ಯಾದಗೀರಿ: RDPR ಜಿಲ್ಲಾ ಆರೋಗ್ಯ ಕೇಂದ್ರ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ಕಲಿಕಾ ಟ್ರಸ್ಟ್ ಸಯೋಗದೊಂದಿಗೆ ಗ್ರಾಮ ಪಂಚಾಯತ್ ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಚಪಾಟ್ಲಾದಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ರಾಧಿಕಾ ರೆಡ್ಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಲಿಕಾ ಟಾಟಾ ಟ್ರಸ್ಟ್ ಸಂಸ್ಥೆ ಹಿರಿಯ ನಾಗರಿಕರ ಜೀವನ ಸಂತಸದಾಯಕ ಗ್ರಾಮ ಹಿರಿಯರ ಕೇಂದ್ರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು ಎಲ್ಲಾ ಹಿರಿಯ ನಾಗರಿಕರು ಸದುಉಪಯೋಗ ಕೊಳ್ಳಬೇಕೆಂದು ಹಿರಿಯ ನಾಗರಿಕರಿಗೆ ತಿಳಿಸಿದರು ಹಾಗೂ ಗ್ರಾಮ ಪಂಚಾಯತ್ ವತಿಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ತಿಳಿಸಿದರು.
ತದನಂತರ ಗುಲಾಮ ಸುಬಾನಿ ಸಮುದಾಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾನಸಿಕ ಆರೋಗ್ಯ ಕುರಿತು ಹಿರಿಯರ ಜೊತೆ ಚರ್ಚೆ ನಡೆಸಿದರು.
ಶ್ರೀ ಡಾ.ಮತ್ತೀನ್ ಪಾಷಾ HIO ತಜ್ಞರು ಕಣ್ಣುಗಳ ಮಹತ್ವದ ಕುರಿತು ಚರ್ಚಿಸಿದರು. ತದನಂತರ ಹಿರಿಯರಿಗೆ ಬಿ.ಪಿ. ಶುಗರ್ ಮತ್ತು ಕಣ್ಣಿನ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಿದರು. ಈ ವೇಳೆ ಆರೋಗ್ಯ ಶಿಬಿರದಲ್ಲಿ ಶ್ರೀಮತಿ ರಾಧಿಕಾ ರೆಡ್ಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಮತ್ತು ಶ್ರೀಮತಿ ಶರಣಮ್ಮ ನಾಯ್ಕೋಡಿ ಅಧ್ಯಕ್ಷರು ಗ್ರಾಮ ಪಂಚಾಯತ್ ಚಾಪಟ್ಲಾ, ಶ್ರೀ ಗುಲಾಮ್ ಸುಬಾನಿ ಸಮುದಾಯ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಶ್ರೀ ಸಯ್ಯದ್ ಮತಿನ್ ಪಾಶ Hio ತಜ್ಞರು, ಕಾಶಪ್ಪ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ನಜೀಮಾ ಬೇಗಮ್ ಮೇಲ್ವಿಚಾರಕರು ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಚಪಟ್ಲಾ, PHCO, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸದಸ್ಯರು ಪ್ರೇರಕರಾದ ಶ್ರೀಮತಿ ಲಕ್ಷ್ಮಿ ಹಾಗೂ 114 ಹಿರಿಯ ನಾಗರಿಕರು ಭಾಗವಹಿಸಿದ್ದರು.
ವಿಶೇಷವಾಗಿ ಈ ಕಾರ್ಯಕ್ರಮದ ಪ್ರಯೋಜಕರಾದ ಶ್ರೀ ಅಲ್ಲಾವುದ್ದೀನ್ ಕಲಿಕಾ ಟಾಟಾ ಟ್ರಸ್ಟ್ ಇದೇ ನಾಗರಿಕರ ಸಂತಸದಾಯಕ ಕೇಂದ್ರ ಜಿಲ್ಲಾ ಜಿಲ್ಲಾ ಸಂಯೋಜಕರು ಈ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

