14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬಾಗಲಕೋಟೆ ಉಪಚುನಾವಣೆ: ಬಿ.ಎಸ್.ವೈ ಅಬ್ಬರದ ಪ್ರಚಾರ; ಚರಂತಿಮಠ ಪರ ಮತಯಾಚನೆ

ಬಾಗಲಕೋಟೆ ಉಪಚುನಾವಣೆ: ಬಿ.ಎಸ್.ವೈ ಅಬ್ಬರದ ಪ್ರಚಾರ; ಚರಂತಿಮಠ ಪರ ಮತಯಾಚನೆ

ಬಾಗಲಕೋಟೆ: ವಿಧಾನಸಭಾ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಧೀಮಂತ ನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಭರ್ಜರಿ ಪ್ರಚಾರ ನಡೆಸಿದರು.
ನಿನ್ನೆ ಕ್ಷೇತ್ರಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರು, ವೀರಣ್ಣ ಚರಂತಿಮಠ ಹಾಗೂ ಯುವ ಮುಖಂಡ ರವಿ ಖಾನಾಪುರ ಅವರೊಂದಿಗೆ ಸಮಾಲೋಚನೆ ನಡೆಸಿದರು. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಚರಂತಿಮಠ ಅವರ ಗೆಲುವು ಅನಿವಾರ್ಯ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಗ್ರಾಮಗಳಲ್ಲಿ ಜನಸಂಪರ್ಕ ಅಭಿಯಾನ:
ಪಕ್ಷದ ಹಿರಿಯ ನಾಯಕರಾದ ಶ್ರೀ ಸಿ.ಟಿ. ರವಿ ಹಾಗೂ ಶ್ರೀ ಸುನೀಲ್ ಕುಮಾರ್ ಅವರು ಕ್ಷೇತ್ರದ ಚಿಕ್ಕ ಮಾಗಿ ಮತ್ತು ಬೇನಾಳ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಗ್ರಾಮದ ಹಿರಿಯರೊಂದಿಗೆ ಕಟ್ಟೆಯ ಮೇಲೆ ಕುಳಿತು ಸಮಾಲೋಚನೆ ನಡೆಸಿದ ನಾಯಕರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಸ್ಮರಿಸಿದರು. ಬಾಗಲಕೋಟೆಯ ಸಮಗ್ರ ಪ್ರಗತಿಗಾಗಿ ‘ಕಮಲ’ದ ಗುರುತಿಗೆ ಮತ ನೀಡಿ ಆಶೀರ್ವದಿಸುವಂತೆ ಗ್ರಾಮಸ್ಥರಲ್ಲಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನಾಯಕರು, “ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾವು ಜನರ ಮುಂದೆ ಬಂದಿದ್ದೇವೆ. ಬಾಗಲಕೋಟೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಆದ್ಯತೆ,” ಎಂದು ತಿಳಿಸಿದರು.

ಈ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಮುಖ ಮುಖಂಡರಾದ ಪ್ರೀತಿ ಹೊನಗುಡಿ, ಹಿಂದುಳಿದ ವರ್ಗಗಳ ನಾಯಕ ವೆಂಕಟೇಶ್ ಉಪ್ಪಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಹಿರಿಯ ನಾಯಕರ ಭೇಟಿಯಿಂದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡುಬಂದಿದ್ದು, ಕ್ಷೇತ್ರದಲ್ಲಿ ಬಿಜೆಪಿ ಅಲೆ ಜೋರಾಗಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles