16.4 C
New York
Tuesday, September 29, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟು ಅತ್ಯಗತ್ಯ; ವಿಜಯೇಂದ್ರ ಅವರ ನೇತೃತ್ವದ ಬಗ್ಗೆ ಬಿಜೆಪಿ ಮುಖಂಡ ರವಿ ಖಾನಾಪುರ ವಿಶ್ವಾಸ

ವಿಜಯಪುರ: “ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಸಮರ್ಥರಿದ್ದಾರೆ . ಪಕ್ಷದೊಳಗಿನ ತದ್ವಿರುದ್ಧ ಪರಿಸ್ಥಿತಿ ಮತ್ತು ಕೆಲವರ ವೈಯಕ್ತಿಕ ಮಹತ್ವಾಕಾಂಕ್ಷೆಗಳೇ ಸವಾಲಾಗಿ ಪರಿಣಮಿಸಿವೆ” ಎಂದು ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡರಾದ ರವಿ ಖಾನಾಪುರ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವಿ ಖಾನಾಪುರ ಅವರು, ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸಂಘಟನೆಯ ಬೆಳವಣಿಗೆಯನ್ನು ಅವಲೋಕಿಸಿದ್ದಾರೆ. “ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ನಂತರ ಮೂಡಾ ಹಗರಣ, ವಾಲ್ಮೀಕಿ ಹಗರಣದ ವಿರುದ್ಧದ ಹೋರಾಟ, ಧರ್ಮಸ್ಥಳ ಪಾದಯಾತ್ರೆ, ಮೈಸೂರಿನಿಂದ ಬೀದರ್ ವರೆಗಿನ ಯಶಸ್ವಿ ‘ಜನಾಕ್ರೋಶ ಯಾತ್ರೆ’, ಸದಸ್ಯತ್ವ ಅಭಿಯಾನ ಮತ್ತು ಕಬ್ಬಿನ ಬೆಂಬಲ ಬೆಲೆಗಾಗಿ ನಡೆಸಿದ ಧರಣಿಗಳ ಮೂಲಕ ಪಕ್ಷವನ್ನು ಚುರುಕಾಗಿ ಮುನ್ನಡೆಸುತ್ತಿದ್ದಾರೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಲೆಕ್ಕಾಚಾರಕ್ಕಿಂತ ಪಕ್ಷದ ಹಿತ ಮುಖ್ಯ:
ರವಿ ಖಾನಾಪುರ ಅವರು ತಮ್ಮ ಹೇಳಿಕೆಯಲ್ಲಿ, “ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ, ಈ ಸ್ವಾತಂತ್ರ್ಯವು ಅತಿಯಾದ ಭಿನ್ನಮತ ಮತ್ತು ವೈಯಕ್ತಿಕ ರಾಜಕೀಯಕ್ಕೆ ವೇದಿಕೆಯಾಗಬಾರದು. ಪಕ್ಷದ ಹಿತಕ್ಕಿಂತ ವೈಯಕ್ತಿಕ ಲೆಕ್ಕಾಚಾರಗಳು ಮೇಲುಗೈ ಸಾಧಿಸಿದರೆ ಸಂಘಟನೆಗೆ ಹಾನಿಯಾಗುತ್ತದೆ. ಇಂತಹ ಬೆಳವಣಿಗೆಗಳು ಪಕ್ಷಕ್ಕೆ ಮುಜುಗರ ತರುವಂತಹವು, ಇದಕ್ಕೆ ಸೂಕ್ತ ಸಮಯದಲ್ಲಿ ಕಡಿವಾಣ ಹಾಕಬೇಕಿತ್ತು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ಬಗ್ಗೆ ಸ್ಪಷ್ಟನೆ:
“ವಿಜಯೇಂದ್ರ ಅವರು ಯುವ ನಾಯಕರು ಮತ್ತು ಸಂಘದ ಸಂಸ್ಕಾರ ಪಡೆದವರು. ಅನುಭವದ ದೃಷ್ಟಿಯಿಂದ ಅವರು ಇನ್ನೂ ಸಾಕಷ್ಟು ಕಲಿಯಬೇಕಿರಬಹುದು, ಆದರೆ ಅವರ ಸಂಘಟನಾ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗಿನ ಸಂಪರ್ಕ ಅದ್ಭುತವಾಗಿದೆ.

ಯಡಿಯೂರಪ್ಪನವರಂತಹ ಹಿರಿಯ ನಾಯಕರೂ ಅನೇಕ ಸವಾಲುಗಳನ್ನು ಎದುರಿಸಿ ಬೆಳೆದಿದ್ದಾರೆ. ಅದೇ ರೀತಿಯಲ್ಲಿ ಇಂದಿನ ನಾಯಕತ್ವಕ್ಕೂ ಹಿರಿಯರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಬೆಂಬಲ ಅಗತ್ಯವಾಗಿದೆ” ಎಂದು ರವಿ ಖಾನಾಪುರ ಪ್ರತಿಪಾದಿಸಿದ್ದಾರೆ.

ಒಗ್ಗಟ್ಟಿನ ಕರೆ:
“ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ಎಲ್ಲ ಹಂತದ ನಾಯಕರು ಒಗ್ಗಟ್ಟಿನ ವಾತಾವರಣ ನಿರ್ಮಿಸಿದಾಗ ಮಾತ್ರ ಬಿಜೆಪಿ ಇನ್ನಷ್ಟು ಬಲಿಷ್ಠವಾಗಲಿದೆ. ವ್ಯಕ್ತಿಗಳ ಗೆಲುವು ಅಥವಾ ಸೋಲಿಗಿಂತ ಪಕ್ಷದ ಗೆಲುವು ಮುಖ್ಯವಾಗಬೇಕು. ದೇವದುರ್ಲಭ ಕಾರ್ಯಕರ್ತರ ಬಲ ಹೊಂದಿರುವ ಬಿಜೆಪಿಯು ಒಗ್ಗಟ್ಟಿನಿಂದ ಮುನ್ನಡೆದರೆ ಮಾತ್ರ ಕರ್ನಾಟಕದಲ್ಲಿ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಲು ಸಾಧ್ಯ” ಎಂದು ರವಿ ಖಾನಾಪುರ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles