14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಕಾಳ ಬೆಳಗುಂದಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಯಾದಗಿರಿ : ಸೈದಾಪುರ್ ಸಮೀಪದ ಕಾಳೇ ಬೆಳಗುಂದಿ ಗ್ರಾಮದ ಲ್ಲಿ ಶನಿವಾರ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ಹಾಗೂ ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರದಲ್ಲಿ ಭಾಗವಹಿಸಿದ ಹಿರಿಯ ನಾಗರಿಕರು 90ಕ್ಕೂ ಹೆಚ್ಚು ಜನ ರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಸುಮಾರು 43 ಜನರಿಗೆ ಕನ್ನಡಕವನ್ನು ವಿತರಿಸಲಾಯಿತು.

ಈ ವೇಳೆ ಬೆಳಗುಂದಿ ಗ್ರಾಮದ ಹಿರಿಯ ಮುಖಂಡ ಸಿದ್ದರಾಮಪ್ಪಗೌಡ ಮಾಲಿಪಾಟೀಲ್ ಮಲ್ಹಾರ್. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಯಶವಂತರ ರಾಠೋಡ, ಟಾಟಾ ಟ್ರಸ್ಟ್ ಕಲಿಕೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಮರೆಪ್ಪ ನಂದಳ್ಳಿ ಮಾತನಾಡಿದರು.

ಪಿ ಡಿ ಓ ಶಂಕ್ರಪ್ಪ ನಾಯಕ್, ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಾದ ಗೌರಮ್ಮ, ಗ್ರಾಮದ ಮುಖಂಡರಾದ ಸಿದ್ದರಾಮಪ್ಪಗೌಡ ನಿಲಗಲ್, ರಾಮನಗೌಡ, ಬಸಯ್ಯಸ್ವಾಮಿ,, ಪ್ರಕೃತಿ, ಹಿರಿಯ ಆರೋಗ್ಯ ಸಹಾಯಕರಾದ ವೀರೇಂದ್ರ ಪಾಟೀಲ್ ಹಾಗೂ ಚಂದ್ರನೀಲಾ, ಕಲಿಕೆ ಪ್ರೇರಕರಾದ ಪಾರ್ವತಿ, ರಾಜಪ್ಪ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles