ಕೈರೋ: ಬಾಸ್‌ನ ಕಿರಿಕಿರಿ ಹಾಗೂ ಯಾವುದೇ ಒತ್ತಡವಿಲ್ಲದೇ ಲಕ್ಷಾಂತರ ರೂಪಾಯಿ ಸಂಬಳ ಸಿಗುವಂತಹ ಕೆಲಸವಿದ್ದರೆ ಎಷ್ಟು ಚೆಂದ ಎಂದು ಹೆಚ್ಚಿನವರು ಬಯಸುತ್ತಾರೆ. ಆದರೆ ಅಂತಹ ಕೆಲಸ ಯಾವುದಾದರು ಇದೆಯಾ ಎಂದು ನೀವೆಲ್ಲ ಅಂದುಕೊಳ್ಳುತ್ತಿರಬಹುದು. ಹೌದು, ಅಂಥಹದೊಂದು ಕೆಲಸವೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ಈಜಿಪ್ಟ್‌ನ ಫರೋಸ್ ಎಂಬ ದ್ವೀಪದಲ್ಲಿರುವ ಅಲೆಕ್ಸಾಂಡ್ರಿಯಾದ ಲೈಟ್‌ಹೌಸ್‌ನ ಕೀಪರ್ ಕೆಲಸಕ್ಕೆ ವರ್ಷಕ್ಕೆ 30 ಕೋಟಿ ರೂ. ಸಂಬಳವಿದೆ ಎಂದು ಹೇಳಲಾಗುತ್ತಿರುವ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಎಷ್ಟು ಸತ್ಯವೆಂಬ ಮಾಹಿತಿ ಇಲ್ಲಿದೆ ನೋಡಿ.
ಕೆಲಸ ಏನು? ಮತ್ತು ಸಂಬಳ ಎಷ್ಟು?
ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಫರೋಸ್ ಎಂಬ ದ್ವೀಪದಲ್ಲಿರುವ ಅಲೆಕ್ಸಾಂಡ್ರಿಯಾದ ಲೈಟ್‌ಹೌಸ್‌ನ ಕೀಪರ್‌ನ ಕೆಲಸ ಖಾಲಿ ಇದೆ ಎಂದು ಹೇಳಲಾಗಿದೆ. ಇದನ್ನು ವಿಶ್ವದ ಅತ್ಯಂತ ಕಷ್ಟವಾದ ಕೆಲಸವೆಂದು ಪರಿಗಣಿಸಲಾಗಿದೆ. ಜುಮನ್ ಲೈಟ್‌ಹೌಸ್‌ನ ಈ ಕೀಪರ್ ಕೆಲಸಕ್ಕೆ ವಾರ್ಷಿಕ ಸಂಬಳ 30 ಕೋಟಿ ರೂಪಾಯಿಯಂತೆ. ಈ ಕೆಲಸದಲ್ಲಿರುವ ದೊಡ್ಡ ಸವಲತ್ತು ಯಾವುದೆಂದರೆ ಇಲ್ಲಿ ಕೆಲಸ ಮಾಡುವ ವ್ಯಕ್ತಿಯು ಯಾವಾಗ ಬೇಕಾದರೂ ಮಲಗಬಹುದು. ಆದರೆ ಲೈಟ್‌ಹೌಸ್‌ನ ಬೆಳಕು ಮಾತ್ರ ಯಾವಾಗಲೂ ಉರಿಯುತ್ತಿರಬೇಕು.
ಈ ಪೋಸ್ಟ್‌ನಲ್ಲಿ ತಿಳಿಸಿದ ಪ್ರಕಾರ, ಇಲ್ಲಿ ಕೆಲಸ ಮಾಡುವ ವ್ಯಕ್ತಿಯು ಲೈಟ್‌ಹೌಸ್‌ನಲ್ಲಿ ಒಬ್ಬಂಟಿಯಾಗಿರಬೇಕು. ಈ ಲೈಟ್‌ಹೌಸ್ ಬಂದರಿನಲ್ಲಿ ನಿರ್ಮಿಸಿರುವುದರಿಂದ ಮೈಲುಗಳಷ್ಟು ದೂರದಿಂದ ಯಾವುದೇ ಮನುಷ್ಯರು ಗೋಚರಿಸುವುದಿಲ್ಲ. ಇಲ್ಲಿ ಮಾತನಾಡಲು ಬೇರೆ ಯಾರೂ ಇರುವುದಿಲ್ಲ. ಈ ಲೈಟ್‌ಹೌಸ್ ಸಮುದ್ರದ ಮಧ್ಯದಲ್ಲಿ ನಿರ್ಮಿಸಲ್ಪಟ್ಟಿರುವುದರಿಂದ ಕೆಲವೊಮ್ಮೆ ಅನೇಕ ಅಪಾಯಕಾರಿ ಬಿರುಗಾಳಿಗಳನ್ನು ಎದುರಿಸಬೇಕಾಗುತ್ತದೆ. ಅಪಾಯಕಾರಿ ಸಮುದ್ರ ಅಲೆಗಳು ಲೈಟ್‌ಹೌಸ್ ಅನ್ನು ಆವರಿಸುತ್ತವೆ. ಇದರಿಂದ ಕೀಪರ್‌ನ ಜೀವಕ್ಕೂ ಅಪಾಯವಿದೆ.
ಈ ಕೆಲಸ ಅಸಲಿವೋ ಅಥವಾ ನಕಲಿಯೋ?
ಮೂಲಗಳ ಪ್ರಕಾರ, ‘ಜುಮನ್ ಲೈಟ್‌ಹೌಸ್’ ಎಂದು ಕರೆಯಲ್ಪಡುವ ಈ ಕಟ್ಟಡವು ಈಗಾಗಲೇ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಇದಕ್ಕೆ ಕೆಲಸಗಾರರ ಅಗತ್ಯವಿಲ್ಲ. ಹಾಗೇ ಆನ್‌ಲೈನ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಉದ್ಯೋಗಗಳ ಕುರಿತು ಅನೇಕ ಪೋಸ್ಟ್‌ಗಳಿವೆ. ಈ ದಾರಿತಪ್ಪಿಸುವ ಪೋಸ್ಟ್‌ಗಳಲ್ಲಿ 30 ಕೋಟಿ ರೂ.ಗಳ ಸಂಬಳವಿದೆ ಎಂದು ಹೇಳಲಾಗಿದೆ. ಫ್ರಾನ್ಸ್‌ನಲ್ಲಿ ಜುಮನ್ ಲೈಟ್‌ನ ಅಧಿಕೃತ ದಾಖಲೆಗಳಿಲ್ಲ.
ವಾಸ್ತವದಲ್ಲಿ, ಲೈಟ್‌ಹೌಸ್ ಕಾರ್ಯಾಚರಣೆಗಳನ್ನು ಸರ್ಕಾರ ನಿರ್ವಹಿಸುತ್ತದೆ ಅಥವಾ ಅವುಗಳ ನಿರ್ವಹಣೆಗೆ ಏಜೆನ್ಸಿಗಳಿವೆ.
ಲೈಟ್ ಸ್ವಿಚ್ ಆನ್-ಆಫ್ ಮಾಡಿದ್ರೆ ಸಿಗುತ್ತೆ ವಾರ್ಷಿಕ ಸಂಬಳ 30 ಕೋಟಿ ರೂ. ಸಂಬಳ!