14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಿವೇದಿತಾ ಶಾಲೆಯಲ್ಲಿ 100 ಗಿಡಗಳ ನೆಡುವ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಿವೇದಿತಾ ಶಾಲೆಯಲ್ಲಿ 100 ಗಿಡಗಳ ನೆಡುವ ಕಾರ್ಯಕ್ರಮ

ಅಥಣಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ 100 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿ ರಾಕೇಶ್ ಅರ್ಜುನವಾಡ, “ಮಕ್ಕಳು ತಾವು ಬೆಳೆದಂತೆ ತಾವು ನೆಟ್ಟಿರುವ ಗಿಡಗಳನ್ನೂ ಪೋಷಿಸಿ ಉಳಿಸಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, “ನೀವು ಕೇವಲ ಗಿಡಗಳನ್ನು ನೆಡುತ್ತಿಲ್ಲ, ಮಕ್ಕಳ ಭವಿಷ್ಯವನ್ನೂ ಬೆಳೆಸುತ್ತಿದ್ದೀರಿ. ಇಂದು ನೆಡಲಾಗುತ್ತಿರುವ ಈ ಗಿಡಗಳು ಮಕ್ಕಳು ತಮ್ಮ ಶಿಕ್ಷಣ ಪೂರ್ಣಗೊಳಿಸುವ ವೇಳೆಗೆ ಸೊಬಗಿನ ಅರಣ್ಯದಂತೆ ಬೆಳೆದು ನಿಲ್ಲಬೇಕು. ಪರಿಸರ ಸಂರಕ್ಷಣೆ ಮತ್ತು ಶಿಕ್ಷಣ ಎರಡೂ ಸಮಾಜದ ಅಭಿವೃದ್ಧಿಗೆ ಅವಶ್ಯಕವಾಗಿವೆ” ಎಂದು ತಿಳಿಸಿದರು.

ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಕೇಶ್ ಮೈಗೂರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಕೇವಲ ಜೂನ್ 5ಕ್ಕೆ ಮಾತ್ರ ಸೀಮಿತವಾಗಬಾರದು. ಪರಿಸರ ನಮಗೆ ಶುದ್ಧ ಗಾಳಿ, ಆಮ್ಲಜನಕ ಹಾಗೂ ಉತ್ತಮ ಜೀವನವನ್ನು ನೀಡುತ್ತದೆ. ಆದ್ದರಿಂದ ಪರಿಸರವನ್ನು ಬೆಳೆಸಿ ಉಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು” ಎಂದು ಹೇಳಿದರು.

ನಂತರ ಮಾತನಾಡಿದ ಸಂತೋಷ ಬಡಕಂಬಿ “ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು 100 ಗಿಡಗಳನ್ನು ನೀಡಿದ್ದಾರೆ. ಅವುಗಳನ್ನು ಪೋಷಿಸಿ ಬೆಳೆಸುವುದು ನಮ್ಮ ಜವಾಬ್ದಾರಿ. ಪ್ರತಿ ಮಗುವಿಗೆ ಒಂದೊಂದು ಗಿಡವನ್ನು ದತ್ತು ನೀಡಲಾಗುವುದು. ಆಯಾ ಗಿಡಗಳ ಮೇಲೆ ಮಕ್ಕಳ ಹೆಸರಿನ ಫಲಕ ಅಳವಡಿಸಿ, ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡುತ್ತೇವೆ. ಜೊತೆಗೆ ನಾವು ಸಹ ಗಿಡಗಳ ಆರೈಕೆಗೆ ವಿಶೇಷ ಗಮನ ಹರಿಸುತ್ತೇವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಿಗಾಡಿ,ಮಾಂತೇಶ ಬಾಡಗಿ ,ವಿದ್ಯಾ ತೇವರಟ್ಟಿ, ಭಾರತಿ ಖಿಲಾರೆ,ಸುಧಾರಾಣಿ ಕೊರೆ, ಗೀತಾ ಕನ್ನೂರ,ಪೂರ್ಣಿಮಾ ಚೌಗಲಾ, ಎಸ್. ಎಸ್.ಗುಡೋಡಗಿ, ಶೈಲಾ ಇಂಗಳೇಶ್ವರ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles