15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅಕ್ರಮಗಳಿಂದ ಸರಕಾರಕ್ಕೆ ಅತ್ಯಂತ ದೊಡ್ಡ ಮುಜುಗರ ಆಗಿತ್ತು ಅನಿವಾರ್ಯವಾಗಿದ್ದ ನಾಗೇಂದ್ರ ರಾಜೀನಾಮೆ: ಎನ್.ರವಿಕುಮಾರ್

ಬೆಂಗಳೂರು: ಸಚಿವ ನಾಗೇಂದ್ರರ ರಾಜೀನಾಮೆ ಅನಿವಾರ್ಯವಾಗಿತ್ತು ಎಂದು ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ರಾಜೀನಾಮೆಯನ್ನು ಬಿಜೆಪಿ ಸ್ವಾಗತಿಸುತ್ತದೆ. ಅವರು ರಾಜೀನಾಮೆ ಕೊಟ್ಟಿದ್ದೇಕೆ ಎಂಬ ಬಗ್ಗೆ ಸರಕಾರ ಬಾಯಿ ಬಿಡಬೇಕು ಎಂದು ಆಗ್ರಹಿಸಿದರು. ರಾಜೀನಾಮೆ ಕೊಡುವ ಪ್ರಸಂಗ ಯಾಕೆ ಬಂತು ಎಂದು ಪ್ರಶ್ನಿಸಿದರು.
ಬಿಜೆಪಿ- ಜೆಡಿಎಸ್ ಸದನದಲ್ಲಿ ಹೋರಾಟ ಮಾಡಿದ್ದವು. ಬಿಜೆಪಿ ತಾಲ್ಲೂಕು, ಜಿಲ್ಲೆಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಿತ್ತು. 187 ಕೋಟಿ ಮೊತ್ತವನ್ನು ಎಂಜಿ ರಸ್ತೆಯ ಯೂನಿಯನ್ ಬ್ಯಾಂಕಿನಿಂದ ಅಕ್ರಮವಾಗಿ 600 ಖಾತೆಗಳಿಗೆ ಕಳಿಸಿದ್ದರೆಂದು ಒಪ್ಪಿಕೊಂಡಿದ್ದೀರಿ. ಅನೇಕ ಅಧಿಕಾರಿಗಳನ್ನು ಬಂಧಿಸಿದ್ದರು. ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಗಮನ ಸೆಳೆದರು.
ವಿದ್ಯಾರ್ಥಿಗಳ ಸ್ಕಾಲರ್‍ಶಿಪ್, ಸಣ್ಣಪುಟ್ಟ ವ್ಯಾಪಾರಕ್ಕೆ ಸಾಲದ ನೆರವು, ರೈತರಿಗೆ ಕೊಳವೆಬಾವಿ ಮಂಜೂರು ಮಾಡುವುದನ್ನು ತಪ್ಪಿಸಿ ತೆಲಂಗಾಣ ಚುನಾವಣೆ, ಬಳ್ಳಾರಿ ಚುನಾವಣೆಗೆ, ಲ್ಯಾಂಬೊರ್ಗಿನಿ ಕಾರು, ಚಿನ್ನ, ಬೆಳ್ಳಿ ಖರೀದಿಗೆ ಹಣ ಉಪಯೋಗಿಸಿದ್ದರು. ಇದು ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಇದೆಲ್ಲದರ ಪರಿಣಾಮವಾಗಿ ಸರಕಾರಕ್ಕೆ ಅತ್ಯಂತ ದೊಡ್ಡ ಮುಜುಗರ ಆಗಿತ್ತು ಎಂದು ಗಮನ ಸೆಳೆದರು. ಈ ಸಾರಿ ಸದನ ನಡೆದಿರಲಿಲ್ಲ ಎಂದರು.
ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಇಲ್ಲವಾದರೆ ಬಿಜೆಪಿ ಹಾಗೂ ಜೆಡಿಎಸ್ ಇನ್ನಷ್ಟು ಪ್ರಭಾವಿ ಹೋರಾಟವನ್ನು ಮುಂದುವರಿಸಲಿವೆ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ನ್ಯಾಯವಿರೋಧಿ ಸರಕಾರ
ಡಿ.ಕೆ.ಶಿವಕುಮಾರ್ ಅವರ ಈಗಿನ ಹಾಗೂ ಸಿದ್ದರಾಮಯ್ಯರ ಹಿಂದಿನ ಸರಕಾರವು ಸಾಮಾಜಿಕ ನ್ಯಾಯವಿರೋಧಿ ಸರಕಾರ ಎಂದು ಆಕ್ಷೇಪಿಸಿದರು. ಒಬಿಸಿ ಸಮುದಾಯದ ಮಂಕಾಳು ವೈದ್ಯರನ್ನು ಸಚಿವರನ್ನಾಗಿ ಮಾಡಲು ಅವರ ಹೆಸರು ಪಟ್ಟಿಯಲ್ಲಿತ್ತು. ಅವರನ್ನು ಕೈಬಿಟ್ಟು ಹಿಂದುಳಿದವರಿಗೆ ಅನ್ಯಾಯ ಮಾಡದ್ದಾರೆ ಎಂದು ಟೀಕಿಸಿದರು. ಹಿಂದುಳಿದ ಸಮುದಾಯದ ಮಹಿಳೆ ಗಾಯತ್ರಿ ಶಾಂತನಗೌಡರ ಅವಕಾಶವನ್ನೂ ತಪ್ಪಿಸಿದ್ದಾರೆ ಎಂದು ದೂರಿದರು. ಶಿವಣ್ಣನವರ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಇನ್ನು ಮಾಡುವರೇ ಇಲ್ಲವೇ ಗೊತ್ತಿಲ್ಲ ಎಂದು ತಿಳಿಸಿದರು. ಉಪ ಮುಖ್ಯಮಂತ್ರಿ ವಿಚಾರದಲ್ಲಿ ಸತೀಶ್, ಎಂ.ಬಿ.ಪಾಟೀಲ, ಕೆ.ಎಚ್.ಮುನಿಯಪ್ಪ, ಜಮೀರ್ ಅವರಿಗೂ ಸಿದ್ದರಾಮಯ್ಯನವರು ಅನ್ಯಾಯ ಮಾಡಿದ್ದಾಗಿ ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಗನನ್ನೇ ಸಚಿವರನ್ನಾಗಿ ಮಾಡಿದರು. ಯತೀಂದ್ರರನ್ನು ತಪ್ಪಿಸಿ ಶಿವಣ್ಣನವರ ಅವರನ್ನು ಸಚಿವರನ್ನಾಗಿ ಮಾಡಿದ್ದರೆ ಅವರು ಸಮಾಜವಾದದಿಂದ ಬಂದವರೆಂದು ಒಪ್ಪಬಹುದಿತ್ತು ಎಂದು ನುಡಿದರು.

ಗಣತಿ ವರದಿ ಯಾಕೆ ಜಾರಿ ಮಾಡಿಲ್ಲ?
ಕಾಂತರಾಜು ಅವರ ನೇತೃತ್ವದಲ್ಲಿ ಜಾತಿ, ಜನಗಣತಿ ಆದರೂ ಅದನ್ನು ಜಾರಿಗೊಳಿಸಿಲ್ಲ. ಜಯಪ್ರಕಾಶ್ ಹೆಗ್ಡೆ ಅವರ ವರದಿ ಪಡೆದು ಅದನ್ನೂ ಕಡೆಗಣಿಸಿದರು. ಮಧುಸೂದನ ನಾಯ್ಕರ ನೇತೃತ್ವದ ವರದಿ ಪಡೆದರೂ ಅದರ ಜಾರಿ ಮಾಡಲು ಡಿ.ಕೆ.ಶಿವಕುಮಾರರ ಮೇಲೆ ಒತ್ತಡ ಹೇರುತ್ತಿದ್ದಾರೆ. ನೀವ್ಯಾಕೆ ಅದನ್ನು ಮಾಡಿಲ್ಲ ಎಂದು ಟೀಕಿಸಿದರು.

ರೈತರಿಗೆ ಪರಿಹಾರ ಕೊಟ್ಟಿಲ್ಲ..
ಬರ ಅಧ್ಯಯನ ಸರಿಯಿಲ್ಲ; ಇದು ರೈತರಿಗೆ ಮಾಡಿದ ಘೋರ ಅನ್ಯಾಯ. ರೈತರಿಗೆ ಒಂದು ಪೈಸೆಯೂ ಕೊಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಒಂದು ನೀರಾವರಿಯೇತರ ಜಮೀನಿಗೆ ಹೆಕ್ಟೇರಿಗೆ 27 ಸಾವಿರ ರೂ. ಪರಿಹಾರ ಕೊಟ್ಟಿದ್ದರು ಎಂದು ಗಮನ ಸೆಳೆದರು. ನೀರಾವರಿÀ ಜಮೀನಿಗೆ 34,600 ರಷ್ಟು ಕೊಟ್ಟಿದ್ದರು ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles