15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಎಂ.ಕೆ ಹುಬ್ಬಳ್ಳಿ ಯಲ್ಲಿ  ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಜನರು ಏಕತೆಯಿಂದ ಮೆರವಣಿಗೆಯನ್ನು ನಡೆಸಿ, ಅದ್ದೂರಿಯಾಗಿ ಆಚರಿಸಿದರು..

ಹಿಂದೂ ಮುಸ್ಲಿಂ ಸೌಹಾರ್ದತೆ ಸಾರಿದ ಹಬ್ಬ ಮೊಹರಂ

ಕಿತ್ತೂರು,ಎಂ.ಕೆ ಹುಬ್ಬಳ್ಳಿ:  ಮೊಹರಂ ಹಬ್ಬವು ಕೇವಲ ಒಂದು ಧಾರ್ಮಿಕ ಆಚರಣೆಯಾಗಿರದೆ, ಸೌಹಾರ್ದತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ,
ಮೊಹರಂ ಹಬ್ಬದ ಪ್ರಯುಕ್ತ ತಾಲೂಕಿನ ಎಂ.ಕೆ ಹುಬ್ಬಳ್ಳಿ  ಪಟ್ಟಣದಲ್ಲಿ  ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು ಈ ಹಬ್ಬವನ್ನು ಬೇಧ ಭಾವ ತೊರೆದು ಅದ್ದೂರಿಯಾಗಿ ಪ್ರತಿಷ್ಠಾನ ಮಾಡಿದ ಮೂರ್ತಿಗಳನ್ನು ಮತ್ತು ಪಂಜುಗಳನ್ನು ಹಿಡಿದುಕೊಂಡು ಅದ್ದೂರಿಯಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು..

ಹಬ್ಬದ ಇತಿಹಾಸ –
ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು. ಇದು ಇಸ್ಲಾಮಿಕ್ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಈ ತಿಂಗಳ 10ನೇ ದಿನವನ್ನು ‘ಅಶುರಾ’ ಎಂದು ಕರೆಯಲಾಗುತ್ತದೆ. ಇದು ಇತಿಹಾಸ, ತ್ಯಾಗ ಮತ್ತು ಧಾರ್ಮಿಕ ಆಚರಣೆಗಳಿಗೆ ಹೆಸರುವಾಸಿಯಾಗಿದೆ.
ಮುಖ್ಯ ಇತಿಹಾಸ ಮತ್ತು ಮಹತ್ವ
ತ್ಯಾಗದ ಸಂಕೇತ: ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ ಪರಿವಾರದವರು ಕರ್ಬಲಾ ಯುದ್ಧದಲ್ಲಿ ಹುತಾತ್ಮರಾದ ದಿನವನ್ನು ಸ್ಮರಿಸಲಾಗುತ್ತದೆ.
ಶೋಕಾಚರಣೆ: ಶಿಯಾ ಮುಸ್ಲಿಮರು ಮೊಹರಂ ತಿಂಗಳ ಮೊದಲ ಹತ್ತು ದಿನಗಳ ಕಾಲ ಕಪ್ಪು ಬಟ್ಟೆಗಳನ್ನು ಧರಿಸಿ, ಮೆರವಣಿಗೆಗಳನ್ನು ನಡೆಸಿ ದುಃಖವನ್ನು ಆಚರಿಸುತ್ತಾರೆ. ಉಪವಾಸ ಮತ್ತು
ಪ್ರಾರ್ಥನೆ: ಮುಸ್ಲಿಮರು ಈ ತಿಂಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ, ಉಪವಾಸ ವ್ರತವನ್ನು
ಆಚರಿಸುತ್ತಾರೆ

ವಿಶೇಷ ಆಚರಣೆಗಳು
ಧಾರ್ಮಿಕ ಸಭೆಗಳು: ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಧರ್ಮಗುರುಗಳು ಇಮಾಮ್ ಹುಸೇನ್ ಅವರ ಜೀವನ ಮತ್ತು ಸಂದೇಶಗಳ ಬಗ್ಗೆ ಉಪನ್ಯಾಸ ನೀಡುತ್ತಾರೆ.
ದಾನ-ಧರ್ಮ: ಬಡವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಈ ತಿಂಗಳಲ್ಲಿ ಅತ್ಯಂತ ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ.

ಕರ್ನಾಟಕದಲ್ಲಿ ಮೊಹರಂ
ಉತ್ತರ ಕರ್ನಾಟಕ ಭಾಗದಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಂ ಬಾಂಧವರು ಯಾವುದೇ ಭೇದಭಾವವಿಲ್ಲದೆ ಅತ್ಯಂತ ಸಡಗರ ಮತ್ತು ಸೌಹಾರ್ದತೆಯಿಂದ ಆಚರಿಸುತ್ತಾರೆ. ಪಂಜಾ (ದೇವರು) ಸ್ಥಾಪನೆ, ಅಲಾಯಿ ಕುಣಿತ ಹಾಗೂ ವಿಶೇಷ ಜಾನಪದ ಹಾಡುಗಳನ್ನು ಹಾಡುವುದು ಇಲ್ಲಿನ ಪ್ರಮುಖ ವಿಶೇಷತೆಯಾಗಿದೆ.

ಮೆರವಣಿಗೆಯ ದೃಶ್ಯಗಳು

ವರದಿಗಾರರು: ಗೌರಿಶಂಕರ ಹೆಗಡೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles