14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಹಿಂದು ಧರ್ಮದ ವರ್ಷದ ಕೊನೆಯ ಹಬ್ಬ ಹೋಳಿ ಹುಣ್ಣಿಮ:, ಹೋಳಿ ಹಬ್ಬದ ಹುಟ್ಟಿನ ಬಗ್ಗೆ ಮತ್ತು ಹೋಳಿಯ ಹಬ್ಬದ ಪೂಜೆ

ಹಿಂದು ಧರ್ಮದ ವರ್ಷದ ಕೊನೆಯ ಹಬ್ಬ ಹೋಳಿ ಹುಣ್ಣಿಮ:, ಹೋಳಿ ಹಬ್ಬದ ಹುಟ್ಟಿನ ಬಗ್ಗೆ ಮತ್ತು ಹೋಳಿಯ ಹಬ್ಬದ ಪೂಜೆ ಪುನಸ್ಕಾರಗಳು ಬಗ್ಗೆ ಸಂಕ್ಷಿಪ್ತವಾದ ಮಾಹಿತಿ.

ಹೋಳಿ ಹಬ್ಬವು ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಆಚರಿಸಲ್ಪಡುವ ಬಣ್ಣಗಳ ಆನಂದೋತ್ಸವ! ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ. 

ಹೋಳಿ ಅಥವಾ ಹೋಲಿಕೆ ಎಂದರೆ ಒಂದು ದೇವಿಯೇ. ಅರಿಷಡ್ವರ್ಗಗಳ ಮೇಲೆ ಜಯಗಳಿಸುವ ಕ್ಷಮತೆಯು ಈ ಹೋಲಿಕೆಯಲ್ಲಿರುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳ ನಾಶವಾಗಲೆಂದು ಹೋಲಿಕಾ ದೇವಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.

ಇತಿಹಾಸ ಪ್ರಕಾರ ಹೋಳಿ ಹಬ್ಬದ ಇತಿಹಾಸ (ಸನಾತನ ಧರ್ಮದ ಪ್ರಕಾರ)
1.ಮನ್ಮಥನ ದಹನ
ಒಮ್ಮೆ ಭಗವಾನ ಶಿವನು/ಶಂಕರನು ತಪಾಚರಣೆಯಲ್ಲಿ ಮಗ್ನರಾಗಿದ್ದನು. ಅವನು ಸಮಾಧಿ ಸ್ಥಿತಿಯಲ್ಲಿ ಇದ್ದನು. ಆಗ ಮನ್ಮಥನು ಶಿವನ ಅಂತಃಕರಣದಲ್ಲಿ ಪ್ರವೇಶಿಸಿದನು.ಶಿವನ ಮನಸ್ಸು ಕದಡಲು ಶುರುಮಾಡಿದ ಆಗ ಶಿವನು ‘ನನ್ನನ್ನು ಯಾರು ಚಂಚಲಗೊಳಿಸುತ್ತಿದ್ದಾರೆ’, ಎಂದು ಶಂಕರನು ತನ್ನ ಮೂರನೇ ಕಣ್ಣು ತೆರೆದು ಎದುರುಗಡೆ ಇರುವ ಮನ್ಮಥನನ್ನು ನೋಡಿದ ಕೂಡಲೇ ಮನ್ಮಥ ಸುಟ್ಟು ಭಸ್ಮವಾದ!
ದಕ್ಷಿಣ ಭಾರತದ ಜನರು ಕಾಮದೇವನ ದಹನದ ಮಾಡಿದ ಅದಕ್ಕಾಗಿ ಉತ್ಸವವನ್ನು ಆಚರಿಸುತ್ತಾರೆ. ಈ ದಿನದಂದು ಮನ್ಮಥನ/ಕಾಮನನ ಪ್ರತಿಮೆಯನ್ನು ಮಾಡಿ ಓಂ ಮೂರ್ತಿ ದಹನ ಮಾಡುತ್ತಾರೆ. ಈ ಮನ್ಮಥನನ್ನು ಗೆಲ್ಲುವ ಕ್ಷಮತೆಯು ಹೋಳಿಯಲ್ಲಿದೆ ! ಹೀಗೆ ರಂಗು ರಂಗಿನ ಬಣ್ಣದ ಮೂಲಕ ವರ್ಷದ ಕೊನೆಯ ಹಬ್ಬ ಎಂದು ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಬಣ್ಣ ಬಣ್ಣದ ನೀರು ಎರಚುತ್ತಾರೆ…
ಹಳೆಯ ಕಹಿನೆನಪು ಹೋಗಿ ಜೀವನದಲ್ಲಿ ಬದಲಾವಣೆ ಬರಲಿ ಬಣ್ಣ ಬಣ್ಣದ ರೀತಿ ಸಂತೋಷ ಉತ್ಸಾಹ ಮತ್ತು ಸಮೃದ್ಧಿ ತರಲಿ ಎಂದು ಬೇಡಿಕೊಳ್ಳುತ್ತಾರೆ.

2.ಕೃಷ್ಣನ ತೊಟ್ಟಿಲು ಕಾರ್ಯಕ್ರಮ
ಉತ್ತರ ಭಾರತದಲ್ಲಿ ಹೋಳಿಯ ಮೊದಲ ಮೂರು ದಿನ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ ಮತ್ತು ಅವನ ಉತ್ಸವವನ್ನು ಆಚರಿಸುತ್ತಾರೆ. ಫಾಲ್ಗುಣ ಹುಣ್ಣಿಮೆಗೆ ಪೂತನಾ ರಾಕ್ಷಸಿಯ ಪ್ರತಿಕೃತಿಯನ್ನು ಮಾಡಿ ಅದನ್ನು ರಾತ್ರಿ ಸುಡುತ್ತಾರೆ ಮರುದಿನ ಬೆಳಿಗ್ಗೆ ಬಣ್ಣ ಆಡುತ್ತಾರೆ..

3..ಸ್ಮೃತಿಕೌಸ್ತುಭ- ಭವಿಷ್ಯೋತ್ತರ ಪುರಾಣ ಪ್ರಕಾರ
ಹಿಂದಿನ ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ರಾಕ್ಷಸಿಯು ಒಂದೂರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಅವಳು ರೋಗಗಳನ್ನು ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು; ಆದರೆ ಅವಳು ಹೋಗಲಿಲ್ಲ. ಆಗ ನಾರದಮುನಿಗಳು ಸಾಮ್ರಾಟ್ ಯುಧಿಷ್ಠಿರನಿಗೆ ಒಂದು ಉಪಾಯವನ್ನು ಹೇಳಿದರು, ಅದೇ ಹೋಲಿಕಾ ಮಹೋತ್ಸವ. ಜನರು ಹೋಳಿ ಹೊತ್ತಿಸಿ, ವಾದ್ಯಗಳನ್ನು ಬಾರಿಸುತ್ತಾ ಆ ರಾಕ್ಷಸಿಯನ್ನು ಊರಿನಿಂದ ಓಡಿಹೋಗುವಂತೆ ಮಾಡಿದರು. (ಸ್ಮೃತಿಕೌಸ್ತುಭ- ಭವಿಷ್ಯೋತ್ತರ ಪುರಾಣ)

ಹೋಳಿಯ ಪೂಜೆ ಪುನಸ್ಕಾರಗಳು

  1. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ ಹೋಳಿಯ ಮುಂದೆ ಮಣೆಯ ಮೇಲೆ ಕುಳಿತುಕೊಳ್ಳಬೇಕು.
  2. ಆಚಮನ ಮಾಡಿ ದೇಶಕಾಲದ ಕಥನ ಮಾಡಿ ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಪೂಜೆಯ ಸಂಕಲ್ಪ ಮಾಡಬೇಕು.
  3. ಗಂಧ-ಪುಷ್ಪ ಅರ್ಪಿಸಿ ಕಲಶ ಹಾಗೂ ಘಂಟೆಯ ಪೂಜೆ ಮಾಡಬೇಕು.
  4. ತುಲಸಿ ದಳದಿಂದ ಪೂಜೆಯ ಸಾಹಿತ್ಯದ ಮೇಲೆ ನೀರು ಪ್ರೋಕ್ಷಣೆ ಮಾಡಬೇಕು.
  5. ಕರ್ಪೂರ ಬಳಸಿ ‘ಹೋಲಿಕಾಯೈ ನಮಃ|’ ಎಂದು ಹೇಳಿ ಹೋಳಿಯನ್ನು ಹೊತ್ತಿಸಬೇಕು.
  6. ಹೋಳಿಗೆ ಗಂಧ, ಅರಿಸಿನ, ಕುಂಕುಮವನ್ನು ಅರ್ಪಿಸಿ ಪೂಜೆಯನ್ನು ಆರಂಭಿಸಬೇಕು. ಹೂವುಗಳನ್ನು ಅರ್ಪಿಸಿ, ಊದುಬತ್ತಿ ಹಾಗೂ ದೇಪವನ್ನು ತೋರಿಸಬೇಕು.
  7. ಹೋಳಿಯಲ್ಲಿ ಹೋಳಿಗೆಯ ನೈವೇದ್ಯವನ್ನು ಅರ್ಪಿಸಬೇಕು.
  8. ಹೋಳಿಯ ಮೇಲೆ ಹಾಲು-ತುಪ್ಪದ ಮಿಶ್ರಣವನ್ನು ಪ್ರೋಕ್ಷಣೆ ಮಾಡಬೇಕು.
  9. ಹೋಳಿ ಹೊತ್ತಿದ ನಂತರ ಅದರ ಸುತ್ತ ೩ ಬಾರಿ ಪ್ರದಕ್ಷಿಣೆ ಹಾಕಬೇಕು.
  10. ಪ್ರದಕ್ಷಿಣೆ ಹಾಕಿದ ನಂತರ ಬೋರಲು ಕೈಯಿಂದ ಬೊಬ್ಬೆ ಹೊಡೆಯಬೇಕು.
  11. ಎಲ್ಲರೂ ಸೇರಿ ಅಗ್ನಿಯ ಭಯದಿಂದ ರಕ್ಷಣೆಗಾಗಿ ಪ್ರಾರ್ಥನೆ ಸಲ್ಲಿಸಿ. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಸಿಹಿಕಂಚಿ (ಚಕೋತ) ಮುಂತಾದ ಹಣ್ಣುಗಳನ್ನು ಹಂಚಬೇಕು. ಆ ರಾತ್ರಿಯನ್ನು ನೃತ್ಯಗಾಯನ ಗಳಲ್ಲಿ ಕಳೆಯಬೇಕು.
  12. ಮರುದಿನ ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಬೇಕು..

ಹೂಳಿ ಹಬ್ಬ ಬಂತು ಅಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ ಕಾಮನನ್ನು ಕುರಿಸಲು ಕಾಮನನ್ಳು ತಯಾರು ಮಾಡುಲು ಊರುರು ತಿರುಗಿ ಹಳೆ ಬಟ್ಟೆ, ದೇಣಿಗೆ ಇತ್ಯಾದಿ ಹಬ್ಬದ ತಯಾರಿ ನಡೆಸುತ್ತಾರೆ.ಕಾಮನನ್ನು ತಾವೇ ನಿರ್ಮಿಸುತ್ತಾರೆ… ದೊಡ್ಡವರು ಮಕ್ಕಳಿಗೆ ಸಹಕಾರ ಮತ್ತು ಸಹಾಯ ನೀಡುತ್ತಾರೆ
ಕೆಲವೂಮ್ಮೆ ದೊಡ್ಡವರು ಸೇರಿ ಅದ್ದೂರಿಯಾಗಿ ಕಾಮನನ್ನು ಸ್ಥಾಪನೆ ಮಾಡುತ್ತಾರೆ
ಮಕ್ಕಳು ತಮ್ಮ ಪಾಲಕರಿಂದ ತಮಟೆ, ಬಣ್ಣ ಎರಚುವ ಸಾಧನಗಳು, ಬಣ್ಣ ಪಡೆದುಕೊಂಡು ಬೀದಿಯ ಮತ್ತು ಊರಿನ ಮಕ್ಕಳು ಒಂದೆಡೆ ಸೇರಿ ಆಟ ಆಡುತ್ತಾ ತಮಟೆ ಬಾರಿಸುವುದು ಹಾಡುವುದು ಇತ್ಯಾದಿ ಹಬ್ಬದ ಕಾರ್ಯಕ್ರಮ ಮಾಡುತ್ತಾರೆ..

ಕರ್ನಾಟಕದ ಕೆಲ ಭಾಗಗಳಲ್ಲಿ ಕಾಮನನ್ನು 5, ದಿನದ ವರೆಗೆ ಸ್ಥಾಪನೆ ಮಾಡುತ್ತಾರೆ,ಕೆಲ ಭಾಗಗಳಲ್ಲಿ ಹುಣ್ಣಿಮೆ ದಿನ ಇಟ್ಟು ಮರುದಿನ ಬೆಳಿಗ್ಗೆ ಸುಟ್ಟು ಬಣ್ಣ ಆಡುತ್ತಾರೆ
ಕೆಲವರ ಸಂಪ್ರದಾಯ ಮತ್ತು ಪದ್ಧತಿ ಅನುಸಾರ ಹುಣ್ಣಿಮೆ ರಾತ್ರಿ ಕಾಮನನ ರಟ್ಟಿನಲ್ಲಿ ಕಾಮನನ ಭಾವಚಿತ್ರ ಮೂರ್ತಿ ಬಿಡಿಸಿದರೆ ಕೆಲವರು ಮೂರ್ತಿ ತಯಾರು ಮಾಡಿ ರಾತ್ರಿ ದಹನ ಮಾಡುತ್ತಾರೆ (ಸುಡುತ್ತಾರೆ)…. ಮರುದಿನ ಹಬ್ಬ ಆಚರಣೆ ಮಾಡುತ್ತಾರೆ….

ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಹಬ್ಬ ಆಚರಣೆ ಮಾಡುತ್ತಾರೆ

ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾಮದಹನದ ಸಮಯದಲ್ಲಿ ಇರಿಸುವ ಕಾಮದೇವ ಮತ್ತು ರತಿಯ ಮೂರ್ತಿಗಳ ವಿಭಿನ್ನ ಶೈಲಿಯ ಚಿತ್ರಗಳು ಕಾಣಬಹುದು

  • ಜೋಡಿ ಮೂರ್ತಿಗಳು: ಸಾಮಾನ್ಯವಾಗಿ ಮನ್ಮಥ ಮತ್ತು ಆತನ ಪತ್ನಿ ರತಿ ದೇವಿಯನ್ನು ಒಟ್ಟಿಗೆ ಇಟ್ಟು ಪೂಜಿಸಲಾಗುತ್ತದೆ.
  • ಅಲಂಕಾರ: ಇವುಗಳನ್ನು ಬಣ್ಣದ ಕಾಗದಗಳು, ಹೂವುಗಳು ಮತ್ತು ಬಟ್ಟೆಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ.
  • ಸ್ಥಳೀಯ ಕಲೆ: ಪ್ರತಿ ಊರಿನಲ್ಲೂ ಅವರದೇ ಆದ ವಿಶಿಷ್ಟ ಶೈಲಿಯಲ್ಲಿ ಈ ಮೂರ್ತಿಗಳನ್ನು ತಯಾರಿಸಲಾಗುತ್ತದೆ.
    ವಿಶೇಷವಾಗಿ ಉತ್ತರ ಕರ್ನಾಟಕದ ಬಾಗಲಕೋಟೆ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂತಹ ವೈವಿಧ್ಯಮಯ ಕಾಮನ ಮೂರ್ತಿಗಳನ್ನು ಕಾಣಬಹುದು
    ಹಲವು ಭಾಗಗಳಲ್ಲಿ ಅವರ ಅವರ ಸಂಪ್ರದಾಯದಂತೆ ಹೋಳಿ ಹಬ್ಬ ಆಚರಣೆ ಮಾಡುತ್ತಾರೆ…

ಉತ್ತರ ಕರ್ನಾಟಕದ ವಿಶಿಷ್ಟ ಶೈಲಿಯ ಮತ್ತು ಹಬ್ಬದ ಸಂದರ್ಭದಲ್ಲಿ ಕಾಣಸಿಗುವ ಕಾಮನ (ಮನ್ಮಥ-ರತಿ) ಮೂರ್ತಿಗಳ ಹೆಚ್ಚಿನ ಚಿತ್ರಗಳು ಇಲ್ಲಿವೆ:
ಈ ಚಿತ್ರಗಳಲ್ಲಿ ನೀವು ಗಮನಿಸಬಹುದು:

  • ಗ್ರಾಮೀಣ ಕಲೆ: ಇವುಗಳಲ್ಲಿ ಬಹುತೇಕ ಮೂರ್ತಿಗಳನ್ನು ಸ್ಥಳೀಯ ಕಲಾವಿದರು ಮಣ್ಣು ಮತ್ತು ಬಣ್ಣಗಳನ್ನು ಬಳಸಿ ಅತ್ಯಂತ ಆಕರ್ಷಕವಾಗಿ ಸಿದ್ಧಪಡಿಸಿರುತ್ತಾರೆ.
  • ಮೆರವಣಿಗೆ: ಕೆಲವು ಕಡೆಗಳಲ್ಲಿ ಕಾಮನ ದಹನಕ್ಕೂ ಮುನ್ನ ಇಡೀ ಊರಿನಲ್ಲಿ ಈ ಮೂರ್ತಿಗಳ ಭವ್ಯ ಮೆರವಣಿಗೆಯನ್ನು ನಡೆಸಲಾಗುತ್ತದೆ.
  • ರತಿ-ಮನ್ಮಥ: ಕಾಮದೇವನ ಜೊತೆಗೆ ರತಿ ದೇವಿಯ ಮೂರ್ತಿಯೂ ಇರುವುದು ಈ ಆಚರಣೆಯ ವಿಶೇಷ.

ಸರ್ವರಿಗೂ ಹೊಳಿ ಹಬ್ಬದ ಹಾರ್ದಿಕ ಶುಭಾಶಯಗಳು..

ಸಂಪಾದಕರು ಮತ್ತು ಬರಹಗಾರರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು) ಹಾಗೂ ವಿಜಯಕುಮಾರ್ ದರ್ಶನಾಪುರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles