14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕಲಬುರಗಿಯ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಇಮಾಮ್ ಹುಸೈನ್ (ರ.ಅ) ಶಹಾದತ್ ಸ್ಮರಣಾರ್ಥ ಸಭೆ

ಕಲಬುರಗಿಯ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಇಮಾಮ್ ಹುಸೈನ್ (ರ.ಅ) ಶಹಾದತ್ ಸ್ಮರಣಾರ್ಥ ಸಭೆ

ಕಲಬುರಗಿ: ಐತಿಹಾಸಿಕ ಹಜರತ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ (ರ.ಅ) ದರ್ಗಾದಲ್ಲಿ ಶನಿವಾರ, ಮಗ್ರಿಬ್ ನಮಾಜಿನ ನಂತರ ಸಯ್ಯಿದುಶ್ ಶುಹದಾ ಹಜರತ್ ಇಮಾಮ್ ಹುಸೈನ್ (ರ.ಅ) ಅವರ ಶಹಾದತ್ ಸ್ಮರಣಾರ್ಥ ಮರ್ಕಝಿ ಜಲ್ಸಾ-ಎ-ಶಹಾದತ್ ಭವ್ಯವಾಗಿ ನಡೆಯಿತು.

ಈ ಕಾರ್ಯಕ್ರಮವನ್ನು ಮಜ್ಲಿಸ್ ಮುಹಿಬ್ಬಾನ್-ಎ-ಮುಸ್ತಫಾ ವ ಅಹ್ಲೆ ಬೈತ್ ವ ಅವ್ಲಿಯಾ-ಎ-ಕಿರಾಮ್, ಅಹ್ಲೆ ಸುನ್ನತ್ ವಲ್ ಜಮಾಅತ್, ಕಲಬುರಗಿ ವತಿಯಿಂದ, ಹಜರತ ಖ್ವಾಜಾ ಬಂದೇ ನವಾಜ್ ದರ್ಗಾದ ಸಜ್ಜಾದಾ ನಶೀನ್ ಹಾಫಿಜ ಡಾ. ಸಯ್ಯದ್ ಮುಹಮ್ಮದ್ ಅಲಿ ಅಲ್-ಹುಸ್ಸೇನಿ ಅವರ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ದರ್ಗಾ ಹಜ್ರತ್ ಖ್ವಾಜಾ ಬಂದೇನವಾಜ್ (ರ.ಅ) ಅವರ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಜ್ರತ್ ಡಾ. ಹಾಫಿಜ್ ಸಯ್ಯದ್ ಮುಹಮ್ಮದ ಅಲಿ ಅಲ್-ಹುಸ್ಸೇನಿ ಸಾಹೇಬ್ ಕಿಬ್ಲಾ ಅವರು, ಹಜ್ರತ್ ಇಮಾಮ್ ಹುಸೈನ್ (ರ.ಅ) ಅವರ ಮಹಾನ್ ಶಹಾದತ್ ಸತ್ಯ, ಧರ್ಮನಿಷ್ಠೆ, ತ್ಯಾಗ ಮತ್ತು ಇಸ್ಲಾಂ ಧರ್ಮದ ಶ್ರೇಷ್ಠತೆಯ ಶಾಶ್ವತ ಸಂಕೇತವಾಗಿದೆ ಎಂದು ಹೇಳಿದರು. ಅಹ್ಲೆ ಬೈತ್‌ರ ಮೇಲಿನ ಪ್ರೀತಿ ಪ್ರತಿಯೊಬ್ಬ ಮುಸ್ಲಿಮನ ಇಮಾನದ ಅವಿಭಾಜ್ಯ ಅಂಗವಾಗಿದ್ದು, ಮೊಹರಂ ತಿಂಗಳನ್ನು ಗೌರವ, ಶ್ರದ್ಧೆ ಹಾಗೂ ಆಧ್ಯಾತ್ಮಿಕ ಭಾವನೆಯೊಂದಿಗೆ ಆಚರಿಸಬೇಕು ಎಂದು ಅವರು ತಿಳಿಸಿದರು.

ಹೈದರಾಬಾದ್‌ನ ಮೌಲಾನಾ ಸಯ್ಯದ್ ಕಲೀಮುಲ್ಲಾ ಅಮೀನಿ ಕಾಶಿಫ್ ಪಾಶಾ ಹಾಗೂ ಸುನ್ನಿ ದಾವತ್-ಎ-ಇಸ್ಲಾಮಿಯ ಮೌಲಾನಾ ಅಲ್-ಹಾಜ್ ಸಯ್ಯದ್ ಅಮೀನ್ ಖಾದ್ರಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಸಯ್ಯಿದುಶ್ ಶುಹದಾ ಹಜರತ್ ಇಮಾಮ್ ಹುಸೈನ್ (ರ.ಅ) ಅವರ ಅಪೂರ್ವ ತ್ಯಾಗವನ್ನು ಸ್ಮರಿಸಿ, ಕರ್ಬಲಾದ ಶಾಶ್ವತ ಸಂದೇಶವಾದ ಸತ್ಯ, ನ್ಯಾಯ, ತಾಳ್ಮೆ, ತ್ಯಾಗ ಮತ್ತು ಧರ್ಮನಿಷ್ಠೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಸಯ್ಯದ್ ಮುಸ್ತಫಾ ಅಲ್-ಹುಸೈನಿ, ಸಯ್ಯದ್ ಮುಹಮ್ಮದ್ ಸಯ್ಯದ್ ಹುಸೈನಿ, ಸಯ್ಯದ್ ಆಲಂ ಹುಸೈನಿ, ಸಯ್ಯದ್ ಮುರ್ತಝಾ ಅಮೀನಿ, ಸಯ್ಯದ್ ಆಕಿಬ್ ಹುಸೈನಿ, ಮೌಲಾನಾ ಸಯ್ಯದ್ ಅಬ್ದುಲ್ ರಶೀದ್, ಮೌಲಾನಾ ಮುಹಮ್ಮದ್ ತನ್ವೀರ್ ಅಹ್ಮದ್ ಅಶ್ರಫಿ (ಪ್ರಾಂಶುಪಾಲರು, ದಾರುಲ್ ಉಲೂಮ್ ರೀನಿಯಾ ಬಂದೇ ನವಾಜ್) ಹಾಗೂ ಮುಫ್ತಿ ಹಾಫಿಜ್ ಸಯ್ಯದ್ ಅಬ್ದುಲ್ ರಊಫ್ (ಸದರ್ ಮುಫ್ತಿ, ದಾರುಲ್ ಇಫ್ತಾ, ದಾರುಲ್ ಉಲೂಮ್ ರೀನಿಯಾ ಬಂದೇ ನವಾಜ್) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮೊಹಮ್ಮದ್ ಅಬ್ದುಲ್ ಬಾಸಿತ್ (ಕಾರ್ಯದರ್ಶಿ, ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾ), ಸಯ್ಯದ್ ನಿಯಾಜ್, ಅಹ್ಸನ್ ಜಾಗೀರ್‌ದಾರ್, ಬಸವಕಲ್ಯಾಣದ ಹಜರತ್ ರಾಹೆ ಬಾಗ್ ಸವಾರ್ ದರ್ಗಾದ ಸಜ್ಜಾದಾ ನಶೀನ್, ಮೌಲಾನಾ ಅಬ್ದುಲ್ ಹಕೀಮ್ ಖಾದ್ರಿ, ಮೌಲಾನಾ ಫಝಲ್ ಅಹ್ಮದ್ ಸುಹ್ರವರ್ದಿ, ಮೌಲಾನಾ ಜಮೀಲ್ ಅಹ್ಮದ್ ಸಿದ್ದೀಖಿ, ಮೌಲಾನಾ ಹಾಫಿಜ್ ಗುಲಾಮ್ ಮುಹಮ್ಮದ್ ಶರಫಿ, ಸಯ್ಯದ್ ತಯ್ಯಬ್ ಅಲಿ ಯಾಕೂಬಿ, ಮೊಹಮ್ಮದ್ ಇಸ್ಮಾಯಿಲ್ ಕಾರಿಗರ್ ಸೇರಿದಂತೆ ಹಲವಾರು ಉಲಮಾಗಳು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪ್ರೊ ಅಬ್ದುಲ್ ಹಮೀದ್ ಅಕ್ಬರ್ ಅವರು ನಾತ್-ಎ-ಪಾಕ್ ಪಠಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles