“ಕಾನೂನು ರಕ್ಷಣೆಯನ್ನು ಅಸ್ತ್ರವಾಗಿ ಬಳಸುವವರಿಗೆ ಎಚ್ಚರಿಕೆ: ಜಿಲ್ಲಾ ಪಂಚಾಯತ್ ವತಿಯಿಂದ ವಸೂಲಾತಿ ನೋಟಿಸ್ ಜಾರಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ
ಯಾದಗಿರಿ: ಏ:28 : ಸರ್ಕಾರದ ಸುತ್ತೋಲೆ, ದಿನಾಂಕ: 05.03.2021 ರ ಅನ್ವಯ, ಮೊದಲು ದೂರು ಸಲ್ಲಿಸಿ ನಂತರ ಹಿಂಪಡೆದ ಹಾಗೂ ಸುಳ್ಳು ದೂರು ನೀಡಿದ 24 ದೂರುದಾರರಿಗೆ *1,57,475 (ರೂಪಾಯಿ ಒಂದು ಲಕ್ಷ ಐವತ್ತೇಳು ಸಾವಿರದ ನಾಲ್ಕು ನೂರಾ ಎಪ್ಪತ್ತೈದು) ವಸೂಲಾತಿ ನೋಟಿಸ್ ಜಾರಿ ಮಾಡಲಾಗಿದ್ದು, ಉತ್ತರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.
ಸಮಾಧಾನಕರ ಉತ್ತರ ಸಲ್ಲಿಸದಿದ್ದಲ್ಲಿ, ಮುಂದೆಅವರು ಸಲ್ಲಿಸುವ ಯಾವುದೇ ದೂರನು ಪರಿಗಣಿಸದಂತೆ ಜಿಲ್ಲಾ ಪಂಚಾಯತ್ ಮತ್ತು ಅಧೀನ ಕಚೇರಿಗಳಲ್ಲಿ ಅವರು ಸಲ್ಲಿಸುವ ಯಾವುದೇ ದೂರನ್ನು ಪರಿಗಣಿಸದಂತೆ ಜಿಲ್ಲಾ ಪಂಚಾಯತ್ ಮತ್ತು ಅಧೀನ ಕಚೇರಿಗಳಲ್ಲಿ ದಾಖಲಿಸಲಾಗುವ ಕಪ್ಪು ಪಟ್ಟಿಗೆ (Blacklist) ಸೇರಿಸಲಾಗುವುದು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಯಾದಗಿರಿ ಮತ್ತು ಅಧೀನ ಕಚೇರಿಗಳಿಗೆ ಸಲ್ಲಿಸುವ ದೂರುಗಳನ್ನು ಸರ್ಕಾರದ ನಿಯಮಾವಳಿಯನ್ವಯ ಅಗತ್ಯ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನೈಜ ಸಮಸ್ಯೆಗಳಿರುವ ಪ್ರತಿಯೊಬ್ಬ ಪ್ರಜೆಗೂ ಜಿಲ್ಲಾ ಪಂಚಾಯತ್ ಯಾವಾಗಲೂ ಸ್ಪಂದಿಸಲು ಸಿದ್ಧವಾಗಿದ್ದು, ನ್ಯಾಯಯುತ ಆಡಳಿತ ನೀಡುವ ನಮ್ಮ ಬದ್ಧತೆ ಅಚಲವಾಗಿದೆ. ಆಡಳಿತ ಯಂತ್ರದ ಸುಗಮ ಕಾರ್ಯನಿರ್ವಹಣೆ ಮತ್ತು ನಿಜವಾದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಮತ್ತು ವಿಶ್ವಾಸ ಅತ್ಯಂತ ಅವಶ್ಯಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಯಾದಗಿರಿ ಮತ್ತು ಅಧೀನ ಕಚೇರಿಗಳು ಜನಸಾಮಾನ್ಯರ ಅಭಿವೃದ್ಧಿಗಾಗಿ ಸದಾ ಕಾರ್ಯಪ್ರವೃತ್ತವಾಗಿದ್ದು, ಸರ್ಕಾರದ ವಿವಿಧ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಕರ್ತವ್ಯ ಲೋಪ ಕಂಡುಬಂದಲ್ಲಿ, ಸಾರ್ವಜನಿಕರು ಸಂಬಂಧಿತ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ.
ಜಿಲ್ಲಾ ಪಂಚಾಯತ್ ಬಾಗಿಲುಗಳು ನೈಜ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬ ಪ್ರಜೆಗೂ ಸದಾ ತೆರೆದಿರುತ್ತವೆ. ವಾರ್ಷಿಕವಾಗಿ ಸರಾಸರಿ 3,000 ದೂರುಗಳನ್ನು ಸ್ವೀಕರಿಸಿ, ಅಗತ್ಯ ತನಿಖೆ ನಡೆಸಿ, ಸಾಬೀತಾದ ಆರೋಪಗಳ ಬಗ್ಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿಯಲ್ಲಿ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಿರಂತರವಾಗಿ ಸಾಗಿದೆ. ಕ್ರಮವನ್ನು ಮತ್ತು ಶಿಸ್ತು ಸೇವಾ ನಿಯಮಗಳಲ್ಲಿ ನಿಗದಿಪಡಿಸಿದ ರೀತಿಯಲ್ಲಿಯೇ ಅನುಸರಿಸಬೇಕಾಗುವುದರಿಂದ ಈ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶದ ಅಗತ್ಯವಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಈ ಕಾನೂನು ರಕ್ಷಣೆಯನ್ನೇ ಕಾನೂನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಸಾಕ್ಷಿ-ಪುರಾವೆಗಳಿಲ್ಲದೆ ಸುಳ್ಳು ಹಾಗೂ ದುರುದ್ದೇಶಪೂರಿತ ದೂರುಗಳನ್ನು ಸಲ್ಲಿಸಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ, ನಂತರ “ತಪ್ಪು ತಿಳುವಳಿಕೆ’ ಅಥವಾ “ವೈಯಕ್ತಿಕ ಕಾರಣ” ನೀಡಿ ದೂರನ್ನು ಹಿಂಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ.
ಇದಕ್ಕೆ ಒಂದು ಗಮನಾರ್ಹ ನಿದರ್ಶನವೆಂದರೆ ಶ್ರೀ ಪ್ರಭುಗೌಡ ವಕ್ರಾಣಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ಸೇನೆ(ನೋ), ಗಾಂಧಿನಗರ, ಯಾದಗಿರಿ ಎನ್ನುವ ದೂರುದಾರರು ದಿನಾಂಕ:13.11.2023ರ ಪತ್ರದ ಮೂಲಕ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ದೂರು ಸಲ್ಲಿಸಿರುತ್ತಾರೆ.
ಮಾನ್ಯ ಸಚಿವರು ಸದರಿ ದೂರಿನ ಕುರಿತು ತನಿಖೆಗಾಗಿ ಜಿಲ್ಲಾ ಪಂಚಾಯತ್‌ಗೆ ನಿರ್ದೇಶಿಸಿದ ನಂತರ, ತನಿಖಾ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ಸದರಿ ದೂರುದಾರರು ದಿನಾಂಕ:14.07.2025ರಂದು ದೂರು ಹಿಂಪಡೆದಿರುತ್ತಾರೆ. ಇದು ರಾಜ್ಯ ಸರ್ಕಾರದ ಸಚಿವಾಲಯದ ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳ ಘೋರ ಅಪವ್ಯಯವಾಗಿದೆ.
ಇಂತಹ ದುರ್ಬಳಕೆಯನ್ನು ತಡೆಯಲು ಭಾರತೀಯ ನ್ಯಾಯ ಸಂಹಿತೆ (BNS) 2023ರ ಅನ್ವಯ ಕಾನೂನು ಕ್ರಮ ಕೈಗೊಳ್ಳಬಹುದಾಗಿದ್ದು, ಸಂಬಂಧಿತ ನಿಬಂಧನೆಗಳು ಈ ಕೆಳಗಿನಂತಿವೆ:
BNS ಕಲಂ 212 (ಸುಳ್ಳು ಮಾಹಿತಿ ನೀಡುವುದು): ಸರ್ಕಾರಿ ಸೇವಕರ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ದೂರು ಸಲ್ಲಿಸಿದ್ದಲ್ಲಿ ಆರು ತಿಂಗಳುಗಳವರೆಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.
BNS ಕಲಂ 217 (ಸಾರ್ವಜನಿಕ ಸೇವಕನಿಗೆ ತಿಳಿದೇ ಸುಳ್ಳು ಮಾಹಿತಿ ನೀಡುವುದು): 1 ರ್ಷದವರೆಗೆ ಕಾರಾಗೃಹ ಶಿಕ್ಷೆ ಅಥವಾ 10,000 ದಂಡ ಅಥವಾ ಎರಡೂ.
BNS ಸೆಕ್ಷನ್ 248 – ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಆರೋಪ- 5 ರ್ಷದವರೆಗೆ ಕಾರಾಗೃಹ ಶಿಕ್ಷೆ ಅಥವಾ 200000 ದಂಡ ಅಥವಾ ಎರಡೂವಿಧಿಸಲಾಗುತ್ತದೆ.
ಇಂತಹ ದುರ್ಬಳಕೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳು:ಪ್ರತಿ ದೂರು ತನಿಖೆಗೆ ರೂ5,000, ರೂ20,000 ಅಥವಾ ಹೆಚ್ಚಿನ ಪ್ರಮಾಣದ ಸರ್ಕಾರಿ ಹಣ ವ್ಯಯವಾಗುತ್ತದೆ (ಲೇಖನ ಸಾಮಗ್ರಿ, ವಾಹನ ವೆಚ್ಚ, ಸಿಬ್ಬಂದಿ ಸಮಯ, ಮುದ್ರಣ, ಪತ್ರ ವ್ಯವಹಾರ ಇತ್ಯಾದಿ). ದೂರು ಹಿಂಪಡೆದಾಗ ಈ ಎಲ್ಲಾ ಶ್ರಮ ನಿರರ್ಥಕವಾಗುತ್ತದೆ.
ಶೇ.10ರಷ್ಟು ಸುಳ್ಳು ದೂರುದಾರರ ಪ್ರಕರಣಗಳಿಗೆ, ಶೇ. 90ರಷ್ಟು ನೈಜ ದೂರುಗಳಿಗೆ ನೀಡಬೇಕಾದಷ್ಟೇ ಸಮಯ ವ್ಯಯವಾಗುತ್ತಿದೆ.
ನಿರಪರಾಧಿ ಅಧಿಕಾರಿ-ನೌಕರರಿಗೆ ಮಾನಸಿಕ ಯಾತನೆ, ಕೌಟುಂಬಿಕ ಒತ್ತಡ ಮತ್ತು ಬಡ್ತಿ- ವರ್ಗಾವಣೆ ಪ್ರಕ್ರಿಯೆಗಳಿಗೆ ಅಡ್ಡಿ.
ಕಾಮಗಾರಿಗಳು ಮತ್ತು ಹಣ ಬಿಡುಗಡೆ ಸ್ಥಗಿತಗೊಳ್ಳುವುದರಿಂದ ಗ್ರಾಮೀಣ ಜನತೆ ತಮ್ಮ ಯೋಜನಾ ಲಾಭದಿಂದ ವಂಚಿತರಾಗುತ್ತಾರೆ.
ಅನಗತ್ಯ ತನಿಖೆಗಳಿಂದಾಗಿ ಕಚೇರಿಯ ಇತರ ಪ್ರಮುಖ ಅಭಿವೃದ್ಧಿ ಕೆಲಸಗಳು ಮತ್ತು ನೈಜ ಫಲಾನುಭವಿಗಳ ಕಾರ್ಯಗಳು ವಿಳಂಬವಾಗುತ್ತಿವೆ.
ಇಂತಹ ಪ್ರವೃತ್ತಿಯಿಂದ ಸಾರ್ವಜನಿಕರ ದೃಷ್ಟಿಯಲ್ಲಿ ಕಚೇರಿಯ ಘನತೆ ಕುಗ್ಗುತ್ತಿದೆ ಹಾಗೂ ಇಲಾಖೆಯ ಅಧಿಕಾರಿ/ ನೌಕರರ ಗೌರವಕ್ಕೆ ಚ್ಯುತಿ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 15 ಸೇಇವಿ 2021, ದಿನಾಂಕ: 05.03.2021 ರ ಅನ್ವಯ, ಮೊದಲು ದೂರು ಸಲ್ಲಿಸಿ ನಂತರ ಹಿಂಪಡೆದ ಹಾಗೂ ಸುಳ್ಳು ದೂರು ನೀಡಿದ 24 ದೂರುದಾರರಿಗೆ *1,57,475 (ರೂಪಾಯಿ ಒಂದು ಲಕ್ಷ ಐವತ್ತೇಳು ಸಾವಿರದ ನಾಲ್ಕು ನೂರಾ ಎಪ್ಪತ್ತೈದು) ವಸೂಲಾತಿ ನೋಟಿಸ್ ಜಾರಿ ಮಾಡಲಾಗಿದ್ದು, ಉತ್ತರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.ಸಮಾಧಾನಕರ ಉತ್ತರ ಸಲ್ಲಿಸದಿದ್ದಲ್ಲಿ ಮುಂದೆ ಅವರು ಸಲ್ಲಿಸುವ ಯಾವುದೇ ದೂರನ್ನು ಪರಿಗಣಿಸಿದ ಕತೆ ಜಿಲ್ಲಾ ಪಂಚಾಯತ್ ಮತ್ತು ಅಧೀನ ಕಚೇರಿ ಗಳಲ್ಲಿ ದಾಖಲಿಸಲಾಗುವ ಕಪ್ಪು ಪಟ್ಟಿಗೆ (Blacklist) ಗೆ ಸೇರಿಸಲಾಗುವುದು.
ನೈಜ ಸಮಸ್ಯೆಗಳಿರುವ ಪ್ರತಿಯೊಬ್ಬ ಪ್ರಜೆಗೂ ಜಿಲ್ಲಾ ಪಂಚಾಯತ್ ಯಾವಾಗಲೂ ಸ್ಪಂದಿಸಲು ಸಿದ್ಧವಾಗಿದ್ದು, ನ್ಯಾಯಯುತ ಆಡಳಿತ ನೀಡುವ ನಮ್ಮ ಬದ್ಧತೆ ಅಚಲವಾಗಿದೆ. ಆಡಳಿತ ಯಂತ್ರದ ಸುಗಮ ಕಾರ್ಯನಿರ್ವಹಣೆ ಮತ್ತು ನಿಜವಾದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಮತ್ತು ವಿಶ್ವಾಸ ಅತ್ಯಂತ ಅವಶ್ಯಕ ಎಂದುಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.
ವಸೂಲಾತಿ ನೋಟಿಸ್ ಜಾರಿ ಮಾಡಿದ ಸಾರ್ವಜನಿಕ ದೂರುದಾರರ ವಿವರ ಈ ಕೆಳಗಿನಂತಿದೆ
ಶಹಾಪುರ ವಾಣಿ ದಿನಪತ್ರಿಕೆ, ಯಾದಗಿರಿ ಆವೃತ್ತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಾದಗಿರಿ ಶ್ರೀ ಈರಣ್ಣ ಹಾದಿಮನಿ, ವಸೂಲಾತಿ ಮೊತ್ತ -6080 ರೂ., ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಶ್ರೀ ಯಂಕಪ್ಪ ತಂದೆ ದೊಡ್ಡಶೇಷಪ್ಪ ಮಕಾಶಿ ವಸೂಲಾತಿ ಮೊತ್ತ-7250ರೂ., ಕರ್ನಾಟಕ ರಕ್ಷಣಾ ಸೇನೆ (ನೊ) ಜಿಲ್ಲಾ ಘಟಕ ಯಾದಗಿರಿ ಜಿಲ್ಲಾಧ್ಯಕ್ಷ ಪ್ರಭುಗೌಡ ವಕ್ರಾಣಿ,- ವಸೂಲಾತಿ ಮೊತ್ತ 5750, ಶಹಾಪುರ ತಾಲೂಕು ದಲಿತ ಸಂಘರ್ಷ ಸಮಿತಿ, ತಾಲೂಕು ಸಂಯೋಜಕ ಶ್ರೀ ಲಕ್ಷ್ಮಣ್ ಆರ್. ಹಳಿಸಗರ, -ವಸೂಲಾತಿ ಮೊತ್ತ -6500, ಯಾದಗಿರಿ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ – ಸೈದಪ್ಪ ಎನ್ ಕಣಜಿಕರ್- ವಸೂಲಾತಿ ಮೊತ್ತ -5735 ರೂ., ಜಯಕರ್ನಾಟಕ ಜನಪರ ವೇದಿಕೆ ಹುಣಸಗಿ ತಾಲೂಕು ಅಧ್ಯಕ್ಷ – ಪ್ರಭು ಗೌಡ ಬಿ ಪೋತರೆಡ್ಡಿ- ವಸೂಲಾತಿ ಮೊತ್ತ-
8150 ರೂ, ಯಾದಗಿರಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಸಂಚಾಲಕ ಶ್ರೀ ಮರೆಪ್ಪ ಕ್ರಾಂತಿ- ವಸೂಲಾತಿ ಮೊತ್ತ -6500, ಶಹಾಪುರ ತಾಲೂಕಿನ ಗೋಗಿ ಶ್ರೀ ಮಹ್ಮದ್ ಇಸ್ಮಾಯಿಲ್ – ವಸೂಲಾತಿ ಮೊತ್ತ -6530, ಮಕ್ಸೂದ್ ಅಹ್ಮದ್ ಇವರಿಂದ – 6530 ರೂ ವಸೂಲಾತಿ ಮೊತ್ತವಿದೆ.
ಅದರಂತೆ ಖಾನಾಪುರ ಗ್ರಾಮ ಪಂಚಾಯತ್ ಸದಸ್ಯ ಮರಲಿಂಗಪ್ಪ ತಂದೆ ಮರೆಪ್ಪ ಪುಟ್ಟಿಗೆನೂರ ವಸೂಲಾತಿ ಮೊತ್ತ 5600 ರೂ,ಗೋಗಿಕೋನಾ ಗ್ರಾಮ ಪಂಚಾಯತ್ ಸದಸ್ಯ ನಬಿ ತಂದೆ ಗುಡಸಾಬ ವಸೂಲಾತಿ ಮೊತ್ತ 6530 ರೂ., ಸಾವೂರ್ ನ ಕಳಸಪ್ಪ ಎನ್ ಎಂ- ವಸೂಲಾತಿ ಮೊತ್ತ 6500 ರೂ,ಅರಕೇರಾ ಮಲ್ಲಪ್ಪ ಭೀಮಪ್ಪ ಉರಸಲ್ ವಸೂಲಾತಿ ಮೊತ್ತ -5360 ರೂ, ವಿಭೂತಿ ಹಳ್ಳಿಯ ಭೀಮಾ ಶಂಕರ್ ನಾಟೇಕರ್ 6200 ರೂ,ವಸೂಲಾತಿ ಮೊತ್ತ, ರಾಜನಕೊಳ್ಳೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋತಿಬಾಯಿ ಲಕ್ಷ್ಮಣ ರಾಠೋಡ – ವಸೂಲಾತಿ ಮೊತ್ತ 7850 ರೂ,ಕೊಳ್ಳೂರು ಲಕ್ಷ್ಮೀಕಾಂತ ನಾಯಕ್ ವಸೂಲಾತಿ ಮೊತ್ತ 6500 ರೂ ,ದರಿಯಾಪುರ ದೇವಿಂದ್ರಪ್ಪ ತಂದೆ ನಿಂಗಪ್ಪ ವಸೂಲಾತಿ ಮೊತ್ತ -6950 ರೂ, ಬೀರನೂರ ವಿಶ್ವ ರಾಧ್ಯ ರಾಮೋಜಿ ವಸೂಲಾತಿ ಮೊತ್ತ 6080ರೂ, ಯಾದಗಿರಿ ವರ್ತೂರ್ ಪ್ರಕಾಶ್ ಯುವ ಘರ್ಜನೆ (ರಿ) ಜಿಲ್ಲಾ ಘಟಕ ಅಧ್ಯಕ್ಷ ಐಕೂರು ಅಶೋಕ್ ವಸೂಲಾತಿ ಮೊತ್ತ -6080ರೂ, ಸುರಪುರ ವಿಶ್ವ ಮಾನವ ಡಾ.ಭೀಮರಾವ್ ಅಂಬೇಡ್ಕರ್ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಸವರಾಜ್ ಸಿ ಹಾದಿಮನಿ ವಸೂಲಾತಿ ಮೊತ್ತ 6100ರೂ, ಜಿಲ್ಲಾಧ್ಯಕ್ಷ ಬಲಭೀಮಪ್ಪ ಬಿ.ದೊಡ್ಡಮನಿ ವಸೂಲಾತಿ ಮೊತ್ತ 7250 ರೂ, ಸುರಪುರ ಕಲ್ಯಾಣ ಸಂಜೆ ವರದಿಗಾರ ಹಣಮಂತ್ರಾಯ ತಂದೆ ಮಹಾದೇವಪ್ಪ ಪೋಲಿಸ್ ಪಾಟೀಲ್ ವಸೂಲಾತಿ ಮೊತ್ತ 8000ರೂ, ಶಹಾಪುರ ದಲಿತ ಸೇನೆ ತಾಲೂಕು ಅಧ್ಯಕ್ಷ ಹುಸೇನ್ ದೊಡ್ಮನಿ ವಸೂಲಾತಿ ಮೊತ್ತ 6800 ಹಾಗೂ ಯಾದಗಿರಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಿಶ್ವರಾಜ ಛಲವಾದಿ ಇವರಿಂದ ವಸೂಲಾತಿ ಮೊತ್ತ ರೂ 6650ಗೆ . ವಸೂಲಾತಿ ನೋಟಿಸ್ ಜಾರಿಗೊಳಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

