14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಶಿಶುನಾಳ ಮಠಕ್ಕೆ ಪ್ರತಿಷ್ಠಾನ ಸ್ಥಾನಮಾನ: ಸರ್ಕಾರದ ಘೋಷಣೆಗೆ ಅಭಿನಂದನೆ

ಶಿಶುನಾಳ ಮಠಕ್ಕೆ ಪ್ರತಿಷ್ಠಾನ ಸ್ಥಾನಮಾನ: ಸರ್ಕಾರದ ಘೋಷಣೆಗೆ ಅಭಿನಂದನೆ

ಶಿಗ್ಗಾಂವ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು 17ನೇ ಬಜೆಟ್‌ನಲ್ಲಿ ಶಿಗ್ಗಾಂವ ತಾಲೂಕಿನ ಶಿಶುನಾಳ ಗ್ರಾಮದ ಪ್ರಸಿದ್ಧ ಸಂತ ಶಿಶುನಾಳ ಶರೀಫ್ ಹಾಗೂ ಗುರು ಗೋವಿಂದ ಭಟ್ಟರ ಪುಣ್ಯ ಮಠವನ್ನು ಪ್ರತಿಷ್ಠಾನವನ್ನಾಗಿ ಘೋಷಿಸಿರುವುದನ್ನು ಭಕ್ತರು ಹಾಗೂ ಶಿಕ್ಷಣ ಪ್ರೇಮಿಗಳು ಸ್ವಾಗತಿಸಿದ್ದಾರೆ.

ಹಿಂದೂ–ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ರಾಜ್ಯದಾದ್ಯಂತ ವಸತಿ ಸಮೇತ ಶಾಲೆಗಳನ್ನು ಆರಂಭಿಸುವುದಾಗಿ ಸರ್ಕಾರ ಘೋಷಿಸಿದ್ದು, ಕಾರ್ಮಿಕರ ಮಕ್ಕಳ ಶಿಕ್ಷಣಾಭಿವೃದ್ಧಿಗಾಗಿ ವಿಶೇಷ ಶ್ರಮಿಕ ವಸತಿ ಶಾಲೆ ಮಂಜೂರು ಮಾಡಿರುವುದೂ ಗಮನಾರ್ಹವಾಗಿದೆ.

ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಹಾವೇರಿ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಹಾಗೂ ಶಿಗ್ಗಾಂವ–ಸವಣೂರು ಕ್ಷೇತ್ರದ ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಅವರ ಪ್ರಯತ್ನ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ದೂರದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ

ಈ ಹಿನ್ನೆಲೆ ಶಿಗ್ಗಾಂವ ತಾಲೂಕಿನ ಸಮಸ್ತ ಭಕ್ತವೃಂದ, ಶಿಕ್ಷಣ ಪ್ರೇಮಿಗಳು ಹಾಗೂ ಶಿಶುನಾಳ ಗ್ರಾಮದ ನಾಗರಿಕರು ರಾಜ್ಯ ಸರ್ಕಾರಕ್ಕೆ ಹಾಗೂ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಕೆಪಿಸಿಸಿ ಕಾರ್ಮಿಕ ವಿಭಾಗದ ಶಿಗ್ಗಾಂವ ತಾಲೂಕು ಅಧ್ಯಕ್ಷ ಬಸವರಾಜ ಈಶ್ವರಪ್ಪ ವಾಲ್ಮೀಕಿ ಅವರು ಮಾತನಾಡಿ, ಸರ್ಕಾರದ ಈ ನಿರ್ಧಾರದಿಂದ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸೌಲಭ್ಯ ದೊರೆಯಲಿದ್ದು, ಸಂತ ಶಿಶುನಾಳ ಶರೀಫರ ತತ್ವಗಳು ಇನ್ನಷ್ಟು ಜನರಿಗೆ ಪರಿಚಯವಾಗಲಿವೆ ಎಂದು ತಿಳಿಸಿದ್ದಾರೆ.

ವರದಿಗಾರರು: ಸೋಮಶೇಖರ ಲಮಾಣಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles