15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಛಾಯಾಗ್ರಾಹಕರು ಎಲೆ ಮರೆಕಾಯಿಯಂತೆ ಇದ್ದಾರೆ : ಚಲನಚಿತ್ರ ನಟ ಶ್ರೀಮುರುಳಿ

ಬೆಂಗಳೂರು, ಜುಲೈ 03 : ಛಾಯಾಗ್ರಾಹಕರ ಕೆಲಸ ಸವಾಲಿನ ಕೆಲಸವಾಗಿದ್ದು, ಎಲೆ ಮರೆಕಾಯಿಯಂತೆ ಕೆಲಸ ನಿರ್ವಹಿಸುತ್ತಾರೆ ಎಂದು ಖ್ಯಾತ ಕನ್ನಡ ಚಲನಚಿತ್ರ ನಟ ಶ್ರೀಮುರುಳಿ ತಿಳಿಸಿದರು.

ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ FOCUS-ON-NEWS 2.0 ಪತ್ರಿಕಾ ಛಾಯಾಗ್ರಾಹಕರಿಗೆ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ, ಸ್ಪರ್ಧೆ ಹಾಗೂ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸುದ್ದಿ ಛಾಯಾಗ್ರಾಹಕರು ವ್ಯಕ್ತಿಗಳು ಯಾರು ಎಂದು ಸಮಾಜಕ್ಕೆ ಪರಿಚಯ ಮಾಡುತ್ತಾರೆ ಎಂದರು.

ಒಂದು ಛಾಯಾ ಚಿತ್ರಕ್ಕೆ ಒಪ್ಪಿಗೆ ನೀಡಲು ಸಾವಿರಾರು ಛಾಯಾಚಿತ್ರ ತೆಗೆಯುತ್ತಾರೆ. ಪರದೆಯಲ್ಲಿ ನೋಡಿ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುತ್ತೇವೆ. ಆದರೆ ಅದರ ಹಿಂದೆ ಛಾಯಾಗ್ರಾಹಕರ ಶ್ರಮ ತುಂಬಾ ಇರುತ್ತದೆ. ನಿಮಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಎಂದರು.

ಛಾಯಾಚಿತ್ರ ಸ್ಪರ್ಧೆಗೆ ಅಂತಿಮ ಪ್ರವೇಶ ಪಡೆದ 50 ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳನ್ನು ವೀಕ್ಷಿಸಿದಾಗ ಸಂತೋಷ, ನೋವು ಎರಡು ಉಂಟಾಯಿತು. ಕೆಲವು ಸಂದೇಶಗಳು ಜೀವನವನ್ನು ಸುಂದರವಾಗಿಸಿ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಮಾತನಾಡಿ, ಛಾಯಾಚಿತ್ರ ಪ್ರದರ್ಶನಗಳನ್ನು ನೋಡಿದರೆ, ಒಂದು ಚಿತ್ರ ಸಾವಿರ ಕಥೆಗಳನ್ನು ಹೇಳುತ್ತದೆ. ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು ಮತ್ತು ಭಾವನೆಗಳನ್ನು ಕ್ಯಾಮಾರದಲ್ಲಿ ಸೆರೆ ಹಿಡಿದು ಜಗತ್ತಿಗೆ ತಲುಪಿಸುವ ಛಾಯಾಗ್ರಾಹಕರು ದೇವರಿದ್ದಂತೆ. ಅವರ ಶ್ರಮ ಮತ್ತು ಶ್ರದ್ಧೆ ಅತ್ಯಂತ ಪ್ರಶಂಸನೀಯ ಎಂದರು.
ಮುಖ್ಯಮಂತ್ರಿಯವರ ಕಚೇರಿಯ ಹಿರಿಯ ಛಾಯಾಗ್ರಾಹಕರಾದ ಕೆಂಪಣ್ಣ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಛಾಯಾಗ್ರಹಕರಾಗಿ ಕರ್ತವ್ಯ ನಿರ್ವಹಿಸಿದ್ದು, ರಾಜ್ಯದ ಪ್ರವಾಸಿ ತಾಣಗಳು ಹಾಗೂ ಶಿಲ್ಪಕಲೆಯ ವೈಶಿಷ್ಟ್ಯವನ್ನು ಪ್ರದರ್ಶಿಸುವಲ್ಲಿ ಅವರ ಕೊಡುಗೆ ಅಪಾರವಾದುದು ಎಂದರು.

ಮಾಧ್ಯಮಕ್ಷೇತ್ರದಲ್ಲಿ ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಛಾಯಾಗ್ರಾಹಕರು ತಮ್ಮ ಕೌಶಲ್ಯವನ್ನು ನವೀಕರಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿz.É ಆಧುನಿಕ ಉಪಕರಣಗಳ ಅವಶ್ಯಕತೆ ಇದೆ. ಕರ್ನಾಟಕ ವಿವಿಧ ಭಾಗಗಳಲ್ಲಿ ಈ ವೃತ್ತಿಯಲ್ಲಿ ತೊಡಗಿರುವವರಿಗೆ ತಂತ್ರಜ್ಞಾನದ ಅರಿವು, ಜಾಗೃತಿ, ತರಬೇತಿ ನೀಡುವುದು ಅವಶ್ಯವಾಗಿದ್ದು, ಅಕಾಡೆಮಿಯು ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ. ಛಾಯಾಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷನೆ ಮಾಡಿದರು. ಪ್ರಥಮ ಬಹುಮಾನ ಕೇರಳದ ಬಿನುರಾಜು, ದ್ವಿತೀಯ ಬಹುಮಾನ ಮುಂಬೈನ ಕುನಾಲ್ ಪಾಟೀಲ್ ಹಾಗೂ ತೃತೀಯ ಬಹುಮಾನ ತೆಲಂಗಾಣದ ವೀರಗೋಣಿ ರಜನಿಕಾಂತ್ ಎಂದು ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸಮಾಜದಲ್ಲಿ ಅವಘಡ ಅಥವಾ ಅನಾಹುತ ಸಂಭವಿಸಿದಾಗ ಎಲ್ಲರೂ ದೂರ ಓಡಿದರೆ ಛಾಯಾಗ್ರಾಹಕರು ಮಾತ್ರ ಸತ್ಯವನ್ನು ಜಗತ್ತಿಗೆ ತೋರಿಸಲು ಘಟನಾ ಸ್ಥಳಕ್ಕೆ ಓಡುತ್ತಾರೆ. ಅವರು ಮಾಧ್ಯಮ ಕ್ಷೇತ್ರದ ಕಣ್ಣುಗಳಿದ್ದಂತೆ ಎಮದರು.
ಈ ಬಾರಿಯ ಪ್ರದರ್ಶನಕ್ಕೆ ದೇಶದಾದ್ಯಂತ ಸುಮಾರು 222ಕ್ಕೂ ಹೆಚ್ಚ ಛಾಯಾಚಿತ್ರಗಳು ಬಂದಿದ್ದವು. ಅಸೋಷಿಯೇಟಡ್ ಪ್ರೆಸ್ ನ ಹಿರಿಯ ಪೋಟೋ ಎಡಿಟ್ ಎಜಾಜ ರಾಹಿ ಅವರುಅತ್ಯಂತ ವೃತ್ತಿಪರವಾಗಿ, ನಿಷ್ಪÀಕ್ಷಪಾತವಾಗಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧ ಸಮರ ಹಾಗೂ ತಂತ್ರಜ್ಞಾನ:
ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿರಿಗಳನ್ನು ತಡೆಯಲು ಅಕಾಡೆಮಿ ಶ್ರಮಿಸುತ್ತಿದೆ. ಎಐ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೃತ್ತಿಪರ ಛಾಯಾಗ್ರಾಹಕರಿಗೆ ಸತ್ಯ ಸಂದತೆ ಮತ್ತು ಧೈರ್ಯ ಅತ್ಯಂತ ಪ್ರಮುಖವಾಗಿದೆ ಎಂದರು.

ಕರ್ನಾಟಕದಲ್ಲಿ ಆರಂಭಗೊಂಡ ಈ ಪ್ರಯತ್ನವು ಈಗ ರಾಷ್ಟ್ರೀಯ ಮಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಏಷ್ಯಾ ಮಟ್ಟದಲ್ಲಿ ಈ ಪ್ರದರ್ಶನವನ್ನು ವಿಸ್ತರಿಸುವ ಆಶಯವನ್ನು ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಛಾಯಾಗ್ರಾಹಕರು ಈ ಕ್ಷೇತ್ರಕ್ಕೆ ಬರಬೇಕೆಂದು ಕರೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles