15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಹಿರಿಯ ನಾಗರಿಕರ ಜನ್ಮದಿನ ಸಂಭ್ರಮ

ಹಿರಿಯರಿಗೆ ಸನ್ಮಾನ, ಕೇಕ್ ಕತ್ತರಿಸಿ ಸಂಭ್ರಮ – ಮಕ್ಕಳೊಂದಿಗೆ ಸಂತಸ ಹಂಚಿಕೊಂಡ ಗ್ರಾಮಸ್ಥರು
ಮಾಲಗತ್ತಿ, ಜೂನ್ 30: ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ, ಮಾಲಗತ್ತಿಯಲ್ಲಿ ಟಾಟಾ ಟ್ರಸ್ಟ್‌ನ ಹಿರಿಯ ನಾಗರಿಕರ ಕೇಂದ್ರ ಕಲಿಕೆಯ ಸಹಯೋಗದಲ್ಲಿ ಹಿರಿಯ ನಾಗರಿಕರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಡಿ. ಮಹಿಬೂಬ್ ಪಟೇಲ್ ಅವರು ನೇತ್ರ ಶಸ್ತ್ರಚಿಕಿತ್ಸೆಯ ಕಾರಣದಿಂದ ರಜೆಯಲ್ಲಿದ್ದ ಹಿನ್ನೆಲೆಯಲ್ಲಿ, ಅವರ ಆದೇಶದಂತೆ ಗ್ರಂಥಾಲಯದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಹಿರಿಯ ನಾಗರಿಕರಿಗೆ ಶಾಲು ಹೊದಿಸಿ, ಮುತ್ತಿನ ಹಾರ ಹಾಕಿ ಗೌರವಿಸಲಾಯಿತು. ಬಳಿಕ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೇಕ್, ಚಾಕೊಲೇಟ್ ಹಾಗೂ ಬಾಳೆಹಣ್ಣು ವಿತರಿಸಿ ಸಂತಸ ಹಂಚಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರಾಜಕೀಯ ಮುಖಂಡರು, ಗ್ರಂಥಾಲಯದ ವಿದ್ಯಾರ್ಥಿಗಳು, ಓದುಗರು, ಗ್ರಂಥಾಲಯ ಮೇಲ್ವಿಚಾರಕರು ವಿಜಯಕುಮಾರ ದರ್ಶನಾಪುರ ಮತ್ತು ಹಿರಿಯ ನಾಗರಿಕರ ಕೇಂದ್ರದ ಪ್ರೇರಕರಾದ ಈಶಮ್ಮ ರುದ್ರಸ್ವಾಮಿ ಹಿರೇಮಠ್ ರವರು ಉಪಸ್ಥಿತರಿದ್ದರು, ಹಿರಿಯರ ಆರೋಗ್ಯ, ಗೌರವ ಮತ್ತು ಸಾಮಾಜಿಕ ಬಾಂಧವ್ಯವನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಆತ್ಮೀಯ ವಾತಾವರಣದಲ್ಲಿ ನಡೆಯಿತು. ಹಿರಿಯರ ಮುಖದಲ್ಲಿ ಮೂಡಿದ ಸಂತಸದ ನಗು ಹಾಗೂ ಮಕ್ಕಳೊಂದಿಗೆ ಬೆರೆತು ಸಂಭ್ರಮಿಸಿದ ಕ್ಷಣಗಳು ಎಲ್ಲರ ಮನಸೂರೆಗೊಂಡವು. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಹಿರಿಯ ನಾಗರಿಕರಿಗೆ ಗೌರವ ನೀಡುವ ಉತ್ತಮ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles