15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿಯಲ್ಲಿ ಹಿರಿಯ ನಾಗರಿಕರ ಜನ್ಮದಿನ ಸಂಭ್ರಮ – ದ್ಯಾವಣ್ಣ ಪೂಜಾರಿಗೆ ಅದ್ಧೂರಿ ಗೌರವ ಸನ್ಮಾನ

ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿಯಲ್ಲಿ ಹಿರಿಯ ನಾಗರಿಕರ ಜನ್ಮದಿನ ಸಂಭ್ರಮ – ದ್ಯಾವಣ್ಣ ಪೂಜಾರಿಗೆ ಅದ್ಧೂರಿ ಗೌರವ ಸನ್ಮಾನ
ಯಾದಗಿರಿ:
ಸುರಪುರ: ಮಾಲಗತ್ತಿ, ಜುಲೈ 27:
ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿಯಲ್ಲಿ, ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ನಾಗರಿಕರ ಸಾಂತ್ವನ ಕೇಂದ್ರದ ಆಶ್ರಯದಲ್ಲಿ ಹಿರಿಯ ನಾಗರಿಕರಾದ ಶ್ರೀ ದ್ಯಾವಣ್ಣ ಪೂಜಾರಿ ಅವರ 71ನೇ ಜನ್ಮದಿನವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಊರಿನ ಯುವಕರಾದ ಶ್ರೀ ಕೃಷ್ಣ ಆಣಿಕೇರಿ ಅವರು ದ್ಯಾವಣ್ಣ ಪೂಜಾರಿ ಅವರಿಗೆ ಶಾಲು ಹೊದಿಸಿ, ಮುತ್ತಿನ ಹಾರ ಹಾಕುವ ಮೂಲಕ ಗೌರವ ಸನ್ಮಾನ ಸಲ್ಲಿಸಿದರು. ಬಳಿಕ ದೀಪ ಪ್ರಜ್ವಲನೆ ನೆರವೇರಿಸಿ, ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಲಾಯಿತು. ಉಪಸ್ಥಿತರಿದ್ದ ಗಣ್ಯರು ಹಾಗೂ ಹಿರಿಯ ನಾಗರಿಕರು ಕೇಕ್ ತಿನ್ನಿಸುವ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಲಗತ್ತಿಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ದೊರೆ ಅವರು ಮಾತನಾಡಿ, ದ್ಯಾವಣ್ಣ ಪೂಜಾರಿ ಅವರಿಗೆ ದೇವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸುಖ-ಶಾಂತಿ ಕರುಣಿಸಲಿ ಎಂದು ಹಾರೈಸಿದರು.
ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿಯ ಮೇಲ್ವಿಚಾರಕರಾದ ವಿಜಯಕುಮಾರ್ ದರ್ಶನಾಪುರ ಅವರು ಎಲ್ಲರನ್ನು ಸ್ವಾಗತಿಸಿ, ದ್ಯಾವಣ್ಣ ಪೂಜಾರಿ ಅವರಿಗೆ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು. ಹಿರಿಯ ನಾಗರಿಕರ ಪ್ರೇರಕರಾದ ಈಶಮ್ಮ ರುದ್ರಸ್ವಾಮಿ ಹಿರೇಮಠ ಅವರು ಸಹ ಶುಭ ಹಾರೈಸಿ, ಹಿರಿಯರ ಅನುಭವ ಸಮಾಜಕ್ಕೆ ಅಮೂಲ್ಯವಾದ ಸಂಪತ್ತು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಎಂಬಿಕೆ, ಹನುಮಂತರಾಯ ಪೂಜಾರಿ, ಸಂಗಣ್ಣ ಹಣಿಕೇರಿ, ಊರಿನ ಹಿರಿಯರು, ಯುವಕರು, ಗ್ರಂಥಾಲಯದ ಓದುಗರು ಹಾಗೂ ಶಾಲಾ ಮಕ್ಕಳು ಭಾಗವಹಿಸಿ ದ್ಯಾವಣ್ಣ ಪೂಜಾರಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಕೇಕ್, ಸಿಹಿ ತಿನಿಸುಗಳು ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ಎಲ್ಲರೂ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಶುಭ ಹಾರೈಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಹಾಗೂ ಅವರ ಜೀವನ ಸಾಧನೆಯನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles