ಕೆಂಭಾವಿ: ಸುರಪುರ ತಾಲೂಕಿನ ಮಾಲಗತ್ತಿಯಲ್ಲಿ ಡಾ!!ಬಾಬಾ ಸಾಹೇಬ್ ಅಂಬೇಡ್ಕರ್ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾರ್ಥ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಸಿದ್ದಾರ್ಥ ಪದವಿ ಪೂರ್ವ ಕಾಲೇಜ್ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ 2025-26 ನೇ ಸಾಲಿನ ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಶಿವಾನುಭವ ಚರಮೂರ್ತಿ ವಿಶ್ವಜ್ಞಾನಿ ರಾಷ್ಟ್ರೀಯ ಪ್ರಶಸ್ತಿ ವಿಭೂಷಕರಾದ ಪರಮಪೂಜ್ಯ ಶ್ರೀ ಶಾಂತ ರುದ್ರಮುನಿ ಮಹಾಸ್ವಾಮಿಗಳು ನಾಲವಾರ ಕೋರಿ ಸಿದ್ದೇಶ್ವರ ಶಾಖಾ ಮಠ ಕರಡಕಲ್ ಇವರು ಆಶೀರ್ವಚನವನ್ನು ನೀಡಿದರೂ.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಕುಮಾರ ದರ್ಶನಾಪುರವರು ಮಾತನಾಡಿ ಸಂಸ್ಥೆಯ ಅಧ್ಯಕ್ಷರಾದ ಭೀಮ ನಾಟೇಕರ್ ಅವರು ಅನಕ್ಷರಸ್ಥರಾಗಿದ್ದು ಇಂತಹ ಶಿಕ್ಷಣ ಸಂಸ್ಥೆ ತೆಗೆದಿದ್ದು ದೊಡ್ಡ ಸಾಧನೆ ನಾನು ಅನಕ್ಷರಸ್ತನಾಗಿದ್ದರೂ ಪರವಾಗಿಲ್ಲ ನನ್ನ ಊರಿನ ಮತ್ತು ಅಕ್ಕ ಪಕ್ಕದ ಊರಿನ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಈ ಸಂಸ್ಥೆ ತೆಗೆದಿದ್ದಾರೆ ಅದರಿಂದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯಕುಮಾರ್ ದರ್ಶನಾಪುರ ರವರು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಆರ್ ಎಸ್ ಮಾಲಗತ್ತಿಯವರು ಶಿಕ್ಷಣ ಸಂಸ್ಥೆಗಳು ಕಟ್ಟಲು ದೂರ ದೃಷ್ಟಿ ಇರಬೇಕು ವಿನಹ: ವ್ಯಾಪಾರಿಕರಣ ಬುದ್ಧಿ ಇರಬಾರದು ಎಂದು ಹೇಳುತ್ತಾ ಶಿಕ್ಷಣ ಸಂಸ್ಥೆಗಳು ಉತ್ತಮ ಸಂಸ್ಕಾರ ನೀಡಲಿ ಎಂದು ಮಾತನಾಡಿ ಶಿಕ್ಷಣ ಸಂಸ್ಥೆಗೆ ಶುಭ ಹಾರೈಸಿದರು.
ಸಣ್ಣಕ್ಯಪ್ಪ ಸಾಹುಕಾರ ಮಾಲಗತ್ತಿ .ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಹಾರಾಯ ಸಾಹುಕಾರ ಮಾಲಗತ್ತಿ .ಮಾಜಿ ವ್ಯವಸಾಯ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಭೀಮಣ್ಣ ದೊರೆ ಮಾಲಗತ್ತಿ. ಯಾದಗಿರಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ಮಾಲಗತ್ತಿ. ನಿಂಗಣ್ಣ ಸಾಹುಕಾರ ಮಾಲಗತ್ತಿ .ರಮೇಶ ಮಾಲಿ ಪಾಟೀಲ್ ಜೈನಾಪುರ .ಭೀಮಪ್ಪ ಹೊಸಗೇರಿ ಮಾಲಗತ್ತಿ. ಭೀಮಣ್ಣ ತಿಪ್ಪನಟಿಗಿ. ಮಾನಿಂಗಪ್ಪ ಮಳ್ಳಿ ಮಾಲಗತ್ತಿ. ಎಲ್ಐಸಿ ಪ್ರತಿನಿಧಿಗಳಾದ ಶರಣಪ್ಪ ದೇವರಗೊನಾಲ. ಈರಣ್ಣ ಕಕ್ಕಸಗೇರಿ ಕಿರದಳ್ಳಿ. ಕೃಷ್ಣ ಕಿರದಳ್ಳಿ ತಾಂಡ ದೌಲತ್ ಪಟೇಲ್ ಮಾಲಗತ್ತಿ .ಸಂಸ್ಥೆ ಅಧ್ಯಕ್ಷರಾದ ಭೀಮರಾವ್ ನಾಟೆಕಾರ. ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಪಟೇಲ್ .ಬಸವರಾಜ ಕಾರನೂರ ಉಪನ್ಯಾಸಕರು. ಶ್ರೀಶೈಲ್ ಮ್ಯಾಗೇರಿ ಶಿಕ್ಷಕರು .ಆಸ್ಮಾ ಪಿ ಮಕಂದರ. ರೇಣುಕಾ ಬಿ ಕಾರನೂರ. ಹುಲಗಮ್ಮ ದುದೇಕೊಂಡ ಶರಣಮ್ಮ ದುದೇಕೊಂಡ ಅಕ್ಷತಾ ಠಾಕೂರ್ ಶ್ರೀ ಲೇಖ ರಾಜವಂಶಸ್ಥರು ಮುಬೀನ್ ಹಟ್ಟಿ ಇತರರು ಭಾಗವಹಿಸಿದ್ದರು .
ನಿರೂಪಣೆ ಹುಲಗಮ್ಮ ದುದೇಕೊಂಡ ನೆರವೇರಿಸಿದರು ಶಾಲಾ ಕಾಲೇಜಿನ ವರದಿಯನ್ನು ಮುಬಿನ ಹಟ್ಟಿ ಆಸ್ಮಾ ಮಂಕದರ ಬಸವರಾಜ ಕಾರನೂರ ಓದಿದರೂ .ಶ್ರೀಶೈಲ್ ಮ್ಯಾಗೇರಿ ವಂದಿಸಿದರು.

