16.4 C
New York
Tuesday, September 29, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬಡತನ ಮೀರಿ ಭವಿಷ್ಯ ನಿರ್ಮಿಸಿದ ಮಡಿವಾಳಮ್ಮ – 92% ಅಂಕಗಳೊಂದಿಗೆ ಗ್ರಾಮಕ್ಕೆ ಕೀರ್ತಿ

🌟 ಬಡತನ ಮೀರಿ ಭವಿಷ್ಯ ನಿರ್ಮಿಸಿದ ಮಡಿವಾಳಮ್ಮ – 92% ಅಂಕಗಳೊಂದಿಗೆ ಗ್ರಾಮಕ್ಕೆ ಕೀರ್ತಿ
ಸುದ್ದಿ ವರದಿ:
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಮಡಿವಾಳಮ್ಮ ತನ್ನ ದುಡಿಮೆ, ಛಲ ಮತ್ತು ಪರಿಶ್ರಮದ ಮೂಲಕ ಗಮನಾರ್ಹ ಸಾಧನೆ ಮಾಡಿ ಗ್ರಾಮಕ್ಕೆ ಹೆಮ್ಮೆಯನ್ನು ತಂದಿದ್ದಾಳೆ.
ಮಡಿವಾಳಮ್ಮ ತಾಯಿ ಭೀಮಬಾಯಿ ಹಾಗೂ ತಂದೆ ಬಾಲದಂಡಪ್ಪ ದೇಸಾಯಿ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು. ಕುಟುಂಬದಲ್ಲಿ ಆರ್ಥಿಕ ಸಂಕಷ್ಟಗಳ ನಡುವೆಯೇ ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ದುರಂತಗಳು ಒಂದರ ಹಿಂದೆ ಒಂದಾಗಿ ಎದುರಾದವು. ಭೀಮಬಾಯಿ ತಂದೆ ಹನುಮಂತರಾಯ ನಾಯ್ಕೋಡಿ ಗ್ರಾಮ ಪಂಚಾಯಿತಿಯಲ್ಲಿ ಸಿಪಾಯಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ದಿಡೀರ್ ನಿಧನದ ನಂತರ ಭೀಮಬಾಯಿಗೆ ಅನುಕಂಪದ ಆಧಾರದ ಮೇಲೆ ಅದೇ ಕೆಲಸ ನೀಡಲಾಗಿತ್ತು. ನಂತರ ಭೀಮಬಾಯಿಯವರಿಗೂ ಹೃದಯಾಘಾತದಿಂದ ಅಕಾಲಿಕ ನಿಧನ ಸಂಭವಿಸಿತು.
ಈ ಕಠಿಣ ಪರಿಸ್ಥಿತಿಯಲ್ಲಿಯೂ ಮಡಿವಾಳಮ್ಮ ತನ್ನ ವಿದ್ಯಾಭ್ಯಾಸವನ್ನು ಕೈಬಿಡದೆ, ಮಾಲಗತ್ತಿ ಸರಕಾರಿ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ ಅಭ್ಯಾಸ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 92% ಅಂಕಗಳನ್ನು ಪಡೆದು ಸಾಧನೆಗೈದಿದ್ದಾಳೆ. ತಾಯಿ ಇಲ್ಲದ ಸಂಕಷ್ಟದಲ್ಲಿಯೂ ಅವಳ ಈ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವಿದ್ಯಾರ್ಥಿನಿಯ ಈ ಸಾಧನೆಯನ್ನು ಗಮನಿಸಿ ಗ್ರಾಮ ಪಂಚಾಯತ್ ಕಾರ್ಯಾಲಯ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಡಿವಾಳಮ್ಮಗೆ ಒಳ್ಳೆಯ ಗ್ರಂಥವನ್ನು ನೀಡಿ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮೈಬು ಪಟೇಲ್, ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಾದ ವಿಜಯಕುಮಾರ ದರ್ಶನಾಪುರ, ಕರಾವಸಲಿಗಾರರಾದ ಗೊಲ್ಲಾಳಪ್ಪ ದೊರೆ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ, ಭವಿಷ್ಯದಲ್ಲಿ ಉತ್ತಮ ಪ್ರಜೆ ಆಗಿ ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಮಡಿವಾಳಮ್ಮನ ಸಾಧನೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಸಂಕಷ್ಟಗಳ ನಡುವೆಯೂ ಸಾಧನೆ ಸಾಧ್ಯ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles