕೊಂಡು ಪರಿಶಿಷ್ಟ ಜಾತಿಯ ಜನಾಂಗ ದಲಿತರು ವಾಸವಿಲ್ಲದ ಕಾಲೋನಿಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯ ಎಸ್ ಸಿ ಎಸ್ ಪಿ ಅನುದಾನವನ್ನು ದುರುಪಯೋಗಪಡಿಸುವುದನ್ನು ರಾಘವೇಂದ್ರ ಬೋರೆಡ್ಡಿ ದಲಿತ ಸಾಮಾಜಿಕ ಹೋರಾಟಗಾರರು ಜಿಲ್ಲಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಕಾಮಗಾರಿ ಪ್ರಾರಂಭಿಸಿದ ಸ್ಥಳದಲ್ಲಿ ಪರಿಶಿಷ್ಟ ಜಾತಿ ಜನಾಂಗ ದಲಿತರು ವಾಸವಿಲ್ಲದಿರುವುದರಿಂದ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ವಂತೆ ಯೋಜನಾಧಿಕಾರಿಗಳು ನಿರ್ಮಿತಿ ಕೇಂದ್ರ ರಾಯಚೂರು ಇವರಿಗೆ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದೃಢೀಕರಣ ಸಲ್ಲಿಸಿದ್ದರು.
ಆದಾಗ್ಯೂ ಕೇರಿಗೆ ನುಗ್ಗಿ ದಲಿತರನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ನಿಂದಿಸಿ ದಲಿತರ ಕಾಲೋನಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದನ್ನು ಬಂದ್ ಮಾಡಿಸಿದ್ದರು.

ನಿರಂತರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಪತ್ರಿಕೆಗಳಲ್ಲಿ ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರೂ ಇದನ್ನು ಲಕ್ಕಿಸದೆ ಪರಿಶಿಷ್ಟ ಜಾತಿ ಜನಾಂಗ ದಲಿತರು ವಾಸವಿಲ್ಲದಿದ್ದರೂ ಕಾಮಗಾರಿಯನ್ನು ಪುನಃ ಅದೇ ಸ್ಥಳದಲ್ಲಿ ಪ್ರಾರಂಭಿಸಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಹೊಸಪೇಟೆ ಗ್ರಾಮದ ಗ್ರಾಮೀಣ ಶಾಸಕರ ಬೆಂಬಲಿಗರು ಕಾರ್ಯಕರ್ತರು ಮತ್ತು ನಿರ್ಮಿತಿ ಕೇಂದ್ರದ ಗುತ್ತೇದಾರರು ಸೇರಿಕೊಂಡು ಹೊಸಪೇಟೆ ಗ್ರಾಮಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಸಾಯಿಸುತ್ತೇವೆಂದು ಕೊಲೆ ಬೆದರಿಕೆ ಹಾಕಿದ್ದಾರೆ.
ಕಾರಣ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಜೀವ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles