17 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಉದ್ಯೋಗ ವಂಚಿತ ಕಾಮನಕೇರಿ ಗ್ರಾಮದ ಜನರಿಗೆ ವಿಬಿ ರಾಮ್ ಜಿ ಬಲ: ನಿರಂತರ ಹೋರಾಟಕ್ಕೆ ಸಿಕ್ಕಿತು ಜಯ

  • ಬಸವ ಜನ್ಮಭೂಮಿ ಬಸವನ ಬಾಗೇವಾಡಿ ತಾಲ್ಲೂಕಿನ ಕಾಮನಕೇರಿಯಲ್ಲಿ ವಿಬಿ-ರಾಮ್‌ಜಿ ಯೋಜನೆಯಡಿ ಕೆರೆ ಕಾಮಗಾರಿ ಆರಂಭ
  • ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು
  • ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಅಹವಾಲು ಆಲಿಸಿದ ಅಮರೇಶಣ್ಣ ಕಾಮನಕೇರಿ

ಕಾಮನಕೇರಿ (ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ): ಹಲವು ದಿನಗಳಿಂದ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದ ಕಾಮನಕೇರಿ ಗ್ರಾಮದ ಕೂಲಿ ಕಾರ್ಮಿಕರಿಗೆ ಕೊನೆಗೂ ನೆಮ್ಮದಿ ದೊರಕಿದೆ. ಗ್ರಾಮದ ಕೆರೆಯಲ್ಲಿ ವಿಬಿ-ರಾಮ್‌ಜಿ ಯೋಜನೆಯಡಿ ಕಾಮಗಾರಿ ಆರಂಭಗೊಂಡಿದ್ದು, ಗ್ರಾಮಸ್ಥರಿಗೆ ಉದ್ಯೋಗದ ಅವಕಾಶ ಸೃಷ್ಟಿಯಾಗಿದೆ.

ಕಾಮಗಾರಿ ಆರಂಭವಾದ ಸ್ಥಳಕ್ಕೆ ಪತ್ರಕರ್ತ, ಸಾಮಾಜಿಕ ಹೋರಾಟಗಾರರು, ಆನ್‌ಲೈನ್ ಹಂಟ್ ಆ್ಯಪ್ ಸಂಸ್ಥಾಪಕರು ಹಾಗೂ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣ ಸಮಿತಿ (ರಿ.) ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಉದ್ಯೋಗ, ಜಾಬ್ ಕಾರ್ಡ್ ಹಾಗೂ ಕಾಮಗಾರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಕಾರ್ಮಿಕರು ನೂರಕ್ಕೂ ಹೆಚ್ಚು ಮಂದಿ ಕೆಲಸಕ್ಕೆ ಸಿದ್ಧರಿದ್ದರೂ ಕೇವಲ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮರೇಶಣ್ಣ ಕಾಮನಕೇರಿ, ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ (ಬಿಒಟಿ) ಅವರೊಂದಿಗೆ ಸ್ಥಳದಲ್ಲೇ ಚರ್ಚಿಸಿ, ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹರಿಗೆ ತ್ವರಿತವಾಗಿ ಜಾಬ್ ಕಾರ್ಡ್ ವಿತರಿಸಿ, ಮುಂದಿನ ಶುಕ್ರವಾರದೊಳಗೆ ಪ್ರತಿಯೊಬ್ಬ ಅರ್ಹ ಕಾರ್ಮಿಕರಿಗೂ ಕೆಲಸ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಗ್ರಾಮದ ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ತಲುಪಬೇಕು ಎಂದು ಒತ್ತಾಯಿಸಿದ ಅವರು, “ಸರ್ಕಾರ ನೀಡುವ ಕೂಲಿಗೆ ಪ್ರಾಮಾಣಿಕವಾಗಿ ದುಡಿಯಿರಿ. ನಿಮ್ಮದೇ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಮಿಕರ ಮೇಲಿದೆ” ಎಂದು ಕಾರ್ಮಿಕರಿಗೆ ಕಿವಿಮಾತು ಹೇಳಿದರು.

ಕಾಮಗಾರಿ ಆರಂಭಿಸುವ ಪ್ರಕ್ರಿಯೆಯಲ್ಲಿ ಆರಂಭಿಕ ಹಂತದಲ್ಲಿ ಅಸಹಕಾರ ತೋರಿದ ಸಂಬಂಧಪಟ್ಟ ಅಧಿಕಾರಿಗಳ ನಡೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ತಡವಾದರೂ ಕಾಮಗಾರಿ ಆರಂಭಕ್ಕೆ ಸಹಕರಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರವಿಂದ್ರ ನಾಯ್ಕೋಡಿ, ಅಶೋಕ, ರಾಜು ಯಾಳಗಿ, ಕುಮಾರ ಕಂಟೆಪ್ಪಗೋಳ, ಅನಿಲ್ ನಾಯ್ಕೋಡಿ, ವಿಕಾಸ, ಹಳ್ಳೆಪ್ಪ ಕಂಟೆಪ್ಪಗೋಳ, ರಾಮಣ್ಣ ಹಾಗೂ ಬಸವರಾಜ ಉಪಸ್ಥಿತರಿದ್ದರು.

ವಿಶೇಷ ವರದಿ: ಸ್ಥಳೀಯ ಪ್ರತಿನಿಧಿ, ಬಸವನ ಬಾಗೇವಾಡಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles