14.5 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರ ಪಾಸ್ ಪೋರ್ಟ್ ಶುಲ್ಕವನ್ನು ಪರಿಷ್ಕರಣೆ ಶುಲ್ಕ ಹೆಚ್ಚಳ, ತತ್ಕಾಲ್ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೂ ಶುಲ್ಕ ಹೆಚ್ಚಳ

ಕೇಂದ್ರ ಸರ್ಕಾರ ಪಾಸ್ ಪೋರ್ಟ್ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಈ ಹಿಂದೆ 36 ಪುಟಗಳ ಪಾರ್ಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು 1,500 ಶುಲ್ಕ ಪಾವತಿ ಮಾಡಬೇಕಿತ್ತು. ಆದರೆ ಅದನ್ನು ಇದೀಗ 1500 ರಿಂದ 2,500 ಕ್ಕೆ ಏರಿಕೆ ಮಾಡಲಾಗಿದೆ. ಒಂದು ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದೇ ರೀತಿಯಲ್ಲಿ ತತ್ಕಾಲ್ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೂ ಶುಲ್ಕ ಹೆಚ್ಚಳ ಮಾಡಲಾಗಿದೆ. ಪಾಸ್ ಪೋರ್ಟ್ ಹಾನಿ ಹಾಗೂ ಕಳೆದುಕೊಂಡು ಹೊಸತಾಗಿ ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿದೆ.
ಹೊಸ ದಿಲ್ಲಿ: ವಿದೇಶಕ್ಕೆ ತೆರಳಬೇಕು ಎಂದು ಪಾಸ್ ಪೋರ್ಟ್ ಮಾಡಲು ನೀವು ಮುಂದಾದರೆ ಇನ್ಮುಂದೆ ಅದು ಸ್ವಲ್ಪ ತುಟ್ಟಿ ಆಗಲಿದೆ. ಕೇಂದ್ರ ಸರ್ಕಾರ 1980ರ ಪಾಸ್ ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಪಾಸ್ ಪೋರ್ಟ್ ಅರ್ಜಿ ಶುಲ್ಕವನ್ನು ಪರಿಷ್ಕರಿಸಿದೆ.

ತತ್ಕಾಲ್ ಗೆ ಎಷ್ಟು?
ಈ ಹಿಂದೆ ತತ್ಕಾಲ್ ಪಾಸ್ ಪೋರ್ಟ್ ಮಾಡಬೇಕಾದರೆ ಅರ್ಜಿ ಶುಲ್ಕ 3,500 ಇತ್ತು. ಇದೀಗ ಅದನ್ನು 5000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಮೂಲಕ 1,500 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿಗೆ ಬರಲಿದೆ.

ಇನ್ನು 60 ಪುಟಗಳ ಪಾಸ್ ಪೋರ್ಟ್ ಅರ್ಜಿ ಶುಲ್ಕವನ್ನು 2000 ರೂಪಾಯಿಯಿಂದ 3,500 ಕ್ಕೆ ಏರಿಕೆ ಮಾಡಲಾಗಿದೆ. ಇದೇ ವರ್ಗದ ತತ್ಕಾಲ್ ಪಾಸ್ ಪೋರ್ಟ್ ಗಾಗಿ ಅರ್ಜಿ ಶುಲ್ಕವನ್ನು 4000 ರೂಪಾಯಿಂದ 6000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಬರೋಬ್ಬರಿ ಎರಡು ಸಾವಿರ ಏರಿಕೆ ಮಾಡಲಾಗಿದೆ.
36 ಪುಟಗಳ ಪಾಸ್ ಪೋರ್ಟ್ ಕಳೆದುಹೋದಲ್ಲಿ ಅಥವಾ ಹಾನಿಗೊಂಡು ಮತ್ತೆ ಮರು ಪಾಸ್ ಪೋರ್ಟ್ ಮಾಡಿಸಬೇಕಾದರೆ ಈ ಹಿಂದೆ 5000 ರೂಪಾಯಿ ಅರ್ಜಿ ಶುಲ್ಕ ಇತ್ತು. ಇದೀಗ ಅದನ್ನು 7,500 ಕ್ಕೆ ಏರಿಕೆ ಮಾಡಲಾಗಿದೆ.

ಇದೇ ವರ್ಗದಲ್ಲಿ 60 ಪೇಜ್ ಗಳ ಪಾಸ್ ಪೋರ್ಟ್ ಅರ್ಜಿ ಶುಲ್ಕ 6000 ಇತ್ತು. ಅದನ್ನು ಇದೀಗ 8,500 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಇನ್ನು ಹೊಸತಾಗಿ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ಮಾಡುವ 8 ವರ್ಷದ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಶೇ 10 ರಷ್ಟು ರಿಯಾಯಿತಿ ನೀಡಲಾಗಿದೆ.

ಪೌರತ್ವ ಪುರಾವೆ ಪಾಸ್‌ಪೋರ್ಟ್ ಅಲ್ಲ!
ಪಾಸ್ ಪೋರ್ಟ್ ದಾಖಲೆಯನ್ನು ಪೌರತ್ವ ಪುರಾವೆಯಾಗಿ ನೀಡಲು ಸಾಧ್ಯವಿಲ್ಲ. ಈ ಹಿಂದೆಯೂ ಅದು ಪೌರತ್ವವನ್ನು ಸಾಬೀತು ಮಾಡುವ ದಾಖಲೆ ಆಗಿರಲಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಪಾರ್ಸ್ ಪೋರ್ಟ್ ಒಂದು ದಾಖಲೆ ಮಾತ್ರವಾಗಿದೆ. ಅದು ಪೌರತ್ವವನ್ನು ಸಾಬೀತು ಮಾಡುವ ದಾಖಲೆ ಎಂದು ಕಳೆದ 12 ವರ್ಷಗಳಲ್ಲಿ ನಿರ್ಧಾರ ಆಗಿಲ್ಲ. 1967ರ ಪಾಸ್ ಪೋರ್ಟ್ ಕಾಯ್ದೆಯ ಪ್ರಕಾರ ನಾಗರಿಕರಲ್ಲದವರಿಗೂ ಪಾಸ್ ಪೋರ್ಟ್ ನೀಡಬಹುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ವರದಿಗಾರರು: ಕಾಸಿಂ ಸಾಬ್ ಕುಸುಗಲ್

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles